Highest paid actors: ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟ ಯಾರು ಗೊತ್ತಾ..?

Highest paid Asia actors: ಲೋಕೇಶ್ ಕನಕರಾಜ್​​ ಆಕ್ಷನ್‌​ ಕಟ್​ ಹೇಳುತ್ತಿರುವ ಸೂಪರ್‌ ಸ್ಟಾರ್‌ ರಜನಿಕಾಂತ್ ಅವರ ʼಕೂಲಿʼಯಲ್ಲಿ ತೆಲುಗಿನ ನಾಗಾರ್ಜುನ, ಶ್ರುತಿಹಾಸನ್​​, ಸತ್ಯರಾಜ್​, ಉಪೇಂದ್ರ, ಶಿವಕಾರ್ತಿಕೇಯನ್​, ರಾಘವ ಲಾರೆನ್ಸ್​​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Written by - Puttaraj K Alur | Last Updated : Sep 13, 2024, 06:44 PM IST
  • ಏಷ್ಯಾದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಸೂಪರ್​ ಸ್ಟಾರ್
  • ಒಂದು ಚಿತ್ರಕ್ಕೆ ಬರೋಬ್ಬರಿ 280 ಕೋಟಿ ಗಳಿಸುವ ರಜನಿಕಾಂತ್‌
  • ಬಾಲಿವುಡ್‌ ಖಾನ್‌ಗಳನ್ನೇ ಮೀರಿಸಿರುವ ಸ್ಟೈಲ್‌ ಕಿಂಗ್‌
Highest paid actors: ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟ ಯಾರು ಗೊತ್ತಾ..?  title=
280 ಕೋಟಿ ಗಳಿಸುವ ಸ್ಟಾರ್!​

Highest paid Asia actors: ಕಳೆದ ಕೆಲವು ವರ್ಷಗಳ ಹಿಂದೆ ಏಷ್ಯಾ ಚಿತ್ರರಂಗವೆಂದರೆ ಹಾಂಗ್​ಕಾಂಗ್​​ ಸಿನಿಮಾಗಳ ಬಗ್ಗೆ ಹೇಳುತ್ತಿದ್ದರು. ಹೀಗಾಗಿಯೇ ಬ್ರೂಸ್​ಲೀ ಮತ್ತು ಜಾಕಿಚಾನ್​​ ಅವರಂತಹ ಸ್ಟಾರ್ ನಟರು ಪ್ರಪಂಚದಾದ್ಯಂತ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ನಟರಾದ ಶಾರುಖ್ ಖಾನ್ ಮತ್ತು ಅಕ್ಷಯ್​ ಕುಮಾರ್​​​ ಜಾಗತಿಕವಾಗಿ ಖ್ಯಾತಿ ಪಡೆಯುತ್ತಿದ್ದಂತೆ ಬಾಲಿವುಡ್​ ಹೆಸರು ಮುನ್ನೆಲೆಗೆ ಬಂತು. ಆದರೆ ಇದೀಗ ಎಲ್ಲವೂ ಸಂಪೂರ್ಣವಾಗಿ ಬದಲಾಗಿದೆ.

ಪ್ರಸ್ತುತ ಏಷ್ಯಾದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟ ದಕ್ಷಿಣ ಭಾರತದ ಸೂಪರ್​ ಸ್ಟಾರ್​. ಅದು ಬೇರೆ ಯಾರೂ ಅಲ್ಲ, ವಿಲನ್​ ಆಗಿ ವೃತ್ತಿಜೀವನ ಆರಂಭಿಸಿ ಇಡೀ ಪ್ರಪಂಚದಲ್ಲೇ ಖ್ಯಾತಿ ಗಳಿಸಿರುವ ನಟ ರಜನಿಕಾಂತ್. ಹೌದು, ಸೂಪರ್​ಸ್ಟಾರ್​ ರಜನಿಕಾಂತ್​​ ಅವರು ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂಲಗಳ ಪ್ರಕಾರ ರಜನಿಕಾಂತ್​ ತಮ್ಮ 171ನೇ ಸಿನಿಮಾ, ಲೋಕೇಶ್​ ಕನಕರಾಜ್​ ನಿರ್ದೇಶದ ʼಕೂಲಿʼ ಚಿತ್ರಕ್ಕೆ ಬರೋಬ್ಬರಿ 280 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. 

