ಬೆಂಗಳೂರು: ಮೆಜೆಸ್ಟಿಕ್ ನ ತ್ರಿವೇಣಿ ಥಿಯೇಟರ್ ಹಾಗೂ ಅನುಪಮಾ ಥಿಯೇಟರ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು. ಥಿಯೇಟರ್ ಗಳಲ್ಲಿ ಪುನೀತ್ ಅಭಿನಯದ ಜೇಮ್ಸ್ ಎತ್ತಂಗಡಿ ಮಾಡಿ RRR ಸಿನಿಮಾ ಹಾಕಿದ್ರೇ ಥಿಯೇಟರ್ ಗೆ ನುಗ್ಗಿ ಪ್ರತಿಭಟನೆ ಮಾಡ್ತೀವಿ ಎಂಬ ಎಚ್ಚರಿಕೆ ನೀಡಿದರು. ಅಲ್ಲದೆ ಅನುಪಮಾ ಥಿಯೇಟರ್ ಮುಂಭಾಗ ಇದ್ದ ಪೋಸ್ಟರ್ ಕಿತ್ತುಹಾಕಿ ಆಕ್ರೋಶ ಹೊರಹಾಕಿದರು.
ಪುನೀತ್ ಅಭಿನಯದ 'ಜೇಮ್ಸ್' (James) ಬಿಡುಗಡೆಯಾದ ಒಂದೇ ವಾರದಲ್ಲಿ 450 ಸ್ಕ್ರೀನ್ ಗಳಿಂದ 150 ಕ್ಕೆ ಇಳಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಪುನೀತ್ ಸಿನಿಮಾವನ್ನು ಅಭಿಮಾನಿಗಳು ನೋಡುತ್ತಿದ್ದಾರೆ. ಉತ್ತಮ ಕಲೆಕ್ಷನ್ ಆಗುತ್ತಿದೆ. ಅಲ್ಲದೆ ಡಾ. ಪುನೀತ್ ರಾಜ್ ಕುಮಾರ್ (Dr Puneeth Rajkumar) ಅವರ ಕಡೇಯ ಸಿನಿಮಾವನ್ನು ಅಭಿಮಾನಿಗಳಿಗೆ ನೋಡಲು ಅವಕಾಶ ಕೊಡಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ- RRR ರಿಲೀಸ್‌ಗೆ ಕ್ಷಣಗಣನೆ.. ಸಿನಿಮಾ ವಿರುದ್ಧ ಕನ್ನಡಿಗರ ಆಕ್ರೋಶಕ್ಕೆ ಕಾರಣವೇನು?
ತ್ರಿವೇಣಿ ಥಿಯೇಟರ್ ಮಾಲೀಕ ಅನಂತ್, ಜೇಮ್ಸ್ (James) ಸಿನಿಮಾ ತೆಗೆಯಲ್ಲ RRR ಸಿನಿಮಾ ಪ್ರದರ್ಶಿಸುವುದಿಲ್ಲ, ಜೇಮ್ಸ್ ಐವತ್ತು ದಿನಗಳ ಕಾಲ ಪ್ರದರ್ಶನ ಮುಂದುವರಿಸುತ್ತೇವೆ ಎಂದು ಭರವಸೆ ಕೊಟ್ಟ ಬಳಿಕ ಪ್ರತಿಭಟನೆ (Protest) ಕೈಬಿಟ್ಟರು. ಅನುಪಮಾ ಥಿಯೇಟರ್ ಸಿಬ್ಬಂದಿ ಮಾತನಾಡಿ, ನಾವು ರಾತ್ರಿ ಸೀಮಿತ ಶೋ ಮಾತ್ರ RRR ಹಾಕ್ತೀವಿ ಎಂದರು.
ಬಳಿಕ ಮಾತನಾಡಿದ ಕರವೇ ಪ್ರವೀಣ್ ಶೆಟ್ಟಿ (Praveen Shetty), ಪರಭಾಷಾ ಚಿತ್ರಗಳನ್ನು ಬರಲೇಬೇಡಿ ಎನ್ನಲ್ಲ , ಇವತ್ತು ಡಬ್ಬಿಂಗ್ ಗೆ ಅವಕಾಶ ಸಿಕ್ಕಿರುವಾಗ ಕನ್ನಡ ಬಿಟ್ಟು, ತೆಲುಗು -ಹಿಂದಿ ಸಿನಿಮಾ ಬಿಡುಗಡೆ ಮಾಡಿದ್ರೆ, ಕರ್ನಾಟಕದ ಎಲ್ಲಾ ಸ್ಕ್ರೀನ್ ವಶಪಡಿಸಿಕೊಂಡ್ರೆ ಕನ್ನಡದ ಸಿನಿಮಾ ಎಲ್ಲಿ ಹೋಗ್ಬೇಕು?. ಜೇಮ್ಸ್ ಸಿನಿಮಾವನ್ನು 450 ಸ್ಕ್ರೀನ್ ಗಳಿಂದ 150 ಸ್ಕ್ರೀನ್ ಗಳಿಗೆ ಪುನೀತ್ ಇಳಿಸಿದ್ರೆ ಕನ್ನಡ ಚಿತ್ರರಂಗದ ಸ್ಥಿತಿ ಏನಾಗುತ್ತೆ? ನಮಗೆ ಆಂಧ್ರದಲ್ಲಿ, ತಮಿಳುನಾಡಿನಲ್ಲಿ ಅಥವಾ ಕೇರಳದಲ್ಲಿ ನಮಗೆ ಅವಕಾಶ ಕೊಡ್ತಾರಾ ಎಂದು ಪ್ರಶ್ನಿಸಿದರು. ಕನ್ನಡ ಚಿತ್ರಕ್ಕೆ ಕರ್ನಾಟಕ ಬಿಟ್ಟರೆ ಬೇರೆ ನೆರೆ ರಾಜ್ಯಗಳಲ್ಲಿ ವ್ಯಾಪಾರ ಇಲ್ಲ. ಕನ್ನಡ ಉಳಿಸುವುದು ಸರ್ಕಾರದ ಕೆಲಸ, ಸಂಸ್ಕೃತಿ ಇಲಾಖೆ ವಾಣಿಜ್ಯೋದ್ಯಮದ ಕೆಲಸ ಎಂದರು.
ಇದನ್ನೂ ಓದಿ- Siddharamaiah Allegations On BJP: ಜೇಮ್ಸ್ ಚಿತ್ರ ನಿಲ್ಲಿಸಲು ಬಿಜೆಪಿ ಒತ್ತಡ, ಸಿದ್ದರಾಮಯ್ಯ ಆರೋಪ!
RRR ಪ್ರಚಾರದಲ್ಲಿ ಪುನೀತ್ ಅವರ ಹೆಸರು ಹೇಳಿ ಒಂದು ವಾರ ತಡವಾಗಿ ಬರುತ್ತೇವೆ ಅಂತ ಹೇಳಿದ್ರು. ಆದ್ರೆ ಪುನೀತ್ ಅವರ ಹೆಗಲ ಮೇಲೆ ಬಂದೂಕಿಟ್ಟು ಕನ್ನಡಿಗರ ಮೇಲೆ ಗುಂಡು ಹಾರಿಸುವ ಕೆಲಸ ಮಾಡಿದೆ. ಆದರೆ, ಸರ್ಕಾರ ಕನ್ನಡ ಚಿತ್ರರಂಗದ ಹಿತಾಸಕ್ತಿ ಬಲಿಕೊಡಬಾರದೆಂದು ಒತ್ತಾಯ ಮಾಡುತ್ತೇವೆ ಎಂದವರು ಆಗ್ರಹಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.