ಕನ್ನಡ ಸಿನಿಮಾಗಳ ಕೆಪಾಸಿಟಿಗೆ ಬಾಲಿವುಡ್ ನಲುಗಿ ಹೋಗುತ್ತಿದೆ. ಸಾಲು ಸಾಲು ಸ್ಯಾಂಡಲ್‌ವುಡ್ ಸಿನಿಮಾಗಳು ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರುತ್ತಿದ್ದರೆ, ಮತ್ತೊಂದು ಕಡೆ ಬಾಲಿವುಡ್‌ನ ಸಾಲು ಸಾಲು ಸಿನಿಮಾಗಳು ಫ್ಲಾಪ್ ಲಿಸ್ಟ್‌ಗೆ ಸೇರುತ್ತಿವೆ. ಇದೀಗ ಮತ್ತೊಂದು ಕನ್ನಡ ಸಿನಿಮಾ ಬಾಲಿವುಡ್ ಸಿನಿಮಾಗಳ ವಿರುದ್ಧ ತೊಡೆ ತಟ್ಟಿ ನಿಲ್ಲಲು ಸಜ್ಜಾಗಿದೆ.
ಅಭಿಮಾನಿಗಳ ಪಾಲಿನ ಪ್ರೀತಿಯ ನಟ 'ಗೋಲ್ಡನ್ ಸ್ಟಾರ್' ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ಮತ್ತೊಮ್ಮೆ ವರ್ಕೌಟ್ ಆಗುತ್ತಿದೆ. ಸದ್ಯ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿರುವ ಸಿನಿಮಾಗಳ ಪೈಕಿ 'ಗಾಳಿಪಟ-2' ಕೂಡ ಒಂದು. ಈಗಾಗಲೇ ಹಾಡುಗಳು & ಟೀಸರ್ ಮೂಲಕ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದು, ಆಗಸ್ಟ್ 12ರಂದು ಅಂದ್ರೆ ಇದೇ ಶುಕ್ರವಾರ ರಿಲೀಸ್ ಆಗಲಿದೆ ಭಟ್ಟರ್ 'ಗಾಳಿಪಟ' ಸೀಕ್ವೆಲ್. ಆದ್ರೆ 'ಗಾಳಿಪಟ-2' ಜೊತೆ ಹಿಂದಿಯ ಬಹುನಿರೀಕ್ಷಿತ 2 ಸಿನಿಮಾಗಳು ರಿಲೀಸ್ ಆಗುತ್ತಿವೆ. ಹೀಗಿದ್ರು ಬಾಲಿವುಡ್ ಚಿತ್ರಗಳ ಎದುರು 'ಗೋಲ್ಡನ್ ಸ್ಟಾರ್' ಸಿನಿಮಾ ಅಬ್ಬರಿಸಲು ಸಜ್ಜಾಗಿದೆ.
ಇದನ್ನೂ ಓದಿ : Davanagere : ಖಾಸಗಿ ಬಸ್ ಪಲ್ಟಿಯಾಗಿ 20 ಜನರಿಗೆ ಗಾಯ..!
ಚಂದನವನದ ಹವಾ..!
ಸ್ಯಾಂಡಲ್‌ವುಡ್ ಇದೀಗ ಹಾಲಿವುಡ್ ಲೆವೆಲ್‌ಗೆ ಬೆಳೆದು ನಿಂತಿದೆ. ಕೊರೊನಾ ಕಂಟಕ ಕಳೆದ ಬಳಿಕ ಸಾಲು ಸಾಲು ಹಿಟ್ ಸಿನಿಮಾಗಳು ಕನ್ನಡದಲ್ಲಿ ರಿಲೀಸ್ ಆಗಿ ಹೊಸ ನಿರೀಕ್ಷೆ ಮೂಡಿಸುತ್ತಿವೆ. ಇದರ ಜೊತೆ ಸ್ಯಾಂಡಲ್‌ವುಡ್ ಚಿತ್ರಗಳ ಬಾಕ್ಸ್ ಆಫಿಸ್ ಕಲೆಕ್ಷನ್ ಕೂಡ ನೂರಾರು ಕೋಟಿ ಮುಟ್ಟುತ್ತಿದೆ. ಹೀಗೆ ಕನ್ನಡ ಸಿನಿ ರಂಗದ ಬಹುನಿರೀಕ್ಷಿತ ಸಿನಿಮಾಗಳ ಸಾಲಿಗೆ 'ಗೋಲ್ಡನ್ ಸ್ಟಾರ್' ಗಣೇಶ್ ಅಭಿನಯದ 'ಗಾಳಿಪಟ-2' ಕೂಡ ಸೇರಿದೆ. ಹೀಗಾಗಿ ಕೋಟ್ಯಂತರ ಫ್ಯಾನ್ಸ್ ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಆಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಛಡ್ಡಾ' ಹಾಗೂ ಅಕ್ಷಯ್ ಕುಮಾರ್ ಅವರ 'ರಕ್ಷಾ ಬಂಧನ್' ರಿಲೀಸ್‌ಗೆ ರೆಡಿಯಾಗಿವೆ. 'ಗಾಳಿಪಟ-2' ಜೊತೆಯಲ್ಲೇ ಈ ಸಿನಿಮಾಗಳು ಕೂಡ ರಿಲೀಸ್ ಆಗುತ್ತಿವೆ. ಆದರೆ ಕನ್ನಡಿಗರು 'ಗಾಳಿಪಟ-2' ಸಿನಿಮಾಗೆ ಅತಿಹೆಚ್ಚು ಲೈಕ್ಸ್ ನೀಡುವ ಮೂಲಕ ಮತ್ತೊಂದು ಸ್ಯಾಂಡಲ್‌ವುಡ್ ಸಿನಿಮಾ ಬ್ಲಾಕ್ ಬಸ್ಟರ್ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ :"ಸುದೀಪ್ ನನ್ನ ಸಿನಿಮಾದ 4 ಶೋ ಗಳನ್ನ ನನ್ನ ಅಭಿಮಾನಿಗಳಿಗೆ ತೋರಿಸುತ್ತೀನಿ ಅಂತಾರೆ"
ಒಟ್ಟಾರೆ ಹೇಳುವುದಾದರೆ ಗೋಲ್ಡನ್ ಗಾಳಿಪಟ ಚಂದನವನದಲ್ಲಿ ಮತ್ತೆ ಸದ್ದು ಮಾಡಲಿದೆ. ಬರೋಬ್ಬರಿ 14 ವರ್ಷಗಳ ಹಿಂದೆ ರಿಲೀಸ್ ಆಗಿ ದೊಡ್ಡ ಹಿಟ್ ಕಂಡಿದ್ದ 'ಗಾಳಿಪಟ-1' ಇದೀಗ ಸೀಕ್ವೆಲ್ ಮೂಲಕ 'ಗಾಳಿಪಟ-2' ಅವತಾರದಲ್ಲಿ ನೂರಾರು ಥಿಯೇಟರ್‌ಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ. ಇದು ಬಾಲಿವುಡ್ ಸ್ಟಾರ್‌ಗಳಿಗೂ ನಡುಕ ತರಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