Deepika Das Eliminated : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್ 9 ಗೆ ಇಂದು ತೆರೆ ಬೀಳುತ್ತಿದೆ. ರಿಯಾಲಿಟಿ ಶೋನ ಇತ್ತೀಚಿನ ಸೀಸನ್ ಈ ವರ್ಷ ಸೆಪ್ಟೆಂಬರ್ 24 ರಂದು ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ದಿವ್ಯಾ ಉರುಡುಗ, ರಾಕೇಶ್ ಅಡಿಗ, ಪ್ರಶಾಂತ್ ಸಂಬರ್ಗಿ, ಸಾನ್ಯಾ ಅಯ್ಯರ್, ಐಶ್ವರ್ಯ ಪಿಸ್ಸೆ, ಅರುಣ್ ಸಾಗರ್, ಕಾವ್ಯಶ್ರೀ ಗೌಡ, ದರ್ಶ್ ಚಂದ್ರಪ್ಪ ಅನುಪಮಾ ಗೌಡ, ರೂಪೇಶ್ ರಾಜಣ್ಣ, ಅಮೂಲ್ಯ ಗೌಡ, ವಿನೋದ್ ಗೋಬರಗಾಲ, ಮತ್ತು ನೇಹಾ ಗೌಡ ಸೇರಿದಂತೆ 15 ಸ್ಪರ್ಧಿಗಳೊಂದಿಗೆ ಪ್ರಾರಂಭವಾಯಿತು.
ಮೂರನೇ ರನ್ನರ್ ಅಪ್ ಆಗಿ ರೂಪೇಶ್ ರಾಜಣ್ಣ ಔಟ್ ಆದ ಬಳಿಕ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡರು. ಈಗ ಬಿಗ್ ಬಾಸ್ ಮನೆಯಿಂದ ದೀಪಿಕಾ ದಾಸ್ ಔಟ್ ಆಗಿದ್ದಾರೆ. ಈ ಮೂಲಕ ಎರಡನೇ ರನ್ನರ್ ಅಪ್ ಆಗಿದ್ದಾರೆ.
ಇದನ್ನೂ ಓದಿ : BBK 9 Winner : ಈ ಬಾರಿ ಬಿಗ್ ಬಾಸ್ ವಿನ್ನರ್‌ಗೆ ಏನೆಲ್ಲಾ ಸಿಗಲಿದೆ? ಬಹುಮಾನದ ಒಟ್ಟು ಮೊತ್ತ ಎಷ್ಟು?
ಹಿರಿಯ ಸ್ಪರ್ಧಿಯಾಗಿ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದ ಕನ್ನಡ ನಟಿ ದೀಪಿಕಾ ದಾಸ್ ಬಿಗ್ ಬಾಸ್ ಕನ್ನಡ ಸೀಸನ್ 9 ರ ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ದೀಪಿಕಾ ಬಿಗ್ ಬಾಸ್ ಕನ್ನಡ ಸೀಸನ್ 7 ರ ಫೈನಲಿಸ್ಟ್ ಕೂಡ ಆಗಿದ್ದರು. ಎರಡನೇ ಬಾರಿಗೆ ಬಿಗ್ ಬಾಸ್ ಮನೆಯೊಳಗೆ ದೀಪಿಕಾ ಇದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ದೀಪಿಕಾ ದಾಸ್ ಅವರ ಪ್ರವೇಶವು ಬಹು ನಿರೀಕ್ಷಿತವಾಗಿತ್ತು ಏಕೆಂದರೆ ನಟಿ ಪ್ರೋಮೋದಲ್ಲಿಯೂ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಕನ್ನಡ 9 ರ ಸೀಸನ್ ಪ್ರೀಮಿಯರ್ ಸಮಯದಲ್ಲಿ ನಟಿ ಹಿರಿಯ ಸ್ಪರ್ಧಿಗಳಲ್ಲಿ ಒಬ್ಬರಾಗಿ ರಿಯಾಲಿಟಿ ಶೋಗೆ ಪ್ರವೇಶಿಸಿದರು. ಎರಡನೇ ಬಾರಿಗೆ ಬಿಗ್ ಬಾಸ್ ಮನೆಯೊಳಗೆ ದೀಪಿಕಾ ಅವರ ಪ್ರಯಾಣವು ಅಸಾಧಾರಣವಾಗಿದೆ. ಪ್ರತಿ ಕೆಲಸ ಮತ್ತು ಚಟುವಟಿಕೆಯ ಸಮಯದಲ್ಲಿ ದೀಪಿಕಾ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ತಮ್ಮ ಸ್ಪರ್ಧಾತ್ಮಕ ಮನೋಭಾವಕ್ಕಾಗಿ ಬಿಗ್ ಬಾಸ್ ಮನೆಯ ಹೊರಗೆ ಅಗಾಧ ಖ್ಯಾತಿಯನ್ನು ಹೊಂದಿದ್ದಾರೆ.
