ವಿರುಷ್ಕಾ ದಂಪತಿ ಪುತ್ರಿ 'AnVi' ನಿವಾಸ ಹೇಗಿದೆ ಗೊತ್ತಾ?

Virat-Anushka Baby AnVi'' - ವಿರಾಟ್ ಹಾಗೂ ಅನುಷ್ಕಾ ಶೀಘ್ರದಲ್ಲಿಯೇ ತಮ್ಮ ಮುದ್ದು ಮಗಳ ಜೊತೆಗೆ ಮನೆ ಸೇರಲಿದ್ದಾರೆ. ಹಾಗಾದರೆ ಬನ್ನಿ ವಿರುಷ್ಕಾ ಐಶಾರಾಮಿ ಬಂಗಲೆಯ ನೋಟವನ್ನು ನೀವು ನೋಡಿ.

Written by - Nitin Tabib | Last Updated : Jan 12, 2021, 04:48 PM IST
  • ವಿರಾಟ್-ಅನುಷ್ಕಾ ಅವರ ಈ ಐಶಾರಾಮಿ ಮನೆ ಮುಂಬೈನ ವರ್ಲಿ ಪ್ರದೇಶದಲ್ಲಿದೆ.
  • ಅವರ ಅಪಾರ್ಟ್ಮೆಂಟ್ ಹೆಸರು 'Omkar 1973".
  • ಮದುವೆಯ ಬಳಿಕ 2017ರಲ್ಲಿ ಈ ಉಭಯ ತಾರೆಯರು ಈ ಮನೆಗೆ ಶಿಫ್ಟ್ ಆಗಿದ್ದಾರೆ.
ವಿರುಷ್ಕಾ ದಂಪತಿ ಪುತ್ರಿ 'AnVi' ನಿವಾಸ ಹೇಗಿದೆ ಗೊತ್ತಾ? title=
Virat-Anushka Baby AnVi (File Photo)

Virat-Anushka Baby 'AnVi' - ನವದೆಹಲಿ: ಟೀಂ ಇಂಡಿಯಾ ನಾಯಕ್ ವಿರಾಟ್ ಕೊಹ್ಲಿ ಹಾಗೂ ಖ್ಯಾತ ಬಾಲಿವುಡ್ ನಟಿ  ಅನುಷ್ಕಾ ಶರ್ಮಾ ಮುದ್ದಾದ ಮಗಳಿಗೆ ಪೋಷಕರಾಗಿದ್ದಾರೆ. ಶೀಘ್ರದಲ್ಲಿಯೇ ಇಬ್ಬರು ಆಸ್ಪತ್ರೆಯಿಂದ ತಮ್ಮ ಮಗಳನ್ನು ಕರೆದುಕೊಂಡು ಮನೆಗೆ ತೆರಳಲಿದ್ದಾರೆ. ಇಂದು ನಾವು ನಿಮಗೆ ವಿರುಷ್ಕಾ ದಂಪತಿಗಳ ಐಶಾರಾಮಿ ಮನೆಯನ್ನು ತೋರಿಸಲಿದ್ದೇವೆ.

ವಿರಾಟ್-ಅನುಷ್ಕಾ ಅವರ ಈ ಐಶಾರಾಮಿ ಮನೆ ಮುಂಬೈನ ವರ್ಲಿ ಪ್ರದೇಶದಲ್ಲಿದೆ. ಅವರ ಅಪಾರ್ಟ್ಮೆಂಟ್ ಹೆಸರು 'Omkar 1973". ಮದುವೆಯ ಬಳಿಕ 2017ರಲ್ಲಿ ಈ ಉಭಯ ತಾರೆಯರು ಈ ಮನೆಗೆ ಶಿಫ್ಟ್ ಆಗಿದ್ದಾರೆ. ಮದುವೆಗೂ ಮುನ್ನವೇ 2016ರಲ್ಲಿ ಈ ಇಬ್ಬರು ಈ ಮನೆಯನ್ನು ಖರೀದಿಸಿದ್ದರು ಎಂಬ ವರದಿಗಳಿವೆ.

ಈ ಅಪಾರ್ಟ್ಮೆಂಟ್ ಬೆಲೆ 34 ಕೋಟಿ ರೂ. ಆಗಿದೆ. ಈ ಐಶಾರಾಮಿ ಮನೆ 7, 171 ಚದರ ಅಡಿ ಜಗದಲ್ಲಿ ಹರಡಿದೆ.

ವಿರುಷ್ಕಾ ಫ್ಲಾಟ್ ಓಂಕಾರ್ 1973 ಅಪಾರ್ಟ್ಮೆಂಟ್ ನ 35ನೇ ಮಹಡಿಯಲ್ಲಿದೆ.

ಈ ಮನೆಯಲ್ಲಿ ಒತ್ತು ನಾಲ್ಕು ಬೆಡ್ ರೂಮ್ ಹಾಗೂ ಒಂದು ಪ್ರೈವೇಟ್ ಟೆರೆಸ್, ಗಾರ್ಡನ್ ಏರಿಯಾ ಹಾಗೂ ಚಿಕ್ಕದಾದ ಒಂದು ಜಿಮ್ ಕೂಡ ಇದೆ. ಇತ್ತೀಚೆಗಷ್ಟೇ ಅನುಷ್ಕಾ () ಸಾಮಾಜಿಕ ಮಾಧ್ಯಮಗಳಲ್ಲಿ ