Galipata 2 Review: "ಕನ್ನಡ ಭಾಷೆ ಸಾಯುತ್ತೆ ಅನ್ನೋರು ಇದ್ದಾರೆ.. ಭಾಷೆ ಸಾಯಲ್ಲ,ಕನ್ನಡ ಸಾಯಲ್ಲ.. ಕನ್ನಡ ಸಾಯುತ್ತೆ ಅನ್ನೋರು ಸಾಯುತ್ತಾರೆ" ಏನು ಅದ್ಬುತ ಲೈನ್ ಇದು.. ಗಾಳಿಪಟ 2 ಸಿನಿಮಾದ ಕನ್ನಡ ಮೇಷ್ಟ್ರು ಕಿಶೋರ್ ಅನ್ನೋ ಪಾತ್ರದಲ್ಲಿ ಕಾಣಿಸಿಕೊಂಡ ಅನಂತ್ ನಾಗ್ ಅವ್ರ ಡೈಲಾಗ್ ಇದು. ಗಾಳಿಪಟ 2 ಸಿನಿಮಾ ಫೈನಲಿ ಭರ್ಜರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ಮೊದಲ ದಿನವೇ ಕರ್ನಾಟಕದ ಹಲವು ಥೀಯೇಟರ್ ಹೌಸ್ ಫುಲ್ ಆಗಿದೆ. ಗಣಿ ಮತ್ತು ಭಟ್ಟರ ಕಾಂಬಿನೇಶನ್ ಗೆ ಜನ ಫುಲ್ ಮಾರ್ಕ್ ಕೊಟ್ಟಾಗಿದೆ. ಹಾಗಾದ್ರೆ ಗಾಳಿಪಟ 2 ಸಿನಿಮಾ ಹೇಗಿದೆ ಅನ್ನೋದ್ರ ಪಕ್ಕಾ ರಿವ್ಯೂ ಜೀ ಕನ್ನಡ ನ್ಯೂಸ್ ಕೊಡ್ತಾ ಇದೆ ನೋಡಿ.
ನೀರುಕೋಟೆ ಅನ್ನೋ ಊರಿನಲ್ಲಿರೋ ಕಾಲೇಜಿನಲ್ಲಿ ಶುರುವಾಗೋ ಕಥೆ ಯುರೋಪ್, ಜರ್ಮನಿ ಹೀಗೆ ಎಲ್ಲಾ ಕಡೆ ರೌಂಡ್ ಹೊಡೆಯುತ್ತೆ. ನೀರುಕೋಟೆಯ ಕಾಲೇಜಿಗೆ ಸೇರೋ ಮೂವರು ಗೆಳೆಯರಿಗೆ ಕನ್ನಡ ಮೇಷ್ಟ್ರು ತಮ್ಮ ಮನೆಯಲ್ಲಿ ಜಾಗ ಕೊಟ್ಟಿರುತ್ತಾರೆ. ಗಣೇಶ್, ಭೂಷಣ್ ಮತ್ತು ದಿಗಂತ್ ಈ ಮೂವರು ವಿದ್ಯಾರ್ಥಿಗಳು ಮೊದಲೇ ತರ್ಲೆಗಳು. ಕಾಲೇಜಿನಲ್ಲಿ ಇವ್ರ ತುಂಟಾಟ, ಮೋಜು-ಮಸ್ತಿ ನೋಡೋದೇ ಥ್ರಿಲ್ ಕೊಡುತ್ತೆ. ಪಂಚಿಂಗ್ ಡೈಲಾಗ್ ಗಳು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತೆ. ಅಘೋರಿಯಾಗಿ ಬದಲಾಗೋ ದಿಗಂತ್ ಕಾಮಿಡಿ ಮಾತ್ರ ಸುಸ್ತಾಗುವಂತೆ ನಗಿಸುತ್ತೆ. ಕಾಮಿಡಿ ಕಚಗುಳಿ ಮಾತ್ರ ಎಂಡ್ ವರೆಗೂ ಇರುತ್ತೆ.ಆದ್ರೆ ಸ್ಟೋರಿಯಲ್ಲಿ ಬರೋ ಟ್ವಿಸ್ಟ್ ಮತ್ತು ಟರ್ನ್ ಗಳು ಕಲ್ಲು ಹೃದಯವನ್ನೂ ಕೂಡ ಕರಗಿಸಿ ಅಳಿಸಿಬಿಡುತ್ತೆ. ಕೆಲವೊಂದು ಸನ್ನಿವೇಶಗಳು ಸೀಟಿನ ತುದಿಗೆ ಕೂರಿಸುತ್ತೆ. ಈ ಸಿನಿಮಾದಲ್ಲಿ ಭಟ್ರು ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನ ಸಾರಿ ಸಾರಿ ಹೇಳಿದ್ದಾರೆ.
ಗಾಳಿಪಟ ಫೆಸ್ಟಿವಲ್ ನಲ್ಲಿ ಕಾಣೆಯಾಗೋ ಕನ್ನಡ ಮೇಷ್ಟ್ರ ನಾಲ್ಕು ವರ್ಷದ ಮಗನ ಕಥೆ ನಿಜಕ್ಕೂ ಕಣ್ಣೀರು ತರಿಸುತ್ತೆ. ಸ್ವಲ್ಪವೂ ಸೀರಿಯಸ್ನೆಸ್ ಇಲ್ಲದ ಗಣೇಶ್ ಗೆ ಇದ್ದಕ್ಕಿದ್ದ ಹಾಗೇ ಪ್ರಾಣ ಸ್ನೇಹಿತರಂತೆ ಇದ್ದ ದಿಗಂತ್ ಮತ್ತು ಭೂಷಣ್ ತಿರುಗಿ ಬೀಳುತ್ತಾರೆ. ಅದ್ಯಾಕೆ ಅನ್ನೋದನ್ನ ನೀವು ಚಿತ್ರಮಂದಿರಕ್ಕೆ ಹೋಗಿ ನೋಡಿ....
