ಬೆಂಗಳೂರು: ದೊಡ್ಮನೆ ಎಂದರೆ ಕೇವಲ ಸಿನಿಮಾ ಪ್ರಿಯಕರರಿಂದ ಮೆಚ್ಚುಗೆಗಳಿಸದೇ ರಾಜಕೀಯ ನಾಯಕರಿಗೂ ಈ ಮನೆಯ ನಂಟು ಇದೆ. ಡಾ.ರಾಜ್‌ಕುಮಾರ್ ಹಾಗೂ ಅವರ ಕುಟುಂಬದವರು ಸಿನಿಮಾ ಮಾತ್ರವಲ್ಲದೇ ಅದರಾಚೆಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಆನಾದಿ ಕಾಲದಿಂದಲೂ ದೊಡ್ಮನೆ ಕುಟುಂಬ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಾ ಬಂದಿದೆ. ಅವರ ಅಕಾಡೆಮಿಯಿಂದ ಸ್ಕಾಲರ್‌ಶಿಪ್ ನೀಡುವುದರ ಮೂಲಕ ಹಲವು ವಿದ್ಯಾರ್ಥಿಗ ಸಹಾಯಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ದೊಡ್ಮನೆ ಕುಟುಂಬದಿಂದ ಅಪ್ಪಾಜಿ ಹೆಸರಲ್ಲಿ ಅಪ್ಪು, ಶಿವಣ್ಣ, ರಾಘವೇಂದ್ರ ರಾಜ್‌ಕುಮಾರ್ ನಿರ್ಮಿಸಿದ ಡಾ ರಾಜ್‌ಕುಮಾರ್ ಐಎಎಸ್ ಅಕಾಡೆಮಿಯನ್ನು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಇದನ್ನೂ ಓದಿ: Gujarati Movie: ಕನ್ನಡದಲ್ಲಿ ಬರ್ತಿದೆ ಗುಜರಾತಿ ಸಿನಿಮಾ; ʼರಾಯರು ಬಂದರು ಮಾವನ ಮನೆಗೆʼ...!
ಈ ಬಾರಿಯೂ ರಾಜ್‌ಕುಮಾರ್ ಅಕಾಡೆಮಿಯಿಂದ ಹಲವು ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದರಿಂದ ಅವರಿಗೆ ಸನ್ಮಾನ ಜೊತೆಗೆ ʼಅಪ್ಪು ಹೆಸರಿನ ಪೃಥ್ವಿ ಸ್ಕಾಲರ್‌ಶಿಪ್ ಟೆಸ್ಟ್ ಲೋಗೋ ಬಿಡುಗಡೆʼ ಕಾರ್ಯಕ್ರಮವನ್ನು ರಾಜ್‌ಕುಮಾರ್ ಕುಟುಂಬದವರು ಆಯೋಜಿಸಿದ್ದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ ಸಿಎಂ ಸಿದ್ದರಾಮಯ್ಯ ಪೃಥ್ವಿ ಸ್ಕಾಲರ್‌ಶಿಪ್ ಲೋಗೋ ಲೋಗೋ ಲಾಂಚ್ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದ ಅವರು, ಡಾ ರಾಜ್‌ಕುಮಾರ್ ಕುಟುಂಬದ ಸೇವೆಗಳನ್ನು ಸ್ಮರಿಸಿದರು. ಡಾ ರಾಜ್ ಈ ನಾಡು ಕಂಡ ಶ್ರೇಷ್ಠ ನಟ, ಅವರು ಹಳ್ಳಿಯವರು ನಮ್ಮ ಜಿಲ್ಲೆಯವರೇ. ಅವರನ್ನ ಭೇಟಿಯಾದಾಗ ಬನ್ನಿ ಬನ್ನಿ ನಮ್ ಕಾಡಿನವರು ಅಂತ ಕರೀತಾ ಇದ್ರು. ಜನರನ್ನ ಬಹಳ ಗೌರವಯುತವಾಗಿ ಮಾತಾಡಿಸುವ ಸಂಸ್ಕೃತಿಯನ್ನ ರೂಢಿಸಿಕೊಂಡಿದ್ದರು, ಅದನ್ನ ನಾವು ಸಹ ರೂಢಿಸಿಕೊಳ್ಳಬೇಕು.
ಇದನ್ನೂ ಓದಿ: Pathan': ಮತ್ತೆ 3 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ‘ಪಠಾಣ್’ ಬಿಡುಗಡೆ; ಇಲ್ಲಿದೆ ಚಿತ್ರ ಮಂದಿರಗಳ ವಿವರ.. !
ಎಲ್ಲರನ್ನು ಗೌರವಿಸುವುದನ್ನು ಪ್ರೀತಿಸುವುದನ್ನು ಕಲಿಯಬೇಕು. ಅದನ್ನು ರಾಜಕುಮಾರ್ ರಿಂದ ಕಲೀಬೇಕು, ಮಕ್ಕಳಂತಿದ್ದವರು ರಾಜಕುಮಾರ್, ಅವರು ಯಾವತ್ತು ಕೆಟ್ಟದ್ದನ್ನ ಯೋಚನೆ ಮಾಡಿರಲಿಲ್ಲ ಎಂದು ಗುಣಗಾನ ಮಾಡಿದರು.
ಅಷ್ಟೇ ಅಲ್ಲದೇ ಪುನೀತ್ ರಾಜ್ ಕುಮಾರ್ ಜನರ ಪ್ರೀತಿ ಗಳಿಸಿದ್ದ ಅಪರೂಪದ ನಟ. ಅವರ ಹೆಸರಲ್ಲಿ ಸ್ಕಾಲರ್ ಶಿಪ್ ಕೊಡುತ್ತಿರುವುದು ಬಹಳ ಒಳ್ಳೆಯ ಕೆಲಸ. ಸರ್ಕಾರಿ ಕೆಲಸ ದೇವರ ಕೆಲಸ ಅಂತ ಕೆಲಸ ಮಾಡಿ ಅಂತ ಕೆಲಸದಲ್ಲಿ ದೇವರನ್ನು ಕಾಣಿ ಎಂದು ಹೊಸದಾಗಿ ಐಎಎಸ್ ಅಧಿಕಾರಿಗಳಾಗಲಿರುವ ಯುವಕರಿಗೆ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:Dhoni's First Movie : ಸಿನಿಮಾ ನಿರ್ಮಾಣದಲ್ಲಿ ಕ್ರಿಕೆಟ್ ದಿಗ್ಗಜ ಧೋನಿ : ಹೇಗಿದೆ ಗೊತ್ತಾ ಚಿತ್ರದ ಟೀಸರ್ !
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.