ತಾಯಿಯಾದ ಸಂಭ್ರಮದಲ್ಲಿ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್

ಹಲವು ಪ್ರಸಿದ್ಧ ಧಾರಾವಾಹಿಗಳನ್ನು ನಿರ್ಮಿಸಿರುವ 43 ವರ್ಷದ ಏಕ್ತಾ ಕಪೂರ್ ಗಂಡು ಮಗುವಿಗೆ ತಾಯಿಯಾಗಿದ್ದು, ಮಗು ಆರೋಗ್ಯವಾಗಿದೆ ಎನ್ನಲಾಗಿದೆ.

Last Updated : Jan 31, 2019, 12:54 PM IST
ತಾಯಿಯಾದ ಸಂಭ್ರಮದಲ್ಲಿ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ title=

ನವದೆಹಲಿ:  ಧಾರಾವಾಹಿಗಳ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಬಾಡಿಗೆ ತಾಯ್ತನದ ಮೂಲಕ ತಾಯಿಯಾದ ಸಂಭ್ರಮದಲ್ಲಿದ್ದಾರೆ. 

ಹಲವು ಪ್ರಸಿದ್ಧ ಧಾರಾವಾಹಿಗಳನ್ನು ನಿರ್ಮಿಸಿರುವ 43 ವರ್ಷದ ಏಕ್ತಾ ಕಪೂರ್ ಗಂಡು ಮಗುವಿಗೆ ತಾಯಿಯಾಗಿದ್ದು, ಮಗು ಆರೋಗ್ಯವಾಗಿದೆ ಎನ್ನಲಾಗಿದೆ. ಈ ಮೂಲಕ ದೇಶದ ಕಿರುತೆರೆಯ ಯಶಸ್ವಿ ಟೆಲಿವಿಷನ್ ನಿರ್ಮಾಪಕಿ ಮೊದಲ ಬಾರಿಗೆ ತಾಯಿಯಾಗಿದ್ದಾರೆ.

ಕಳೆದ ವರ್ಷ ಏಕ್ತಾ ಕಪೂರ್ ಸಹೋದರ ತುಷಾರ್ ಕಪೂರ್ ಸಹ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದರು. ಈ ಇಬ್ಬರೂ ಅವಿವಾಹಿತರಾಗಿದ್ದು, ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿದ್ದಾರೆ.

Trending News