ಐಶ್ವರ್ಯಾ ರೈ ಕಂಡರೆ ಅತ್ತೆ ಜಯಾ ಬಚ್ಚನ್‌ಗೆ ಯಾಕಿಷ್ಟು ಮುನಿಸು!?.. ಅಷ್ಟಕ್ಕೂ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಇರುವುದಾದರೂ ಏನು..?

jaya bachchan-Aishwarya Rai: ಖ್ಯಾತ ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಅತ್ತೆ ಜಯಾ ಬಚ್ಚನ್ ಅವರು ತಮ್ಮ ಕೋಪದ ವರ್ತನೆಗೆ ಹೆಸರುವಾಸಿಯಾಗಿದ್ದಾರೆ. ಈ ಸಂಬಂಧ ಅವರ ವಿಡಿಯೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್ ವೈರಲ್‌ ಆಗುತ್ತಿರುತ್ತವೆ.. 

Written by - Savita M B | Last Updated : Aug 6, 2024, 02:54 PM IST
  • ಬಾಲಿವುಡ್‌ ನಟಿ ಜಯಾ ಬಚ್ಚನ್
  • ಇದೀಗ ಈ ಸಂಬಂಧ ವಿಡಿಯೋ ಕೂಡ ವೈರಲ್ ಆಗುತ್ತಿದೆ
ಐಶ್ವರ್ಯಾ ರೈ ಕಂಡರೆ ಅತ್ತೆ ಜಯಾ ಬಚ್ಚನ್‌ಗೆ ಯಾಕಿಷ್ಟು ಮುನಿಸು!?.. ಅಷ್ಟಕ್ಕೂ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಇರುವುದಾದರೂ ಏನು..? title=

jaya bachchan strong bond with karishma kapoor: ಬಾಲಿವುಡ್‌ ನಟಿ ಜಯಾ ಬಚ್ಚನ್ ಅವರು ಇತ್ತೀಚೆಗೆ ಹೆಚ್ಚಾಗಿ ಕೋಪಗೊಳ್ಳುವುದನ್ನು ನಾವು ನೋಡಿದ್ದೇವೆ.. ಇದನ್ನು ನಟಿಯ ನಡವಳಿಕೆ ಎಂದು ಪರಿಗಣಿಸುವುದು ತಪ್ಪಾಗುತ್ತದೆ ಏಕೆಂದರೆ ಜಯಾ ಯಾವಾಗಲೂ ಹೀಗಿರಲಿಲ್ಲ.

 ವಾಸ್ತವವಾಗಿ, ಐಶ್ವರ್ಯಾ ರೈಗಿಂತ ಮೊದಲು, ಕರಿಷ್ಮಾ ಕಪೂರ್ ಅಭಿಷೇಕ್ ಅವರನ್ನು ಮದುವೆಯಾಗಲು ಹೊರಟಿದ್ದರು. ಈ ಜೋಡಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿತ್ತು. ಯಾವುದೇ ಸಮಾರಂಭದಲ್ಲಿ ದಂಪತಿಗಳು ಕಾಣಿಸಿಕೊಂಡರೇ ಅಭಿಷೇಕ್-ಕರಿಷ್ಮಾ ಮಾತ್ರವಲ್ಲದೆ ಎಲ್ಲರೂ ತುಂಬಾ ಸಂತೋಷದಿಂದ ಅವರನ್ನು ಕಾಣುತ್ತಿದ್ದರು.. ಇದೀಗ ಈ ಸಂಬಂಧ ವಿಡಿಯೋ ಕೂಡ ವೈರಲ್ ಆಗುತ್ತಿದ್ದು, ಇದರಲ್ಲಿ ಜಯಾ ಬಚ್ಚನ್ ಅವರ ಲುಕ್ ವಿಭಿನ್ನವಾಗಿದೆ.

