Actress Jayalalithaa: ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜಯಲಲಿತಾ ತಮ್ಮದೇಯಾದ ವಿಶೇಷ ಛಾಪು ಮೂಡಿಸಿದ ದಿಟ್ಟ ಹೆಣ್ಣು ಮಗಳು. ತಮಿಳುನಾಡು ಜನರ ಪ್ರೀತಿಯ ʼಅಮ್ಮʼನಾಗಿ ಗುರುತಿಸಿಕೊಂಡು ಶಿಖರದಷ್ಟು ಯಶಸ್ಸು ಗಳಿಸಿದ ಜಯಲಲಿತಾ ಹುಟ್ಟಿದ್ದು ಕರ್ನಾಟಕದಲ್ಲಿ. ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ 1948ರ ಫೆಬ್ರವರಿ 24ರಂದು ಜನಿಸಿದರು. ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ತನ್ನ ತವರು ನೆಲದ ವಿರೋಧವನ್ನು ಕಟ್ಟಿಕೊಂಡು ತಮಿಳುನಾಡು ರಾಜಕೀಯದ ಪ್ರಬಲ ಶಕ್ತಿಯಾಗಿ ಮೆರೆದವರು.
ಇಂತಹ ಗಟ್ಟಿಗಿತ್ತಿ ಜಯಲಲಿತಾ ಅವರು ಅದೊಂದು ದಿನ ಅಸೆಂಬ್ಲಿಯಲ್ಲಿ ಕುಳಿತು ಚರ್ಚಿಸುತ್ತಿದ್ದಾಗ ಓರ್ವ ವ್ಯಕ್ತಿ ಅವರ ಸೀರೆಗೆ ಕೈಹಾಕಿದ್ದ. ಆತನಿಗೆ ʼಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿʼ ಅನ್ನೋ ರೀತಿ ಪಾಠ ಕಲಿಸಿದ್ದರು. ಹೆಣ್ಣನ್ನು ಕೆಣಕಿದರೆ ಏನಾಗುತ್ತದೆ ಎಂಬುದನ್ನು ಜಯಲಲಿತಾ ಅವತ್ತೇ ಇಡೀ ಜಗತ್ತಿಗೆ ತೋರಿಸಿದ್ದರು. ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಜಯಲಲಿತಾ ಹಾಗೂ ಕರುಣಾನಿಧಿ ಕದನದ್ದೇ ವಿಶೇಷ ಚಾಪ್ಟರ್ ಇದೆ. ಅವರ ರಾಜಕೀಯ ಕಾಲಘಟ್ಟದಲ್ಲಿ ತಮಿಳುನಾಡಿನಾದ್ಯಂತ ಇವರ ಕದನವು ತೀವ್ರ ಸಂಚಲನವನ್ನು ಸೃಷ್ಟಿಸಿತ್ತು.
ಇವರ ನಡುವೆ ಯಾವ ರೀತಿಯ ವೈಮನಸ್ಸು ಇತ್ತೆಂದರೆ ಒಬ್ಬರ ಮುಖ ಮತ್ತೊಬ್ಬರು ನೋಡುವುದಕ್ಕೇ ಇಷ್ಟಪಡುತ್ತಿರಲಿಲ್ಲ. ಅಷ್ಟರಮಟ್ಟಕ್ಕೆ ಈ ಇಬ್ಬರು ದಿಗ್ಗಜ ನಾಯಕರು ಹಗೆ ಸಾಧಿಸುತ್ತಿದ್ದರು. ಇದಕ್ಕೆ ಮುಖ್ಯ ಕಾರಣವೇನು ಅಂತಾ ನೋಡಿದ್ರೆ, ಅದು ಕರುಣಾನಿಧಿಯವರು ಮಂಡಿಸಿದ ಬಜೆಟ್. ಹೌದು, ಕರುಣಾನಿಧಿ ಬಜೆಟ್ ಮಂಡಿಸುತ್ತಿದ್ದಾಗ ಅದರಲ್ಲಿನ ಅಂಕಿ-ಅಂಶಗಳನ್ನು ತಪ್ಪಾಗಿ ಉಲ್ಲೇಖಿಸಿದ ಕಾರಣ ತುಂಬಿದ ಅಸೆಂಬ್ಲಿಯಲ್ಲೇ ಜಯಲಲಿತಾ ಅವರು ಕರುಣಾನಿಧಿಯನ್ನು ಕ್ರಿಮಿನಲ್ ಅಂತಾ ಜರಿಯುತ್ತಾರೆ. ಜಯಲಲಿತಾ ಧ್ವನಿಗೆ ಜೊತೆಗೂಡಿದ ಅವರ ಬೆಂಬಲಿಗರು ಸಹ ಕ್ರಿಮಿನಲ್ ಕ್ರಿಮಿನಲ್ ಅಂತಾ ಕರುಣಾನಿಧಿಗೆ ಹೀಯಾಳಿಸಿದ್ದರು. ಇದರಿಂದ ತೀವ್ರ ಮುಜುಗರವನ್ನು ಅನುಭವಿಸಿದ ಕರುಣಾನಿಧಿ ಸಪ್ಪೆಯಾಗಿದ್ದರು. ಈ ವೇಳೆ ತಮ್ಮ ನಾಯಕನ ಮುಖ ಕಳೆಗುಂದಿದ್ದನ್ನು ಗಮನಿಸಿದ ಡಿಎಂಕೆ ಬೆಂಬಲಿಗರು ಜಯಲಲಿತಾ ಮತ್ತು ಆಕೆಯ ಬೆಂಬಲಿಗರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು.
