Drugs Case:Rhea Chakraborty ಜಾಮೀನು ಅರ್ಜಿ ತಿರಸ್ಕೃತ

ಡ್ರಗ್ಸ್ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ತನ್ನ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.

Last Updated : Sep 11, 2020, 12:52 PM IST
  • ಡ್ರಗ್ಸ್ ಪ್ರಕರಣದಲ್ಲಿ Rhea Chakraborty ಜಾಮೀನು ಅರ್ಜಿ ತಿರಸ್ಕೃತ.
  • ಶೋವಿಕ್ ಶಕ್ರವರ್ತಿ ಸೇರಿದಂತೆ ಇತರೆ ಆರು ಆರೋಪಿಗಳ ಜಾಮೀನು ಅರ್ಜಿ ಕೂಡ ತಿರಸ್ಕೃತ.
  • ಇದೀಗ ಜಾಮೀನಿಗಾಗಿ ರಿಯಾ ಬಳಿ HC ಮಾರ್ಗ ಮಾತ್ರ ಬಾಕಿ ಉಳಿದಿದೆ.
Drugs Case:Rhea Chakraborty ಜಾಮೀನು ಅರ್ಜಿ ತಿರಸ್ಕೃತ  title=

ನವದೆಹಲಿ: ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಪ್ರಕರಣದ ಪ್ರಮುಖ ಆರೋಪಿ ರಿಯಾ ಚಕ್ರವರ್ತಿ ಡ್ರಗ್ಸ್ ಪ್ರಕರಣದಲ್ಲಿ ಸೆಪ್ಟೆಂಬರ್ 22ರವರೆಗೆ ಮುಂಬೈನ ಭಾಯಿ ಖಲಾ ಜೈಲಿನಲ್ಲಿದ್ದಾರೆ. ಏತನ್ಮಧ್ಯೆ ಜಾಮೀನಿಗಾಗಿ ಮುಂಬೈನ ವಿಶೇಷ ನ್ಯಾಯಾಲಯಕ್ಕೆ ರಿಯಾ ಚಕ್ರವರ್ತಿ ಅರ್ಜಿಯನ್ನು ದಾಖಲಿಸಿದ್ದು, ನಿನ್ನೆ ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, ಇಂದು ರಿಯಾ ಚಕ್ರವರ್ತಿ ಅರ್ಜಿಯನ್ನು ತಿರಸ್ಕರಿಸಿದೆ. 

ರಿಯಾ ಚಕ್ರವರ್ತಿ ಜೊತೆಗೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಇತರೆ ಆರೋಪಿಗಳಾದ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿ, ಸ್ಯಾಮ್ಯುಯೆಲ್ ಮರಾಂಡ, ದಿಪೇಶ್, ಬಾಸಿಲ್ ಹಾಗೂ ಜಿಡ್ ಅವರ ಜಮಾನತ್ತು ಅರ್ಜಿಯನ್ನು ಸಹ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಸುಮಾರು ಎರಡು ದಿನಗಳ ವಿಚಾರಣೆಯ ಬಳಿಕ ನ್ಯಾಯಾಲಯ ರಿಯಾ ಚಕ್ರವರ್ತಿ, ಅವರ ಸಹೋದರ ಶೋವಿಕ್ ಚಕ್ರವರ್ತಿ ಸೇರಿದಂತೆ ಒಟ್ಟು 6 ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇದಕ್ಕೂ ಮೊದಲು NDPS ನ್ಯಾಯಾಲಯ ರಿಯಾ ಚಕ್ರವರ್ತಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.

ಇದೀಗ ರಿಯಾ ಚಕ್ರವರ್ತಿಯ ಬಳಿ ಬಾಂಬೆ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸುವ ವಿಕಲ್ಪ ಬಾಕಿ ಉಳಿದಿದೆ. ಆದರೆ, ವಿಚಾರಣೆಗೆ ಕಾಲಾವಕಾಶ ಸಿಗುವವರೆಗೆ ರಿಯಾ ಭಾಯಖಲಾ ಜೈಲಿನಲ್ಲಿಯೇ ಇರಬೇಕಾಗಲಿದೆ. NDPS ಕಾಯ್ಕೆಯಾ ಸೆಕ್ಷನ್ 16/20ರ ಅಡಿ ರಿಯಾಳನ್ನು ಬಂಧಿಸಲಾಗಿದೆ. 

Trending News