ಇದನ್ನೂ ಓದಿ- ನನ್ನ ಮಗ ಓಡಿ ಹೋಗಿಲ್ಲ ಅರೆಂಜ್ ಮ್ಯಾರೇಜ್ ಮಾಡ್ತಾ ಇದ್ದೀವಿ" : ಕ್ರೇಜಿ ಸ್ಟಾರ್ ರವಿಚಂದ್ರನ್
ಕನ್ನಡ ಅಂದ್ರೆ ಇಲ್ಲಿ ಗಣೇಶ್ ಗೆ ಕಬ್ಬಿಣದ ಕಡಲೆಕಾಯಿ.. ಆದ್ರೆ ಕನ್ನಡದಲ್ಲೇ ಏನೋ ಮಾಡಲಿ ಮಗ ಅನ್ನೋದು ತಾಯಿ ಸುಧಾ ಬೆಳವಾಡಿ ಮತ್ತು ತಂದೆ ರಂಗಾಯಣ ರಘು ಆಸೆ. ತಂದೆಗೆ ಮಗನ ವರ್ತನೆಯ ಬಗ್ಗೆ ಕೊನೆಯವರೆಗೂ ಸಿಟ್ಟಿರುತ್ತೆ. ಆದ್ರೆ ಕೊನೆಯಲ್ಲಿ ಮಗ ಗಣೇಶನ ನಿಜವಾದ ಗುಣ ಗೊತ್ತಾಗಿ ಕಣ್ಣೀರು ಹಾಕುತ್ತಾರೆ. ಅಷ್ಟರಲ್ಲಿ ಗಣೇಶ್ ತಾಯಿ ಇದ್ದಕ್ಕಿದ್ದ ಹಾಗೆ ಸಾಯುತ್ತಾರೆ.
ಸ್ನೇಹ ಅಂದ್ರೆ ಏನು ಅನ್ನೋದನ್ನ ತುಂಬಾ ಅದ್ಬುತವಾಗಿ ತೆರೆಯ ಮೇಲೆ ತೋರಿಸೋ ಪ್ರಯತ್ನ ಮಾಡಿದ್ದಾರೆ ಭಟ್ರು. ಅಬ್ಬಾ ದೃಶ್ಯ ವೈಭವ ನೋಡೋದೇ ಕಣ್ಣಿಗೆ ಆನಂದ ಮತ್ತು ಹಬ್ಬ. ಅರ್ಜುನ್ ಜನ್ಯ ಮ್ಯೂಸಿಕ್ ಬಗ್ಗೆ ಮಾತಾಡೋ ಹಾಗೇ ಇಲ್ಲ ಬಿಡಿ. ನೀನು ಬಗೆಹರಿಯದ ಹಾಡು ಸಕ್ಕತ್ ಮೆಲೋಡಿ ಸಾಂಗ್. ಎಕ್ಸಾಮ್ ಸಾಂಗ್ ಕೇಳೋದೇ ಭರ್ಜರಿ ಕಿಕ್. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ, ನಿಶ್ವಿಕಾ ನಾಯ್ಡು ನಾಯಕಿಯರಾಗಿ ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಇದನ್ನೂ ಓದಿ- "ಗಾಳಿಪಟ 2" ಪ್ಯಾನ್ ಇಂಡಿಯಾ ಸಿನಿಮಾನೂ ಹೌದು...ಇದೀಗ "ಕನ್ನಡ" ಭಾಷೆ ಪ್ಯಾನ್ ಇಂಡಿಯಾ ಆಗುತ್ತಿದೆ
ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್ ನಾಗ್, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ಸಖತ್ ಮಜಾ ಕೊಟ್ಟಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾತ್ರ ಬೇರೇ ಲೆವೆಲ್ಲಿಗೆ ಇದೆ. ಭೂಷಣ್ ಪಾತ್ರದಲ್ಲಿ ಕಾಣಿಡಿಕೊಂಡ ಪವನ್ ಇನ್ನೋಸೆಂಟ್ ಲುಕ್ ಮಾತ್ರ ಆಹಾ ಅನ್ನುವಂತಿದೆ.
ಒಟ್ಟಾರೆ ಸಿನಿಮಾದಲ್ಲಿ ಕೆಲವೊಂದು ಕಡೆ ಕನೆಕ್ಷನ್ ಮಿಸ್ ಆದ್ರೂ ಕೂಡ ಏನೋ ಒಂದು ಪಡ್ಕೊಂಡ್ ಚಿತ್ರಮಂದಿರದಿಂದ ಹೊರ ಬರಬಹುದು. ಭಟ್ರು ಮತ್ತು ಗಣಿ ಕಾಂಬಿನೇಶನ್ ಮತ್ತೇ ಗೆದ್ದಿದೆ. ಕೊಟ್ಟ ಕಾಸಿಗೆ ಲಾಸ್ ಅಂತೂ ಇಲ್ಲ..ಬನ್ನಿ ಸಿನಿಮಾ ನೋಡಿ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.