ಜೈಲರ್ ಎಫೆಕ್ಟ್:  ರಜನಿಕಾಂತ್ ಗೆ 100 ಕೋಟಿ ರೂ. ಚೆಕ್ ನೀಡಿದ್ರಾ ನಿರ್ಮಾಪಕರು..?

ರಜನಿಕಾಂತ್ ಅವರ ಜೈಲರ್  ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ವಿಶ್ವಾದ್ಯಂತ ₹ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. 

Written by - Manjunath N | Last Updated : Sep 1, 2023, 10:04 PM IST
  • ರಜನಿಕಾಂತ್ ಅವರು ಸನ್ ಪಿಕ್ಚರ್ಸ್‌ನ ಪ್ರೊಡಕ್ಷನ್ ಹೌಸ್‌ನ ಅಧ್ಯಕ್ಷ ಕಲಾನಿತಿ ಮಾರನ್ ಅವರಿಂದ ₹ 100 ಕೋಟಿ ಮೊತ್ತದ ಒಂದೇ ಚೆಕ್ ಅನ್ನು ಒಳಗೊಂಡಿರುವ" ಲಕೋಟೆಯನ್ನು ಸ್ವೀಕರಿಸಿದ್ದಾರೆ.
  • ಸೂಪರ್ ಸ್ಟಾರ್ ರಜನಿಕಾಂತ್ ಅವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ
ಜೈಲರ್ ಎಫೆಕ್ಟ್:  ರಜನಿಕಾಂತ್ ಗೆ 100 ಕೋಟಿ ರೂ. ಚೆಕ್ ನೀಡಿದ್ರಾ ನಿರ್ಮಾಪಕರು..? title=

ನವದೆಹಲಿ: ರಜನಿಕಾಂತ್ ಅವರ ಜೈಲರ್  ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ವಿಶ್ವಾದ್ಯಂತ ₹ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. 

ಈಗ ಚಿತ್ರದ ಯಶಸ್ಸಿನ ಬೆನ್ನಲ್ಲೇ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನ ಪ್ರಕಾರ, ರಜನಿಕಾಂತ್ ಅವರು ಸನ್ ಪಿಕ್ಚರ್ಸ್‌ನ ಪ್ರೊಡಕ್ಷನ್ ಹೌಸ್‌ನ ಅಧ್ಯಕ್ಷ ಕಲಾನಿತಿ ಮಾರನ್ ಅವರಿಂದ "₹ 100 ಕೋಟಿ ಮೊತ್ತದ ಒಂದೇ ಚೆಕ್ ಅನ್ನು ಒಳಗೊಂಡಿರುವ" ಲಕೋಟೆಯನ್ನು ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಬಿಡದಿ ನಿತ್ಯಾನಂದ ಸ್ಬಾಮಿ ವಿರುದ್ಧ ಪ್ರಕರಣದ ಕುರಿತಂತೆ ರಾಜ್ಯ ಪೊಲೀಸರಿಗೆ ಸ್ಟಷ್ಟನೆ ಕೇಳಿದ ಇಂಟರ್ ಪೊಲ್

ರಜನಿಕಾಂತ್ ಮತ್ತು ಕಲಾನಿತಿ ಮಾರನ್ ಅವರ ಚಿತ್ರವನ್ನು ಹಂಚಿಕೊಂಡಿರುವ ಮನೋಬಾಲಾ ವಿಜಯಬಾಲನ್ ಅವರು ಹೀಗೆ ಬರೆದಿದ್ದಾರೆ, “ಕಲಾನಿತಿ ಮಾರನ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಹಸ್ತಾಂತರಿಸಿದ ಲಕೋಟೆಯಲ್ಲಿ ಸಿಟಿ ಯೂನಿಯನ್ ಬ್ಯಾಂಕ್, ಮಂಡವೇಲಿ ಶಾಖೆ, ಚೆನ್ನೈನಿಂದ ₹100 ಕೋಟಿ ಮೊತ್ತದ ಒಂದೇ ಚೆಕ್ ಇದೆ. ಇದು ಜೈಲರ್ ಲಾಭ ಹಂಚಿಕೆ ಚೆಕ್ ಆಗಿದೆ"ಎಂದು ಉಲ್ಲೇಖಿಸಿದ್ದಾರೆ.

ಆ ಮೂಲಕ ಅವರು  ₹210 ಕೋಟಿ ಸಂಭಾವನೆ ಪಡೆಯುವ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಅವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್, ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜನಿಕಾಂತ್ ನಟಿಸಿದ್ದಾರೆ. ಆಗಸ್ಟ್ 10 ರಂದು ಬಿಡುಗಡೆಯಾದ ಚಿತ್ರದ ಭಾಗವಾಗಿ ಶಿವರಾಜ್ ಕುಮಾರ್,  ರಮ್ಯಾ ಕೃಷ್ಣನ್, ತಮನ್ನಾ ಭಾಟಿಯಾ, ಮೋಹನ್ ಲಾಲ್ (ವಿಶೇಷ ಪಾತ್ರ), ಜಾಕಿ ಶ್ರಾಫ್, ಯೋಗಿ ಬಾಬು, ಮತ್ತು ವಸಂತ್ ರವಿ ಕೂಡ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಮಗನಿಗೆ ಗನ್ ಮ್ಯಾನ್ ಆಗಿದ್ದ ವ್ಯಕ್ತಿಯಿಂದ ಫೈರಿಂಗ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News