Janhavi Kapoor Video: ಜಾಹ್ನವಿ ಕಪೂರ್ ಇಂಥಾ ವಿಡಿಯೋ ನೀವು ಈ ಮೊದಲು ಎಂದೂ ನೋಡಿರಲಿಕ್ಕಿಲ್ಲ!

Janhavi Kapoor Viral Video: ಬಾಲಿವುಡ್ ನ ಖ್ಯಾತ ನಟರು ಮತ್ತು ಅವರ ಮಕ್ಕಳ ಜೊತೆಗೆ ಹೆಚ್ಚಾಗಿ ಕಂಡುಬರುವ ಒರಿ ಅಕಾ ಒರ್ಹಾನ್ ಅವತ್ರಮಣಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಜಾನ್ವಿ ಕಪೂರ್ ಮತ್ತು ಅವರ ರೂಮರ್ಡ್ ಬಾಯ್ ಫ್ರೆಂಡ್ ಶಿಖರ್ ಪಹಾಡಿಯಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ ಮತ್ತು ಈ ವೀಡಿಯೊ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಅವರು ನೀಡಿದ ಭೇಟಿಯ ವಿಡಿಯೋ ಆಗಿದೆ. (Entertainment News In Kannada).  

Written by - Nitin Tabib | Last Updated : Mar 22, 2024, 10:15 PM IST
  • ವೀಡಿಯೊದಲ್ಲಿ, ಮೂವರೂ ದಕ್ಷಿಣ ಭಾರತದ ಉಡುಗೆ ಅರ್ಥಾತ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
  • ಈ ಸಮಯದಲ್ಲಿ, ಜಾನ್ವಿ ಕಪೂರ್ ಕೆಂಪು ಬಣ್ಣದ ಲೆಹೆಂಗಾದಲ್ಲಿ ತೆರೆದ ಕೂದಲಿನೊಂದಿಗೆ ಕಾಣಿಸಿಕೊಂಡರೆ,
  • ಓರಿ ಮತ್ತು ಶಿಖರ್ ಪಹಾಡಿಯಾ ಅವರು ಧೋತಿ ಮತ್ತು ಗಮ್ಚಾದಲ್ಲಿ ಕಾಣಿಸಿಕೊಂಡಿದ್ದಾರೆ
Janhavi Kapoor Video: ಜಾಹ್ನವಿ ಕಪೂರ್ ಇಂಥಾ ವಿಡಿಯೋ ನೀವು ಈ ಮೊದಲು ಎಂದೂ ನೋಡಿರಲಿಕ್ಕಿಲ್ಲ! title=

Jahnavi Kapoor Tirumala Visit Video: ಖ್ಯಾತ ಬಾಲಿವುಡ್ ನಿರ್ಮಾಪಕ ಮತ್ತು ನಿರ್ದೇಶಕ ಬೋನಿ ಕಪೂರ್ ಮತ್ತು ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಆಗಾಗ ದೇಶದ ಪವಿತ್ರ ದೇವಸ್ಥಾನಗಳಿಗೆ ಭೇಟಿ ನೀಡುತ್ತಾಳೆ. ಅವರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ (Social Media) ಭಾರಿ ವೈರಲ್ ಆಗುತ್ತವೆ. ಈ ತಿಂಗಳ ಆರಂಭದಲ್ಲಿ ಜಾಹ್ನವಿ ಕಪೂರ್ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ (Jahnavi Kapoor Tirupati Balaji Temple Visit Viral Video) ಭೇಟಿ ನೀಡಿದ್ದಾಳೆ. ಈ ಸಂದರ್ಭದಲ್ಲಿ, ಆಕೆಯ ರೂಮರ್ಡ್ ಬಾಯ್ ಫ್ರೆಂಡ್ ಶಿಖರ್ ಪಹಾಡಿಯಾ (Shikhar Pahadiya) ಮತ್ತು ಅವರ ಆಪ್ತ ಸ್ನೇಹಿತ ಓರಿ ಸಹ ಜಾಹ್ನವಿ ಕಪೂರ್ ಜೊತೆಗೆ ಕಾಣಿಸಿಕೊಂಡಿದ್ದಾರೆ. (Bollywood News In Kannada)

