ಸಲಾರ್ ಮೇಕಿಂಗ್ ವಿಡಿಯೋ ನೋಡಿದ್ದೀರಾ..? ಆ ಸೀನ್‌ ಮಾತ್ರ ಗ್ರಾಫಿಕ್ಸ್ ಅಲ್ಲವೇ ಅಲ್ಲ..!

Salar Making Video: ಸದ್ಯ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್‌ ಮಾಡುತ್ತಿರುವ ಪ್ರಭಾಸ್‌ ಅಭಿನಯದ ಸಲಾರ್‌ ಸಿನಿಮಾದ ಮೇಕಿಂಗ್‌ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ..   

Written by - Savita M B | Last Updated : Dec 26, 2023, 10:38 AM IST
  • ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಮುಖ್ಯ ಭೂಮಿಕೆಯಲ್ಲಿರುವ 'ಸಲಾರ್' ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗುತ್ತಿದೆ
  • ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದಲ್ಲಿ ಜಗಪತಿ ಬಾಬು, ಶ್ರೀಯಾ ರೆಡ್ಡಿ, ಶ್ರುತಿ ಹಾಸನ್, ತಿನ್ನು ಆನಂದ್ ಮುಂತಾದ ದೊಡ್ಡ ತಾರಾಬಳಗವಿದೆ.
  • ಇದೀಗ ಈ ಸಿನಿಮಾದ ಮೇಕಿಂಗ್‌ ವಿಡಿಯೋ ರಿಲೀಸ್‌ ಮಾಡಲಾಗಿದೆ
ಸಲಾರ್ ಮೇಕಿಂಗ್ ವಿಡಿಯೋ ನೋಡಿದ್ದೀರಾ..? ಆ ಸೀನ್‌ ಮಾತ್ರ ಗ್ರಾಫಿಕ್ಸ್ ಅಲ್ಲವೇ ಅಲ್ಲ..! title=

Salar: ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಮುಖ್ಯ ಭೂಮಿಕೆಯಲ್ಲಿರುವ 'ಸಲಾರ್' ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದಲ್ಲಿ ಜಗಪತಿ ಬಾಬು, ಶ್ರೀಯಾ ರೆಡ್ಡಿ, ಶ್ರುತಿ ಹಾಸನ್, ತಿನ್ನು ಆನಂದ್ ಮುಂತಾದ ದೊಡ್ಡ ತಾರಾಬಳಗವಿದೆ. ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಸುನಾಮಿ ಸೃಷ್ಟಿಸುತ್ತಿದ್ದು.. ಈ ನಡುವೆ ಈ ಸಿನಿಮಾದ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಈ ಮೇಕಿಂಗ್ ವಿಡಿಯೋ ಸಿನಿಮಾದ ಹೈಲೈಟ್ ಸೀಕ್ವೆನ್ಸ್ ನ ಚಿತ್ರೀಕರಣವನ್ನು ತೋರಿಸುತ್ತದೆ. ಅದ್ಧೂರಿ ಸೆಟ್‌ಗಳು ಮತ್ತು ದೊಡ್ಡ ಸಿಬ್ಬಂದಿಯೊಂದಿಗೆ ಸಿನಿಮಾವನ್ನು ಚಿತ್ರೀಕರಿಸಲಾಗಿದೆ.. ಅಲ್ಲದೇ ಈ ಮೇಕಿಂಗ್ ವಿಡಿಯೋದಲ್ಲಿ ತೋರಿಸಿರುವ ಕೆಲವು ದೃಶ್ಯಗಳನ್ನು ನೋಡಿದ ನಂತರ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.. ಚಿತ್ರದಲ್ಲಿ ಕಾಣುವ ಖಾನ್ಸರ್ ಕೋಟೆಯಲ್ಲಿ ಕತ್ತಿ ಹಿಡಿದು ನಿಂತಿರುವ ಬೃಹತ್ ಪ್ರತಿಮೆಗಳು ಕಾಣಸಿಗುತ್ತವೆ. ಇವುಗಳನ್ನು ಗ್ರಾಫಿಕ್ಸ್‌ನಲ್ಲಿ ತೋರಿಸಲಾಗಿದೆ. ಅಲ್ಲದೆ, ಹೆಲಿಕಾಪ್ಟರ್‌ಗಳು ಮತ್ತು ಮಿಲಿಟರಿ ವಾಹನಗಳನ್ನು ಸಹ ಗ್ರಾಫಿಕ್ಸ್‌ನಿಂದಲೇ ತೋರಿಸಲಾಗಿದೆ.

ಇದನ್ನೂ ಓದಿ-ಹೊಸ ವ್ಯವಹಾರದಲ್ಲಿ ರಾಮ್ ಚರಣ್...ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಗೆ ಗ್ಲೋಬಲ್ ಸ್ಟಾರ್ ಎಂಟ್ರಿ!

ಸದ್ಯ ಇವೆಲ್ಲವನ್ನು ಗಮನಿಸಿದ ಪ್ರೇಕ್ಷಕರು ಪ್ರಶಾಂತ್ ನೀಲ್ ಚಿತ್ರಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಬೃಹತ್‌ ಆಗಿ ಕಾಣುವ ಖಾನ್ಸರ್ ಸಿಟಿಯನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರತಿ ಮೇಕಿಂಗ್ ಶಾಟ್‌ನಲ್ಲಿ ತಂತ್ರಜ್ಞರು ಮತ್ತು ನಟರು ಸೇರಿದಂತೆ 100 ಕ್ಕೂ ಹೆಚ್ಚು ಸದಸ್ಯರು ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಮೇಕಿಂಗ್ ವಿಡಿಯೋ ವೈರಲ್ ಆಗುತ್ತಿದೆ.

ಇನ್ನು ಸಲಾರ್ ಕಲೆಕ್ಷನ್ ವಿಚಾರಕ್ಕೆ ಬಂದರೆ, ಮೊದಲ ದಿನ ವಿಶ್ವಾದ್ಯಂತ ರೂ.178 ಕೋಟಿ ಗಳಿಸಿದ ಚಿತ್ರ ಎರಡನೇ ದಿನ ರೂ.117 ಕೋಟಿಗೂ ಹೆಚ್ಚು ಗಳಿಸಿದೆ. ಅಂದರೆ ಎರಡು ದಿನದಲ್ಲಿ ಚಿತ್ರ 295 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು.. ಮೂರು ದಿನದಲ್ಲಿ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ...

ಇದನ್ನೂ ಓದಿ-56ನೇ ವಯಸ್ಸಿನಲ್ಲಿ 17 ವರ್ಷ ಕಿರಿಯ ಹುಡುಗಿಯನ್ನು ವರಿಸಿದ ನಟ, ನಿರ್ಮಾಪಕ ! ತಂದೆಯ ವಿವಾಹದಲ್ಲಿ ಕುಣಿದು ಕುಪ್ಪಳಿಸಿದ ಪುತ್ರ!

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News