KGF 3: ಕೆಜಿಎಫ್‌ 2 ಬಳಿಕ ಬರಲಿದ್ಯಾ ಕೆಜಿಎಫ್ 3! ಚಿತ್ರದ ಕೊನೆಯಲ್ಲಿ ಟ್ವಿಸ್ಟ್‌ ಬಿಚ್ಚಿಟ್ಟ ಗುಟ್ಟೇನು?

KGF 3: ಕೆಜಿಎಫ್ 2  ವಿಶ್ವದೆಲ್ಲೆಡೆ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿತ್ತು. ಆದರೆ ಇದೀಗ ಕೆಜಿಎಫ್‌ 2 ನೋಡಿದ ಜನರಲ್ಲಿ ಚಾಪ್ಟರ್‌ 3 ಬರಬಹುದಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಮುಖ್ಯ ಕಾರಣ ಸಿನಿಮಾದಲ್ಲಿನ ಕೊನೆಯ ಸೀನ್‌ ಅಂತೆ.

Written by - Chetana Devarmani | Last Updated : Apr 14, 2022, 12:33 PM IST
  • ಕೆಜಿಎಫ್ 2 ವಿಶ್ವದೆಲ್ಲೆಡೆ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿತ್ತು
  • ಇದೀಗ ಕೆಜಿಎಫ್‌ 2 ನೋಡಿದ ಜನರಲ್ಲಿ ಚಾಪ್ಟರ್‌ 3 ಬರಬಹುದಾ ಎಂಬ ಪ್ರಶ್ನೆ ಮೂಡಿದೆ
  • ಇದಕ್ಕೆ ಮುಖ್ಯ ಕಾರಣ ಸಿನಿಮಾದಲ್ಲಿನ ಕೊನೆಯ ಸೀನ್‌ ಅಂತೆ
KGF 3: ಕೆಜಿಎಫ್‌ 2 ಬಳಿಕ ಬರಲಿದ್ಯಾ ಕೆಜಿಎಫ್ 3! ಚಿತ್ರದ ಕೊನೆಯಲ್ಲಿ ಟ್ವಿಸ್ಟ್‌ ಬಿಚ್ಚಿಟ್ಟ ಗುಟ್ಟೇನು?  title=
ಕೆಜಿಎಫ್

ಟ್ರೈಲರ್, ಟೀಸರ್ ಮತ್ತು​ ಹಾಡುಗಳಿಂದ ಹೈಪ್‌ ಕ್ರಿಯೇಟ್‌ ಮಾಡಿದ್ದ ಕೆಜಿಎಫ್‌ 2 ಸಿನಿಮಾ ಇದೀಗ ವಿಶ್ವದಾದ್ಯಂತ 10,500 ಅಧಿಕ ಸ್ಕ್ರೀನ್ ಗಳಲ್ಲಿ ತೆರೆ ಕಂಡಿದೆ. ಭಾರತದಲ್ಲಿಯೇ 6000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ: KGF 2 ಹವಾ: ಇದ್ದಿಲು-ಮರಳಲ್ಲಿ ಮೂಡಿತು ʼರಾಕಿಭಾಯ್‌ ಪೋಸ್ಟರ್‌ʼ

ಕೊರೊನಾ ಕಾರಣದಿಂದಾಗಿ ತಡವಾಗಿ ರಿಲೀಸ್ ಆದ ಈ ಚಿತ್ರಕ್ಕಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದರು. ಮಧ್ಯರಾತ್ರಿಯಿಂದಲೇ ಯಶ್ ಅಭಿಮಾನಿಗಳು ಕೆಜಿಎಫ್‌2 ಚಿತ್ರವನ್ನು ವೀಕ್ಷಿಸುತ್ತಿದ್ದು, ಫುಲ್‌ ಫಿದಾ ಆಗಿದ್ದಾರೆ. 

ಕೆಜಿಎಫ್ ಚಾಪ್ಟರ್ 1ರ ಬಳಿಕ ಕೆಜಿಎಫ್ ಚಾಪ್ಟರ್ 2 ಬಗ್ಗೆ ಸಹಜವಾಗಿಯೇ ನಿರೀಕ್ಷೆ ಡಬಲ್‌ ಆಗಿತ್ತು. ಗರುಡನ ಕೊಲೆ.. ನರಾಚಿ ಲೋಕ.. ರಾಕಿಭಾಯ್‌ ಲುಕ್‌ನಿಂದಾಗಿ ಈ ಸಿನಿಮಾ ಹೈಪ್ ಪಡೆದುಕೊಂಡಿದೆ. ಕೆಜಿಎಫ್ 2  ವಿಶ್ವದೆಲ್ಲೆಡೆ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿತ್ತು. ಆದರೆ ಇದೀಗ ಕೆಜಿಎಫ್‌ 2 ನೋಡಿದ ಜನರಲ್ಲಿ ಚಾಪ್ಟರ್‌ 3 ಬರಬಹುದಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಮುಖ್ಯ ಕಾರಣ ಸಿನಿಮಾದಲ್ಲಿನ ಕೊನೆಯ ಸೀನ್‌ ಅಂತೆ.

ಹೌದು, ಕೆಜಿಎಫ್ ಚಾಪ್ಟರ್‌ 2 ಚಿತ್ರದ ಕೊನೆಯಲ್ಲಿ ಕೆಜಿಎಫ್ ತಯಾರಕರು ಪ್ರೇಕ್ಷಕರನ್ನು ಅಚ್ಚರಿಗೊಳಿಸಿದ್ದಾರಂತೆ. ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್2 ಸೃಷ್ಟಿಸಿದ್ದ ಕ್ರೇಜ್ ಅಷ್ಟಿಷ್ಟಲ್ಲ. 2018 ರಲ್ಲಿ ರಿಲೀಸ್ ಆಗಿದ್ದ  ಕೆಜಿಎಫ್ ಇಡೀ ವಿಶ್ವವೇ ಕನ್ನಡ  ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಅಲ್ಲಿಂದ ಕೆಜಿಎಫ್ ಕೇವಲ ಸಿನಿಮಾ ಆಗಿ ಮಾತ್ರವಲ್ಲ ಒಂದು ಬ್ರ್ಯಾಂಡ್ ಆಗಿ ಹವಾ ಹುಟ್ಟು ಹಾಕಿತು. ಇದೀಗ ಕೆಜಿಫ್‌ನ ಮತ್ತೊಂದು ಚಾಪ್ಟರ್‌ ಬರಲಿದ್ಯಾ ಎಂಬ ಪ್ರಶ್ನೆ ಜನ ಮಾನಸದಲ್ಲಿ ಮೂಡಿದೆ.

ಇದನ್ನೂ ಓದಿ: KGF 2 : ಕೆಜಿಎಫ್‌ಗೂ ಅಂಬೇಡ್ಕರ್​ಗೂ ಇದೆಯಾ ನಂಟು! ಇದೇ ದಿನ ಸಿನಿಮಾ ರಿಲೀಸ್‌ಗೆ ಕಾರಣ ಏನು?

ಕೆಜಿಎಫ್ 3 ಲೋಡ್ ಆಗುತ್ತಿದೆ ಎಂಬ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ ಕೆಜಿಎಫ್‌ 2 ಚಿತ್ರದ ಕೊನೆಯಲ್ಲಿ ಬರುವ ಆ ಒಂದು ಟ್ವಿಸ್ಟ್‌. ಆದರೆ ಕೆಜಿಎಫ್‌3 ಬಗ್ಗೆ ಚಿತ್ರತಂಡದ ಯಾರೊಬ್ಬರು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News