ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆ ಬಗ್ಗೆ ಕ್ರೇಜಿಸ್ಟಾರ್ ನುಡಿದ ಭವಿಷ್ಯ ಏನು?

ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆಯ ‘ಬನಾರಸ್’ ಪ್ಯಾನ್ ಇಂಡಿಯಾ ಸಿನಿಮಾ ನವೆಂಬರ್ 4ರಂದು 5 ಭಾಷೆಯಲ್ಲಿ ರಿಲೀಸ್ ಆಗುತ್ತಿದೆ

Written by - YASHODHA POOJARI | Edited by - Puttaraj K Alur | Last Updated : Sep 28, 2022, 12:05 PM IST
  • ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆಯ ‘ಬನಾರಸ್’ ನ.4ರಂದು ರಿಲೀಸ್ ಆಗಲಿದೆ
  • ಝೈದ್ ಖಾನ್ ನಟನೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಕ್ರೇಜಿಸ್ಟಾರ್ ವಿ.ರವಿಚಂದ್ರನ್
  • ಝೈದ್‍ ಖಾನ್‍ಗೆ ಆಲ್ ದಿ ಬೆಸ್ಟ್ ಹೇಳಿದ ಬಾಲಿವುಡ್ ನಟ ಅರ್ಬಾಜ್ ಖಾನ್
ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆ ಬಗ್ಗೆ ಕ್ರೇಜಿಸ್ಟಾರ್ ನುಡಿದ ಭವಿಷ್ಯ ಏನು? title=
‘ಬನಾರಸ್’ ನ.4ರಂದು ರಿಲೀಸ್ ಆಗಲಿದೆ

ಬೆಂಗಳೂರು: ಝೈದ್ ಖಾನ್… ಕನ್ನಡ ಚಿತ್ರರಂಗದ ಭರವಸೆಯ  ನಟ. ‘ಬನಾರಸ್’ ಅನ್ನೋ ವಿಭಿನ್ನ ಟೈಟಲ್ ಹೊಂದಿರೋ ತಮ್ಮ ಚೊಚ್ಚಲ ಸಿನಿಮಾ ಮೂಲಕ ನಾಯಕನನಾಗಿ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ‘ಬನಾರಸ್’ ಸಿನಿಮಾದ ಟ್ರೈಲರ್ 5 ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಸಿನಿಪ್ರೇಮಿಗಳ ಮನಸ್ಸು ಕದಿದ್ದಿದೆ. ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮತ್ತು ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಭಾಗವಹಿಸಿದ್ದರು.

‘ಬನಾರಸ್’ ಸಿನಿಮಾದ ಕನ್ನಡ ಟ್ರೈಲರ್ ಅನ್ನು ರಿಲೀಸ್ ಮಾಡಿದ ರವಿಮಾಮ ಝೈದ್ ಖಾನ್ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡರು. ‘ಝೈದ್ ಖಾನ್ ನೋಡಿದ್ರೆ  ಇದು ಆತನ ಮೊದಲ ಸಿನಿಮಾ ಅಂತಾ ಅನಿಸಲ್ಲ. ಸಾಕಷ್ಟು ಸಿನಿಮಾ ಮಾಡಿರುವ ರೀತಿ ಕಾಣುತ್ತಿದ್ದಾರೆ. ‘ಬನಾರಸ್’ ಸಿನಿಮಾದ ಟ್ರೈಲರ್ ತಲೆಗೆ ಹುಳ ಬಿಟ್ಟಂತಾಗಿದೆ. ನಾನು ಈ ಹುಡುಗನನ್ನು ಯಾವತ್ತೂ ನೋಡಿಲ್ಲ. ಮೊನ್ನೆಯಷ್ಟೇ ಮನೆಗೆ ಬಂದು ಟ್ರೈಲರ್ ಬಿಡುಗಡೆ  ಕಾರ್ಯಕ್ರಮಕ್ಕೆ ಬರಲೇಬೇಕು ಅಂತಾ ಮನವಿ ಮಾಡಿದ. ಸ್ವಲ್ಪ ಕೆಲಸ ಇದೆ, ಹೀಗಾಗಿ ನಾನು ಬರಲ್ಲ ಅಂದ್ರೂ ಕೇಳಲಿಲ್ಲ’ ಅಂತಾ ನಗು ನಗುತ್ತಲೇ ಕ್ರೇಜಿಸ್ಟಾರ್ ತಿಳಿಸಿದರು.

