ಭಾರತದ ಮೊದಲ ಬಯೋ-ಸೈನ್ಸ್‌ ಚಿತ್ರ ʼದಿ ವ್ಯಾಕ್ಸಿನ್‌ ವಾರ್‌ʼ ಟ್ರೇಲರ್‌ ರಿಲೀಸ್

The Vaccine War : ಬಹು ನಿರೀಕ್ಷಿತ ಭಾರತದ ಮೊದಲ ಬಯೋ-ಸೈನ್ಸ್‌ ನೈಜಘಟನಾಧಾರಿತ ಚಿತ್ರ ʼದಿ ವ್ಯಾಕ್ಸಿನ್‌ ಟ್ರೇಲರ್‌ʼ ಮಂಗಳವಾರ (ಸೆ.12) ರಂದು  ರಿಲೀಸ್‌ ಆಗಿದೆ.

Written by - Zee Kannada News Desk | Last Updated : Sep 13, 2023, 11:33 AM IST
  • ಭಾರತದ ಮೊದಲ ಬಯೋ-ಸೈನ್ಸ್‌ ನೈಜಘಟನಾಧಾರಿತ ಚಿತ್ರ.
  • ಸಪ್ತಮಿಗೌಡ ನಟನೆಯ ಮೊದಲ ಬಾಲಿವುಡ್‌ ಸಿನಿಮಾ ಇದಾಗಿದೆ.
  • ವಿವೇಕ್‌ ರಂಜನ್‌ ಅಗ್ನಿಹೋತ್ರಿ ಅವರ ʼದಿ ವ್ಯಾಕ್ಸಿನ್‌ ವಾರ್‌ʼ ಸಿನಿಮಾದ ಟ್ರೇಲರ್‌ (ಸೆ.12) ರಂದು ರಿಲೀಸ್‌ ಆಗಿದೆ.
ಭಾರತದ ಮೊದಲ ಬಯೋ-ಸೈನ್ಸ್‌ ಚಿತ್ರ ʼದಿ ವ್ಯಾಕ್ಸಿನ್‌ ವಾರ್‌ʼ ಟ್ರೇಲರ್‌ ರಿಲೀಸ್ title=

Trailer : ʼದಿ ಕಾಶ್ಮೀರಿ ಫೈಲ್ಸ್‌ʼ ನಿರ್ದೇಶಕ ವಿವೇಕ್‌ ರಂಜನ್‌ ಅಗ್ನಿಹೋತ್ರಿ ಅವರ ʼದಿ ವ್ಯಾಕ್ಸಿನ್‌ ವಾರ್‌ʼ ಸಿನಿಮಾದ ಟ್ರೇಲರ್‌ ಮಂಗಳವಾರ (ಸೆ.12) ರಂದು ರಿಲೀಸ್‌ ಆಗಿದೆ. ಮೊನ್ನೆಯಷ್ಟೇ ಹೊಸ ಲುಕ್‌ ರಿಲೀಸ್‌ ಮಾಡಿದ ಸಿನಿಮಾ ತಂಡ ಈಗ ಸಿನಿಮಾದ ಟ್ರೇಲರ್‌ನ್ನು ಕೂಡ ರಿಲೀಸ್‌ ಮಾಡಿದೆ.

ಸಿನಿಮಾದಲ್ಲಿ ನಾನಾ ಪಾಟೇಕರ್‌, ಕಾಂತಾರ ನಟಿ ಸಪ್ತಮಿಗೌಡ, ಅನುಪ್‌ ಖೇರ್‌, ಪಲ್ಲವಿ ಜೋಷಿ, ಮೋಹನ್‌ ಕಪೂರ್‌, ನಿವೇದಿತಾ ಭಟ್ಟಾಚಾರ್ಯ, ಸ್ನೇಹಾ ಮಿಲಿಂದ್ ಸೇರಿದಂತೆ ಸಿನಿಮಾದಲ್ಲಿ ಹಲವರು ನಟಿಸಿದ್ದು‌, ಸಿನಿಮಾವು ಕೋವಿಡ್-19‌ ಮಾರಕ ಹೋರಾಟದ ಕುರಿತು ಮತ್ತು ಇದರ ವ್ಯಾಕ್ಸಿನ್‌ ತಯಾರಿಯಲ್ಲಿ ಭಾರತ ವಿಜ್ಞಾನಿಗಳ ಪರಿಶ್ರಮದ ಕುರಿತು‌, ಭಾರತ ವಿಜ್ಞಾನಿಗಳ ಸಾಧನೆಯ ಅನಾವರಣದ ಕುರಿತು ಈ ಟ್ರೇಲರ್‌ ತಿಳಿಸುತ್ತದೆ.

ಇದನ್ನು ಓದಿ - ಕರ್ನಾಟಕ ಸರ್ಕಾರದ ಮೈತ್ರಿ ಕಪ್ ಯೋಜನೆಯ ರಾಯಭಾರಿಯಾಗಿ ಕಾಂತಾರ ಬೆಡಗಿ ಆಯ್ಕೆ

ಭಾರತದ ಮೊದಲ ಬಯೋ ಸೈನ್ಸ್‌ ಚಿತ್ರ ಅದ್ಧೂರಿಯಾಗಿ ರಿಲೀಸ್‌ ಆಗಿದ್ದು, ಈಗಾಗಲೇ 8.7 ಮಿಲಿಯನ್‌ ವೀಕ್ಷಣಡಯನ್ನು ಪಡೆದುಕೊಂಡಿದೆ. ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದ ವಿವೇಕ್‌ ರಂಜನ್‌ ಅಗ್ನಿಹೋತ್ರಿ ಅವರ ನಿರ್ದೇಶನದಲ್ಲಿ ನೈಜಘಟನಾಧಾರಿತ ಸಿನಿಮಾ ʼದಿ ವ್ಯಾಕ್ಸಿನ್‌ ವಾರ್‌ʼ ಇದೇ ಸೆಪ್ಟೆಂಬರ್‌ 28ರಂದು ತೆರೆ ಕಾಣಲಿದ್ದು, 10ಕ್ಕೂ ಅಧಿಕ ಭಾಷೆಗಳಲ್ಲಿ ರಿಲೀಸ್‌ ಆಗಲಿದೆ. ಅಲ್ಲದೇ ಟ್ರೇಲರ್‌ ರಿಲೀಸ್‌ ನಂತರ ಕಾಂತಾರದ ಬೆಡಗಿ ಈ ಸಿನಿಮಾದಲ್ಲಿ ವಿಜ್ಞಾನಿಯಾಗಿ ಕಾಣಿಸಿಕೊಂಡಿದ್ದು, ಕೂತುಹಲವನ್ನು ಸೃಷ್ಟಿಸಿದೆ.

ಕಾಂತಾರದ ನಂತರ ರಿಲೀಸ್‌ ಆಗಲಿರುವ ಎರಡನೇ ಸಿನಿಮಾ ಇದಾಗಿದ್ದು, ಸಪ್ತಮಿಗೌಡ ನಟನೆಯ ಮೊದಲ ಬಾಲಿವುಡ್‌ ಸಿನಿಮಾ ಇದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News