ಓರಿ ಅಕಾ ಓರ್ಹಾನ್ ಅವತ್ರಮಣಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತಾದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಮೂವರೂ ತಿರುಪತಿ ಬಾಲಾಜಿ ದೇವಸ್ಥಾನ ತಲುಪಿದ್ದಾರೆ. ವಾಸ್ತವದಲ್ಲಿ, ಈ ಜಾಹ್ನವಿ (Jahnavi Kapoor) ಅವರ ಹೃದಯಕ್ಕೆ ತುಂಬಾ ಹತ್ತಿರದಲ್ಲಿದೆ ಎನ್ನಲಾಗುತ್ತದೆ, ಏಕೆಂದರೆ ಅವರ ತಾಯಿ ಶ್ರೀದೇವಿ (Sridevi) ಆಗಾಗ್ಗೆ ಈ ದೇವಸ್ಥಾನಕ್ಕೆ ಭೇಟಿ ನೀಡಲು ಬರುತ್ತಿದ್ದರು. ಜಾಹ್ನವಿ ಕೂಡ ತಮ್ಮ ಹುಟ್ಟುಹಬ್ಬದ ದಿನ ಅಂದರೆ ಮಾರ್ಚ್ 6 ರಂದು ತಿರುಮಲಕ್ಕೆ ಭೇಟಿ ನೀಡಿದ್ದಾಳೆ. ವಿಶೇಷವೆಂದರೆ ಈ ಬಾರಿ ನಟಿ ಇಲ್ಲಿಗೆ ತನ್ನ 50ನೇ ಭೇಟಿಯನ್ನು ಪೂರ್ಣಗೊಳಿಸಿದ್ದಾಳೆ. ಹೌದು, ಈ ಹಿಂದೆ ಹಲವು ಬಾರಿ ಜಾಹ್ನವಿ ತಿರುಮಲಕ್ಕೆ ಭೇಟಿ ನೀಡಿದ್ದಾಳೆ. 

ಜಾಹ್ನವಿ 50ನೇ ಬಾರಿಗೆ ತಿರುಪತಿ ಬಾಲಾಜಿ ತಲುಪಿದ್ದಾರೆ
ಇನ್ನೊಂದೆಡೆ ಓರಿ ಅವರು ಹಂಚಿಕೊಂಡಿರುವ ವೀಡಿಯೊ ಕುರಿತು ಹೇಳುವುದಾದರೆ, ಈ ವಿಡಿಯೋಗೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ, ಅದರಲ್ಲಿ ಅವರೆಲ್ಲರೂ ದೇವಸ್ಥಾನವನ್ನು ಹತ್ತಲು ಮೂರು ಗಂಟೆಗಳ ಕಾಲ ಬೇಕಾಯಿತು ಎಂದು ಹೇಳುತ್ತಿದ್ದಾರೆ.  ಏಕೆಂದರೆ ಅಲ್ಲಿಗೆ ತಲುಪಲು ಮೂವರೂ ಮೊಣಕಾಲುಗಳ ಮೇಲೆ ಮೆಟ್ಟಿಲುಗಳನ್ನು ಏರಿದ್ದಾರೆ. ವೀಡಿಯೊದಲ್ಲಿ, ಜಾನ್ವಿ ಕಪೂರ್ ತನ್ನ ಮೊಣಕಾಲುಗಳ ಮೇಲೆ ಮೆಟ್ಟಿಲುಗಳನ್ನು ಏರುತ್ತಿರುವುದನ್ನು ನೀವು ನೋಡಬಹುದು. ಈ ಅವಧಿಯಲ್ಲಿ, ನಟಿ ತಿಳಿ ಗುಲಾಬಿ ಬಣ್ಣದ ಕುರ್ತಾ ಮತ್ತು ಬಿಳಿ ಕುರ್ತಾ ಪ್ಯಾಂಟ್‌ಗಳನ್ನು ಧರಿಸಿ ಕಾಣಿಸಿಕೊಂಡಿದ್ದಾಳೆ ಮತ್ತು ತನ್ನ ಕೂದಲನ್ನು ಬನ್‌ನಲ್ಲಿ ಇಟ್ಟುಕೊಂಡಿದ್ದಾಳೆ.

ರೂಮರ್ಡ್ ಬಾಯ್ ಫ್ರೆಂಡ್ ಶಿಖರ್ ಪಹಾಡಿಯಾ ಮತ್ತು ಓರಿ ಅವರನ್ನು ಕೂಡ ನೋಡಬಹುದು
ವೀಡಿಯೊದಲ್ಲಿ, ಮೂವರೂ ದಕ್ಷಿಣ ಭಾರತದ ಉಡುಗೆ ಅರ್ಥಾತ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ, ಜಾನ್ವಿ ಕಪೂರ್ ಕೆಂಪು ಬಣ್ಣದ ಲೆಹೆಂಗಾದಲ್ಲಿ ತೆರೆದ ಕೂದಲಿನೊಂದಿಗೆ ಕಾಣಿಸಿಕೊಂಡರೆ, ಓರಿ ಮತ್ತು ಶಿಖರ್ ಪಹಾಡಿಯಾ ಅವರು ಧೋತಿ ಮತ್ತು ಗಮ್ಚಾದಲ್ಲಿ ಕಾಣಿಸಿಕೊಂಡಿದ್ದಾರೆ, ಇದನ್ನು 'ಅಂಗವಸ್ತ್ರಂ' ಎಂದು ಕರೆಯಲಾಗುತ್ತದೆ. ಮೂವರ ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ತುಂಬಾ ಇಷ್ಟ ಪಡುತ್ತಿದ್ದಾರೆ. ಈ ವೀಡಿಯೊವನ್ನು ಹಂಚಿಕೊಂಡ, ಓರಿ, 'ತಿರುಮಲದ ರೋಮಾಂಚಕ ವ್ಲಾಗ್' ಎಂಬ ಶೀರ್ಷಿಕೆ ಬರೆದುಕೊಂಡಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Orhan Awatramani (@orry)

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News