ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​

46ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್.

Last Updated : Sep 2, 2019, 12:04 PM IST
ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ title=
Image Credits: ZeeKannada

ಬೆಂಗಳೂರು: ಕರುನಾಡಿನ ಅಚ್ಚು ಮೆಚ್ಚಿನ ಕಿಚ್ಚ, ಅಭಿನಯ ಚಕ್ರವರ್ತಿ, ಮದಕರಿ ನಾಯಕ ಸುದೀಪ್ ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಕಿಚ್ಚ ಸುದೀಪ್ ಅವರ ಜೆಪಿ ನಗರ ನಿವಾಸದಲ್ಲಿ ಮಧ್ಯರಾತ್ರಿಯಿಂದಲೇ ಬರ್ತ್ ಡೇ ಸೆಲೆಬ್ರೇಷನ್ ಜೋರಾಗಿದ್ದು ಪತ್ನಿ ಪ್ರಿಯಾ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ  ಸೇರಿದಂತೆ ಹಲವು ಕಲಾವಿದರೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಮನೆಯಲ್ಲೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಕಳೆದ ವರ್ಷ ಕೊಡಗು ಪ್ರವಾಹದ ಹಿನ್ನೆಲೆಯಲ್ಲಿ ತಮ್ಮ ಹುಟ್ಟು ಹಬ್ಬ ಆಚರಿಸದಂತೆ ಮನವಿ ಮಾಡಿದ್ದ ಕಿಚ್ಚ ಸುದೀಪ್, ಈ ಬಾರಿ ಉತ್ತರ ಕರ್ನಾಟಕದ ಪ್ರವಾಹದ ಹಿನ್ನೆಲೆಯಲ್ಲಿ ವಿಜೃಂಭಣೆಯ ಹುಟ್ಟು ಆಚರಿಸಿಕೊಳ್ಳದಿರಲು  ನಿರ್ಧರಿಸಿದ್ದಾರೆ. ಅದರೂ ಅಭಿಮಾನಿಗಳನ್ನು ನಿರಾಸೆಗೊಳಿಸದೆ ಬಾದ್ ಶಾ ತಡರಾತ್ರಿ 12.15 ಕ್ಕೆ ಮನೆಯಿಂದ ಹೊರ ಬಂದು ಅಭಿಮಾನಿಗಳತ್ತ ಕೈಬೀಸಿ ಎಲ್ಲರನ್ನು ಸಂತಸಗೊಳಿಸಿದರು.
 
ಈ ಸಂದರ್ಭದಲ್ಲಿ ಕಿಚ್ಚ ಸುದೀಪ್‌ಗೆ ಜೈ.. ಕರ್ನಾಟಕದ ಪೈಲ್ವಾನ್‌ಗೆ ಜೈ. ಪರಭಾಷೆಗಳ ವಿಲನ್‌ಗೆ ಜೈ. ಅಭಿನಯ ಚಕ್ರವರ್ತಿಗೆ ಜೈ ಎಂಬ ಘೋಷಣೆ ಮನೆ ಮಾಡಿತ್ತು. 

ಸುದೀಪ್ ಜನ್ಮದಿನದ ಹಿನ್ನೆಲೆಯಲ್ಲಿ ಪೈಲ್ವಾನ್ ಚಿತ್ರ ತಂಡ, 'ಪೈಲ್ವಾನ್' ಚಿತ್ರದ ಒಂದು ಹಾಡನ್ನು ರಿಲೀಸ್ ಮಾಡುವ ಮೂಲಕ ಬರ್ತ್ ಡೇ ಗಿಫ್ಟ್ ನೀಡಿದೆ. ಸೆಪ್ಟೆಂಬರ್ 12ಕ್ಕೆ ದೇಶಾದ್ಯಂತ 3000ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ 'ಪೈಲ್ವಾನ್' ತೆರೆಕಾಣಲಿದೆ.
 

Trending News