Dileep Shankar passes away: ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕರಾಗಿದ್ದ ಗುರುಪ್ರಸಾದದದ ಅವರ ಸಾವು ಇಂಡಸ್ಟ್ರಿಗೆ ಆಘಾತವನ್ನುಂಟು ಮಾಡಿತ್ತು. ಸಿನಿಮಾ ಡೈರೆಕ್ಟರ್ನ ಶವ ಕೊಳೆತ ಸ್ಥಿತಿಯಲ್ಲಿ ತಮ್ಮ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿತ್ತು. ನಟ ಹಾಗೂ ನಿರ್ದೇಶಕನ ಸಾವಿನ ಸುದ್ದಿ ಕೇಳಿ ಇಡೀ ಇಂಡಸ್ಟ್ರಿಯೇ ಶಾಕ್ ಆಗಿತ್ತು, ಅದರಲ್ಲೂ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂಡಸ್ಟ್ರಿಗೆ ಅರಗಿಸಿಕೊಳ್ಳಲಾಗದ ಸುದ್ದಿಯಾಗಿತ್ತು. ಗುರುಪ್ರಸಾದ್ ಅವರು ಸಾವನ್ನಪ್ಪಿ ಇನ್ನೂ, ಕೆಲವು ದಿನ ಕೂಡ ಕಳೆದಿಲ್ಲ, ಈ ಸುದ್ದಿ ಜೀರ್ಣ ಆಗುವ ಮುಂಚೆಯೇ ಸಿನಿಮಾ ಇಂಡಸ್ಟ್ರಿಗೆ ಮತ್ತೊಂದು ಶಾಕ್ ಎದುರಾಗಿದೆ. ಗುರುಪ್ರಸಾದ್ ಅವರ ಶವ ಯಾವ ರೀತಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತೋ ಅದೇ ರೀತಿ ಮತ್ತೊಬ್ಬ ನಟನ ಶವ ಇದೀಗ ಹೊಟೆಲ್ನ ರೂಮ್ ಒಂದರಲ್ಲಿ ಪತ್ತೆಯಾಗಿದೆ.
ಮಲಯಾಳಂ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟನಾಗಿರುವ ದಿಲೀಪ್ ಶಂಕರ್ ಅವರ ಶವ ಭಾನುವಾರ ತಿರುವನಂತಪುರಂನ ಹೋಟೆಲ್ ಕೊಟಡಿ ಒಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಟನ ಸಾವಿಗೆ ಕಾರಣ ಏನು? ಎಂಬುದು ಇನ್ನೂ ಕೂಡ ತಿಳಿದುಬಂದಿಲ್ಲವಾದ್ರೂ ಸುದ್ದಿ ಕೇಳಿ ಇಂಡಸ್ಟ್ರಿ ಬೆಚ್ಚಿಬಿದ್ದಿದೆ. ಈಗಾಗಲೇ ದೊರೆತಿರುವ ಮಾಹಿತಿಯ ಪ್ರಕಾರ ದಿಲೀಪ್ ಅವರು ಡಿ. 19 ರಂದು ಹೋಟೆಲ್ನಲ್ಲಿ ಚೆಕ್ ಇನ್ ಮಾಡಿದ್ದರಂತೆ, ಆದರೆ ನಟ ಯಾವಾಗ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಇನ್ನೂ ಕೂಡ ಲಭ್ಯವಾಗಿಲ್ಲ.
ಟಿವಿ ಶೋ ಒಂದಕ್ಕಾಗಿ ದಿಲೀಪ್ ಅವರು ತಿರುವನಂತರಪುರಂಗೆ ಬಂದಿದ್ದರು ಎಂದು ಹೇಳಲಾಗುತ್ತಿದ್ದು, ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರಂತೆ. ಈ ಮಾಹಿತಿಯನ್ನು ನಿರ್ದೇಶಕರೊಬ್ಬರು ಪೋಲಿಸರಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಟಿವಿ ಸೀರಿಸ್ನ ಶೂಟಿಂಗ್ಗಾಗಿ ಹೋಟೆಲ್ನಲ್ಲಿ ಬಂದು ಚೆಕ್ಇನ್ ಮಾಡಿದ್ದ ದಿಲೀಪ್ ಕುಮಾರ್ ಅವರು ಹೋಟೆಲ್ಗೆ ಬಂದ ದಿನದಿಂದ ಒಂದು ದಿನವೂ ಕೂಡ ತಮ್ಮ ರೂಮ್ ಬಿಟ್ಟು ಹೊರಗೆ ಬಂದಿಲ್ಲವಂತೆ, ನಟನಿಗೆ ಅವರ ಸಹನಟನರು ಸಾಕಷ್ಟು ಭಾರಿ ಫೋನ್ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದರೂ ಕೂಡ ಅವರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅನುಮಾನ ಬಂದು ರೂಮ್ ಅನ್ನು ಪರಿಶೀಲಿಸಿದಾಗ ನಟ ಸಾವನ್ನಪ್ಪಿರುವ ವಿಚರ ಬೆಳಕಿಗೆ ಬಂದಿದೆ.
ಇನ್ನೂ, ನಟ ದಿಲೀಪ್ ಕುಮಾರ್ ಮಲಯಾಳಂನ ಹಲವಾರು ಪ್ರಸಿದ್ದ ದಾರವಾಹಿ ಹಾಗೂ ಟಿವಿ ಶೋಗಳಲ್ಲಿ ನಟಿಸಿದ್ದಾರೆ. ಇದೀಗ ನಟನ ಸಾವಿನ ಕುರಿತು ಪೋಲಿಸರು ತನಿಖೆ ಆರಂಭಿಸಿದ್ದು, ತನಿಖೆಯ ನಂತರವಷ್ಟೆ ನಟನ ಸಾವಿಗೆ ನಿಖರವಾದ ಕಾರಣ ಏನು ಎಂಬುದು ತಿಳಿದು ಬಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.