"ಮನಸ್ಸಿನಲ್ಲಿ ನಾನು ಈಗಾಗಲೇ ರಣಬೀರ್ ಕಪೂರ್ ಅವರನ್ನು ಮದುವೆಯಾಗಿದ್ದೇನೆ": ಆಲಿಯಾ ಭಟ್

2018 ರಲ್ಲಿ ಸೋನಮ್ ಕಪೂರ್ ಅವರ ವಿವಾಹದ ಆರತಕ್ಷತೆಯಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯಾಗಿ ಭಾಗವಹಿಸಿದ ನಂತರ ತಮ್ಮ ಡೇಟಿಂಗ್ ಊಹಾಪೋಹಗಳಿಗೆ ತೆರೆ ಎಳೆದರು.

Edited by - Zee Kannada News Desk | Last Updated : Feb 12, 2022, 01:17 PM IST
  • ಡೇಟಿಂಗ್ ಊಹಾಪೋಹಗಳಿಗೆ ತೆರೆ ಎಳೆದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್
  • ಮನಸ್ಸಿನಲ್ಲಿ ನಾನು ಈಗಾಗಲೇ ರಣಬೀರ್ ಕಪೂರ್ ಅವರನ್ನು ಮದುವೆಯಾಗಿದ್ದೇನೆ
  • ಗಂಗೂಬಾಯಿ ಕಥಿಯಾವಾಡಿ ಚಿತ್ರದ ಪ್ರಚಾರದ ವೇಳೆ ನಟಿ ಆಲಿಯಾ ಭಟ್ ಹೇಳಿಕೆ
"ಮನಸ್ಸಿನಲ್ಲಿ ನಾನು ಈಗಾಗಲೇ ರಣಬೀರ್ ಕಪೂರ್ ಅವರನ್ನು ಮದುವೆಯಾಗಿದ್ದೇನೆ": ಆಲಿಯಾ ಭಟ್  title=
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್

ನವದೆಹಲಿ: ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Alia Bhatt) ಅವರ ವಿವಾಹದ ಬಗ್ಗೆ ವದಂತಿಗಳು ಕೆಲವು ಸಮಯದಿಂದ ಹರಿದಾಡುತ್ತಿವೆ. 

2020 ರ ಹಿಂದೆ, ರಾಜೀವ್ ಮಸಂದ್ ಅವರ ವಿಡಿಯೋ ಸಂದರ್ಶನದಲ್ಲಿ ನಟ ರಣಬೀರ್ ಕಪೂರ್ (Ranbir Kapoor) ತಮ್ಮ ಮಾಡುವೆ ವಿಚಾರದ ಬಗ್ಗೆ ಮಾತನಾಡಿದ್ದರು. "ಕೊರೊನಾ (Corona) ಸಾಂಕ್ರಾಮಿಕ ಬಂದಿರದಿದ್ದರೆ ನಮ್ಮ ಮದುವೆ ಫಿಕ್ಸ್ ಆಗುತ್ತಿತ್ತು" ಎಂದು ಹೇಳಿದ್ದರು.

ಇದನ್ನೂ ಓದಿ: Palmistry: ಅಂಗೈನಲ್ಲಿ ಈ ರೇಖೆ ಇರುವ ವ್ಯಕ್ತಿ ರಾಜನಂತೆ ಜೀವನ ನಡೆಸುತ್ತಾನೆ..!

ಇತ್ತೀಚೆಗೆ, ತಮ್ಮ ಮುಂಬರುವ ಚಿತ್ರ ಗಂಗೂಬಾಯಿ ಕಥಿಯಾವಾಡಿಯನ್ನು (Gangubai Kathiawadi) ಪ್ರಚಾರ ಸಮಯದಲ್ಲಿ, ನಟಿ ಆಲಿಯಾ ಭಟ್ ಮದುವೆಯ ವದಂತಿಗಳಿಗೆ ಸಂಬಂಧಿಸಿದಂತೆ ರಣಬೀರ್ ಹೇಳಿದ ಮಾತನ್ನು ಒಪ್ಪಿಕೊಂಡಿದ್ದಾರೆ. "ಅವರು ಹೇಳಿದ್ದು ಸರಿ ಆದರೆ. ನನ್ನ ಮನಸ್ಸಿನಲ್ಲಿ ನಾನು ರಣಬೀರ್ ಅವರನ್ನು ಈಗಾಗಲೇ ಮದುವೆಯಾಗಿದ್ದೇನೆ" ಎಂದಿದ್ದಾರೆ.

2018 ರಲ್ಲಿ ಸೋನಮ್ ಕಪೂರ್ (Sonum Kapoor) ಅವರ ಮದುವೆಯ ಆರತಕ್ಷತೆಯಲ್ಲಿ ಜೋಡಿಯಾಗಿ ಭಾಗವಹಿಸಿದ ನಂತರ ಆಲಿಯಾ ಮತ್ತು ರಣಬೀರ್ ಅವರ ಡೇಟಿಂಗ್ ಊಹಾಪೋಹಗಳಿಗೆ ತೆರೆ ಎಳೆದರು.

ಇದನ್ನೂ ಓದಿ: ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ : ಈಗ ನಿಮಗೆ ಮೊದಲಿಗಿಂತ ಹೆಚ್ಚು ಸಿಗಲಿದೆ ಪಿಂಚಣಿ!

ಅಮಿತಾಬ್ ಬಚ್ಚನ್ (Amitabh Bachchan) ಮತ್ತು ಮೌನಿ ರಾಯ್ (Mouni Roy) ಅಭಿನಯದ ಅಯಾನ್ ಮುಖರ್ಜಿಯವರ 'ಬ್ರಹ್ಮಾಸ್ತ್ರ'ದಲ್ಲಿ ಮೊದಲ ಬಾರಿಗೆ ರಣಬೀರ್ ಮತ್ತು ಆಲಿಯಾ ಅವರು ಒಟ್ಟಿಗೆ ನಟಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News