ಸಾಯುವ ಮುನ್ನ ತಾಯಿ ನರ್ಗಿಸ್ ದತ್ತ ಸಂಜಯ್ ದತ್ ಗೆ ಹೇಳಿದ್ದೇನು ಗೊತ್ತೇ?-ವೀಡಿಯೋ ವೈರಲ್

    

Last Updated : Jul 15, 2018, 11:54 AM IST
ಸಾಯುವ ಮುನ್ನ ತಾಯಿ ನರ್ಗಿಸ್ ದತ್ತ ಸಂಜಯ್ ದತ್ ಗೆ ಹೇಳಿದ್ದೇನು ಗೊತ್ತೇ?-ವೀಡಿಯೋ ವೈರಲ್  title=

ನವದೆಹಲಿ: ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನ ಕಥೆ ಆಧಾರಿತ ಚಿತ್ರ 'ಸಂಜು'  ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಅಂಶಗಳನ್ನು ಬಹಿರಂಗಪಡಿಸಿದೆ.ಅದರಲ್ಲಿ ಪ್ರಮುಖವಾಗಿ ಮಾದಕವಸ್ತು ವ್ಯಸನ, ಹಲವಾರು ನೂರಾರು ಮಹಿಳೆಯರ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದು ಹೀಗೆ ಈ ಎಲ್ಲಾ ಅಂಶಗಳು ಈಗ ಈ ಚಿತ್ರದ ಮೂಲಕ ಜನಸಾಮಾನ್ಯರಿಗೆ ತಿಳಿದಿವೆ. ಇತ್ತೀಚೆಗೆ, ಸಂಜಯ್ ದತ್ ತಾಯಿ ಸಾವಿನ ಬಗ್ಗೆ ಮಾತನಾಡುತ್ತಿರುವ ಹಳೆಯ ವೀಡಿಯೋವೊಂದು ವೈರಲ್ ಆಗಿದೆ.

 

#SanjayDutt had not cried when his mother Nargis died and for three long years his wounds were festering when suddenly he got tapes of his mother's dying wish and finally burst out crying Sanjay was at that a drugs rehab centre in the US. Father Sunil Dutt sent him some tapes of Nargis talking during her final days so as to help him in his rehab. "When Sanjay got the tapes from sunil he had no idea what was on them. He pressed play and suddenly the room was filled with Nargis's voice. He remembered his childhood, when his mother voice would reverberated through the Dutt mansion," 😅 His mother's voice was weak, broken and immense pain. 💔 But #NargisDutt still spoke of her dreams for her beloved son, and gave him some gentle advice. #SanjayDutt #SanjayBaba

A post shared by Filmy News (@__filmynews__) on

ಈ ವೀಡಿಯೋದಲ್ಲಿ  ಸಂಜಯ್ ದತ್ತ್ ಮಾತನಾಡುತ್ತಾ "ನನ್ನ ತಾಯಿ ನಿಧನರಾದಾಗ ನಾನು ಅಳಲಿಲ್ಲ, ಆಗ ನನಗೆ ಯಾವುದೇ ಭಾವನೆಗಳೇ ಇರಲಿಲ್ಲ" ಎಂದು ಸಂಜಯ್ ದತ್ತ್ ವಿಡಿಯೋದಲ್ಲಿ ಹೇಳಿದ್ದಾರೆ. "ನ್ಯೂಯಾರ್ಕ್ ನ ಆಸ್ಪತ್ರೆಯಲ್ಲಿದ್ದಾಗ  ನನ್ನ ತಾಯಿ ಧ್ವನಿಯನ್ನು ಕೇಳಿದ್ದೆ ಅದರಲ್ಲಿ ಅವಳು ತಾನೆಷ್ಟು ಪ್ರೀತಿಸುತ್ತಿದ್ದಳು,ತನಗೋಸ್ಕರ ಎಷ್ಟು ಆರೈಕೆ ಮಾಡುತ್ತಿದ್ದಳು ಎಂದು ಹೇಳಿದ್ದರು, ಇದಾದ ನಂತರ ನಾನು ನಾಲ್ಕೈದು ಘಂಟೆಗಳವರೆಗೆ ಕಣ್ಣೀರಿಟ್ಟಿದ್ದೆ. ಎಂದು ತಿಳಿಸಿದ್ದಾರೆ. 

ಸಂಜಯ್ ದತ್ ಗೆ ನೀಡಿದ ಆಡಿಯೋ ಸಂದೇಶದಲ್ಲಿ ನರ್ಗಿಸ್ ದತ್ " ಸಂಜು ಎಲ್ಲದಕ್ಕಿಂತ ಹೆಚ್ಚಾಗಿ ನಿನ್ನ ವಿನಮ್ರತೆ,ನಿನ್ನ ಗುಣವನ್ನು ಉಳಿಸಿಕೋ,ಆದರೆ ಎಂದಿಗೂ ಅದನ್ನು ತೋರಿಸಿಕೊಳ್ಳಬೇಡ,ಯಾವಾಗಲೂ ವಿನಯದಿಂದಿರುರು ಹಿರಿಯರಿಗೆ ಗೌರವವನ್ನು ನೀಡು ಅದನ್ನು ನಿನ್ನನ್ನು ಹೆಚ್ಚು ದೂರಕ್ಕೆ ಕರೆದೊಯ್ಯುತ್ತದೆ ಅಲ್ಲದೆ ನಿನ್ನ ಕಾರ್ಯಕ್ಕೆ ಅದು ಶಕ್ತಿಯನ್ನು ತುಂಬುತ್ತದೆ" ಎಂದು ತಿಳಿಸಿದ್ದಾರೆ.

ನರ್ಗಿಸ್ ದತ್ ಒಂದಾನೊಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಅಗ್ರಗಣ್ಯ ನಟಿ, 1981ರಲ್ಲಿ ಅವರು ಕ್ಯಾನ್ಸರ್ ನಿಂದಾಗಿ 51 ನೆ ವಯಸ್ಸಿನಲ್ಲಿ ಮೃತಪಟ್ಟಿದ್ದರು. 

Trending News