ಇದೇ ವೇಳೆ ಕರುಣಾನಿಧಿಯ ಬೆಂಬಲಿಗ ದೊರೆಮುರುಗನ್ ಎಂಬಾತ ಜಯಲಲಿತಾರ ಬಳಿ ಬಂದು ತಲೆಗೆ ಹೊಡೆದು, ಅವರ ಸೀರೆಯನ್ನು ಜಗ್ಗಿಬಿಡುತ್ತಾರೆ. ಪರಿಣಾಮ ಸೆರಗಿಗೆ ಹಾಕಿದ್ದ ಪಿನ್ ಸಮೇತ ಬ್ಲೌಸ್ ಕೂಡ ಹರೆದುಬಿಡುತ್ತದೆ. ಯಾವ ಸ್ಥಳವನ್ನು ದೇವರಮನೆ ಅಂತಾ ಕರೆಯಲಾಗುತ್ತದೋ ಅದೇ ಸ್ಥಳದಲ್ಲಿ ಒಬ್ಬ ಹೆಣ್ಣುಮಗಳ ಮೇಲೆ ಈ ರೀತಿ ದೌರ್ಜನ್ಯವಾಗಿದ್ದು ದೊಡ್ಡಮಟ್ಟದ ಸಂಚಲವನ್ನು ಸೃಷ್ಟಿಸುತ್ತದೆ. ಅಂದು ಜಯಲಲಿತಾ ಅವರ ಸ್ಥಿತಿ ತುಂಬಾ ಶೋಚನೀಯವಾಗಿತ್ತು. ಈ ಘಟನೆಯಿಂದ ಘಾಸಿಗೊಳಗಾದ ಜಯಲಲಿತಾ ಅಳುತ್ತಲೇ ಅಸೆಂಬ್ಲಿಯಿಂದ ಹೊರಬಂದರು. ಅವರ ಸ್ಥಿತಿಯನ್ನು ಕಂಡ ಮಾಧ್ಯಮಗಳು ಕೂಡ ಶಾಕ್ ಆಗಿದ್ದವು. ತಮಗಾದ ಅಪಮಾನ ತಾಳಲಾರದೆ ಜಯಲಲಿತಾ ಅವರು ಒಂದೇ ಸಮ ಕಣ್ಣೀರಿಡುತ್ತಲೇ ಇದೇ ರಾಜಕೀಯ? ಇದೇನಾ ಮಹಿಳೆಗೆ ನೀವು ನೀಡುತ್ತಿರುವ ಗೌರವ? ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಮದುವೆಯಾಗಿದ್ದ ನಟನೊಂದಿಗೆ 15 ವರ್ಷ ಡೇಟಿಂಗ್.. 53 ವಯಸ್ಸಾದ್ರೂ ಕನ್ಯೆಯಾಗಿ ಉಳಿದ ಸ್ಟಾರ್ ನಟಿ!
ಅಂದೇ ಶಪತ ಮಾಡಿದ್ದ ದಿಟ್ಟೆ ಜಯಲಲಿತಾ ಕರುಣಾನಿಧಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನನ್ನನ್ನು ಈ ಪರಿಸ್ಥಿತಿಗೆ ತಂದ ಡಿಎಂಕೆ ನಾಯಕರಿಗೆ ಹಾಗೂ ಕರುಣಾನಿಧಿಗೆ ಶಾಪ ತಟ್ಟೇ ತಟ್ಟುತ್ತದೆ. ನಾನು ಓರ್ವ ಮಹಿಳೆ ಅಂತಾ ಈ ರೀತಿ ಅಪಮಾನ ಮಾಡಲಾಗಿದೆ. ಆದರೆ ಮುಂದೊಂದು ದಿನ ಇದೇ ಅಸ್ಲೆಂಬ್ಲಿಗೆ ಮುಖ್ಯಮಂತ್ರಿ ಆಗಿ ಕಾಲಿಡುತ್ತೇನೆ ಅಂತಾ ಶಪಥ ಮಾಡಿದ್ದರು. ಹೀಗೆ ಶಪಥ ಮಾಡಿದ ಜಯಲಲಿತಾ ಅವರು 1991ರ 10ನೇ ತಮಿಳುನಾಡು ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದರು. ತಮಿಳುನಾಡಿನ ಎಲ್ಲಾ ಕ್ಷೇತ್ರದಲ್ಲಿಯೂ ಬಹುಮತಗಳಿಂದ ಗೆಲುವು ಸಾಧಿಸಿದ್ದ ಕರುಣಾನಿಧಿಗೆ ಜಯಲಲಿತಾ ಶಾಕ್ ನೀಡಿದ್ದರು. ಜಯಲಲಿತಾ ನೇತೃತ್ವದ AIADMK 164 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, DMK ಕೇವಲ ಎರಡೇ ಎರಡು ಕ್ಷೇತ್ರಗಳಲ್ಲಿ ಗೆದ್ದಿತ್ತು. ಭಾರೀ ಮುಖಭಂಗ ಅನುಭವಿಸಿದ ಕರುಣಾನಿಧಿ ಮತ್ತೆ ಜಯಲಲಿತಾರ ಸುದ್ದಿಗೆ ಹೋಗಲಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