 
 
 
 

 
 
 
 
 
 
 
 
 
 
 

A post shared by Shanaya khan (@puraniyaade99)

ಇದನ್ನೂ ಓದಿ-ಒಂದು ಸಂಚಿಕೆಗೆ 1 ಲಕ್ಷ ಸಂಭಾವನೆ ಪಡೆಯುತ್ತಿದ್ದ ʻಈಕೆಗೆʼ ಇಂದು ಪ್ಲಾಸ್ಟಿಕ್‌ ಕವರ್‌ನಲ್ಲಿ ಅನ್ನ ತಿನ್ನುವ ಪರಿಸ್ಥತಿ..!

ಜಯಾ ಬಚ್ಚನ್ ತಮ್ಮ ಭಾವಿ ಸೊಸೆ ಕರಿಷ್ಮಾ ಕಪೂರ್ ಅವರನ್ನು ವೇದಿಕೆಯ ಮೇಲೆ ಪ್ರೀತಿಯಿಂದ ಕರೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋದ ಒಳಾರ್ಥವನ್ನು ನೋಡುವುದಾದರೇ ಜಯಾ ಬಚ್ಚನ್‌ ತಮ್ಮ ಮನಸ್ಸಿನಲ್ಲಿ ಕರಿಷ್ಮಾ ಕಪೂರ್ ಅವರನ್ನು ಸೊಸೆಯಾಗಿ ಒಪ್ಪಿಕೊಂಡಿದ್ದರು ಎನಿಸುತ್ತದೆ.. ಆದರೆ ಜಯಾ ಬಚ್ಚನ್ ಐಶ್ವರ್ಯಾ ರೈ ಜೊತೆ ಈ ರೀತಿ ವರ್ತಿಸಿದ್ದು ಎಂದಿಗೂ ಕಂಡು ಬಂದಿರಲಿಲ್ಲ. ಅವರು ಐಶ್ವರ್ಯಾ ಅವರೊಂದಿಗೆ ವಿರಳವಾಗಿ ಗುರುತಿಸಿಕೊಂಡಿದ್ದಾರೆ.. ಅಲ್ಲದೇ ಅಭಿಷೇಕ್ ಮತ್ತು ಐಶ್ವರ್ಯಾ ವಿಚ್ಛೇದನದ ಸುದ್ದಿ ವ್ಯಾಪಕವಾದಾಗಿನಿಂದ ಅತ್ತೆ ಮತ್ತು ಸೊಸೆ ಇಬ್ಬರೂ ಕಾಣಿಸಿಕೊಂಡಿಲ್ಲ.

 ಜಯಾ ಬಚ್ಚನ್ ಅವರ ಈ ಹಳೆಯ ವೀಡಿಯೊವನ್ನು ನೋಡಿದ ನಂತರ, ಜನರು ಅವರ ಮತ್ತು ಐಶ್ವರ್ಯಾ ಅವರ ಸಂಬಂಧದ ಬಗ್ಗೆ ಎಲ್ಲಾ ರೀತಿಯ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಎಲ್ಲರೂ ಕೂಡ ಜಯಾ ಬಚ್ಚನ್ ಅವರ ಸ್ವಭಾವದ ಬಗ್ಗೆ ಮಾತನಾಡುತ್ತಿದ್ದಾರೆ. ಜಯಾ ಬಚ್ಚನ್ ಯಾವಾಗಲೂ ಹೀಗೆಯೇ ಇದ್ದಿದ್ದರೆ ಸೊಸೆ ಐಶ್ವರ್ಯಾ ರೈ ಜೊತೆ ಯಾಕೆ ಇಷ್ಟು ಖುಷಿಯಾಗಿಲ್ಲ ಎಂದು ಎಲ್ಲರೂ ಕೇಳುತ್ತಿದ್ದಾರೆ.. ಸದ್ಯ, ಜಯಾ ಮತ್ತು ಕರಿಷ್ಮಾ ಅವರ ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

 ಇದನ್ನೂ ಓದಿ-ಸ್ಟಾರ್‌ ನಟರಿಗಿಂತ ಹೆಚ್ಚು ಆಸ್ತಿ ಗಳಿಸಿರುವ ʻಇವರುʼ ಖ್ಯಾತ ಹಾಸ್ಯನಟನ ಮಗ..!ಯಾರು ಗೊತ್ತಾ..?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News