ಇದನ್ನೂ ಓದಿ: Mahesh Babu : ನಟ ಮಹೇಶ್ ಬಾಬು ತಾಯಿ ಇಂದಿರಾ ದೇವಿ ಇನ್ನಿಲ್ಲ

ಮಾತು ಮುಂದುವರೆಸಿದ ರವಿಮಾಮ, ‘ನಾನು ಝೈದ್ ಖಾನ್‍ಗೆ ಇಲ್ಲಿಯವರೆಗೆ ಎಲ್ಲಿದ್ದೆ? ಯಾಕೆ ಬಂದಿಲ್ಲ? ಅಂತಾ ಕೇಳಿದೆ. ಆವತ್ತು ಬಂದಿಲ್ಲ ಅಂತಲೇ ಈಗ ಬಂದೆ ಅಂತಾ ಝೈದ್ ಖಾನ್ ನನಗೆ ತಿಳಿಸಿದ. ‘ಬನಾರಸ್’ ಚಿತ್ರದಲ್ಲಿ ಝೈದ್ ಖಾನ್ ಅದ್ಭುತವಾಗಿ ನಟಿಸಿದ್ದಾನೆ’ ಅಂತಾ ಇದೇ ವೇಳೆ ಮೆಚ್ಚುಗೆಯ ಮಾತುಗಳನ್ನಾಡಿದರು. ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮಾತನಾಡಿ, ‘ಸೋಲು-ಗೆಲುವು ಎಲ್ಲಾ ಕಾಮನ್. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಮುಂದೆ ಸಾಗಬೇಕು’ ಎಂದು ಝೈದ್‍ ಖಾನ್‍ಗೆ ಶುಭ ಹಾರೈಸಿದರು. ‘ಬನಾರಸ್’ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ನಾನೇ ಬರ್ತೀನಿ ಅಂತಾ ಅರ್ಬಾಜ್ ಖಾನ್ ಹೇಳಿದ್ರು. ಇದರಿಂದ ನನಗೆ ತುಂಬಾ ಖುಷಿಯಾಯ್ತು ಅಂತಾ ಇದೇ ಸಂದರ್ಭದಲ್ಲಿ ಝೈದ್ ಖಾನ್ ಹೇಳಿದರು.   

ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆಯ ‘ಬನಾರಸ್’ ಪ್ಯಾನ್ ಇಂಡಿಯಾ ಸಿನಿಮಾ ನವೆಂಬರ್ 4ರಂದು 5 ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಇದೀಗ ರಿಲೀಸ್ ಆಗಿರೋ ಟ್ರೈಲರ್ ಸಿನಿಮಾದ ಬಗೆಗಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ‘ಬನಾರಸ್’ ಸಿನಿಮಾದ ಟ್ರೈಲರ್ ನೋಡಿದ ಫ್ಯಾನ್ಸ್ ಕೂಡ ಫುಲ್ ಖುಷ್ ಆಗಿದ್ದಾರೆ.  ಸ್ಯಾಂಡಲ್‍ವುಡ್‍ನ ಸ್ಟಾರ್ ಡೈರೆಕ್ಟರ್ ಜಯತೀರ್ಥ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇಡೀ ಸಿನಿಮಾದ ಚಿತ್ರೀಕರಣವು ‘ಬನಾರಸ್‍’ನಲ್ಲಿ ನಡೆದಿದೆ.

ಇದನ್ನೂ ಓದಿ: BBK 9 Day 3: ವಿದೂಷಕ, ಗೆಳೆಯ, ನಾಯಕ ಅರುಣ್ ಸಾಗರ್‌! ಉಳಿದವರಿಗೆ ಸಿಕ್ಕಿದ್ದೇನು?

‘ಬನಾರಸ್’ ನಗರದ ಸೌಂದರ್ಯವನ್ನು ತೆರೆಯ ಮೇಲೆ ನೋಡಿ ಆನಂದಿಸೋ ಭಾಗ್ಯ ಇನ್ನೇನು ಕೆಲವೇ ದಿನಗಳಲ್ಲಿ ಸಿನಿಪ್ರೇಮಿಗಳಿಗೆ ಸಿಗಲಿದೆ. ಅಜನೀಶ್​ ಬಿ.ಲೋಕನಾಥ್​ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಅದ್ವೈತ್​ ಗುರುಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ. ತಿಲಕ್​ ರಾಜ್​ ಬಲ್ಲಾಳ್​ ಅವರು ಬಂಡವಾಳ ಹೂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News