ಸೀಸನ್‌ನ ಮೂರನೇ ವಾರದಲ್ಲಿ ನಟಿ ಬಿಗ್ ಬಾಸ್ ಕನ್ನಡ 9 ರ ಮೊದಲ ಮಹಿಳಾ ಕ್ಯಾಪ್ಟನ್ ಆದರು. ಕ್ಯಾಪ್ಟನ್ ಆದ ಮೊದಲ ಮಹಿಳಾ ಸ್ಪರ್ಧಿ ಎಂಬ ಕೀರ್ತಿ ಪಡೆದರು. ಆದರೆ, ದೀಪಿಕಾ ಅವರ ಕ್ಯಾಪ್ಟನ್ಸಿ ಕೇಕ್‌ವಾಕ್ ಆಗಿರಲಿಲ್ಲ. ತನ್ನ ಸಹ-ಸ್ಪರ್ಧಿಗಳು ಮತ್ತು ಕಾರ್ಯಗಳಿಗೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಅವರು ಬಹಳಷ್ಟು ಅಡೆತಡೆಗಳನ್ನು ಎದುರಿಸಬೇಕಾಗಿತ್ತು.
ಇದನ್ನೂ ಓದಿ : Bigg Boss Kannada 9 ಗ್ರ್ಯಾಂಡ್ ಫಿನಾಲೆ: ವಿನ್ನರ್ ಘೋಷಣೆಗೆ ಕೌಂಟ್‌ಡೌನ್, ಯಾರ ಕೈ ಸೇರಲಿದೆ ಟ್ರೋಫಿ?
ಆ ಬಳಿಕ ಸುಮಾರು ಐವತ್ತೈದು ದಿನಗಳ ನಂತರ ದೀಪಿಕಾ ಅವರ ಬಿಗ್ ಬಾಸ್ ಪ್ರಯಾಣವು ಕೊನೆಗೊಂಡಿತು. ಆದರೆ ಮರುದಿನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ಪ್ರವೇಶಿಸಿದರು. ರಿಯಾಲಿಟಿ ಶೋನಿಂದ ಅವರು ಮಧ್ಯದಲ್ಲಿ ಎಲಿಮಿನೇಟ್ ಆದರು. ಆ ಬಳಿಕ ದೀಪಿಕಾ 'ವೈಲ್ಡ್ ಕಾರ್ಡ್' ಸ್ಪರ್ಧಿಯಾಗಿ ಅಚ್ಚರಿಯ ಮರು-ಪ್ರವೇಶವನ್ನು ಮಾಡಿದರು. ವಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ಬಂದ ದೀಪಿಕಾ ತಮ್ಮ ಆಟದ ವರಸೆಯನ್ನೇ ಬದಲಿಸಿದರು. ಮೊದಲು ಅಷ್ಟಾಗಿ ಯಾರೊಂದಿಗೂ ಬರೆಯದೇ ಇರುತ್ತಿದ್ದ ದೀಪಿಕಾ, ನಂತರ ಎಲ್ಲರೊಂದಿಗೆ ಫ್ರೆಂಡ್ಲಿಯಾಗಿರುಲು ಶುರು ಮಾಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.