ಇದನ್ನೂ ಓದಿ: ನಾಗಶೇಖರ್ ನಿರ್ದೇಶನದ ಹೊಸ ಚಿತ್ರಕ್ಕೆ ಖ್ಯಾತ ನಟಿಯ ಪುತ್ರಿಯೇ ನಾಯಕಿ

2016ರವರೆಗೆ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ಅಮೀರ್​ಖಾನ್​​ ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು. ʼದಂಗಲ್ʼ​ ಸಿನಿಮಾಗೆ ಅವರು ಬರೋಬ್ಬರಿ 275 ಕೋಟಿ ರೂ. ಸಂಭಾವನೆ ಪಡೆದಿದ್ದರು. ಬಳಿಕ 2017ರಲ್ಲಿ ಜಾಕಿಚಾನ್​​ 60 ಮಿಲಿಯನ್​ ಡಾಲರ್​ ಪಡೆಯುವ ಮೂಲಕ ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಂದಿನಿಂದ ಯಾವುದೇ ಸ್ಟಾರ್​​ ಈ ದಾಖಲೆಯನ್ನು ಮುರಿದಿಲ್ಲ. 

ಈಗ ರಜನಿಕಾಂತ್​ ಆ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಹುಕಾಲದವರೆಗೂ ರಜನಿಕಾಂತ್​​ ತಮ್ಮ ಸಿನಿಮಾಗಳಿಗೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದರು. ಇತ್ತೀಚೆಗೆ ಸಂಭಾವನೆ ಜೊತೆಗೆ ಸಿನಿಮಾ ಲಾಭದಲ್ಲಿನ ಗಳಿಕೆಯ ಲಾಭವನ್ನು ಸಹ ಪಡೆದುಕೊಂಡು ತಮ್ಮ ಗಳಿಕೆ ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಮಾಡುತ್ತಿರುವ ಕಲೆಕ್ಷನ್​​ ಪರಿಗಣಿಸಿ ಪ್ರತಿಚಿತ್ರಕ್ಕೆ ಸುಮಾರು 150-250 ಕೋಟಿ ರೂ. ಪಡೆಯುವ ಮೂಲಕ ರಜನಿ ಬಾಲಿವುಡ್‌ನ​ ಖಾನ್​​ಗಳನ್ನೇ ಗಳಿಕೆಯಲ್ಲಿ ಹಿಂದಿಕ್ಕಿದ್ದಾರೆ.

ಇದನ್ನೂ ಓದಿ: ದರ್ಶನ್ ಅಸಭ್ಯವಾಗಿ ಮಧ್ಯದ ಬೆರಳು ತೋರಿಸಿಲ್ಲ..! ಅದು ಒಂದು ವಿಶೇಷವಾದ ʼಯೋಗ ಮುದ್ರೆʼ.. ವಿಡಿಯೋ ವೈರಲ್‌

ಅಂದಹಾಗೆ ಲೋಕೇಶ್ ಕನಕರಾಜ್​​ ಆಕ್ಷನ್‌​ ಕಟ್​ ಹೇಳುತ್ತಿರುವ ರಜನಿಕಾಂತ್​​ ಅವರ ʼಕೂಲಿʼಯಲ್ಲಿ ತೆಲುಗಿನ ನಾಗಾರ್ಜುನ, ಶ್ರುತಿಹಾಸನ್​​, ಸತ್ಯರಾಜ್​, ಉಪೇಂದ್ರ, ಶಿವಕಾರ್ತಿಕೇಯನ್​, ರಾಘವ ಲಾರೆನ್ಸ್​​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಹುಬಜೆಟ್‌ನ ಸಿನಿಮಾವನ್ನು 2025ಕ್ಕೆ ರಿಲೀಸ್‌ ಮಾಡಲು ಚಿತ್ರತಂಡ ನಿರ್ಧರಿಸಿದೆ ಅಂತಾ ವರದಿಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News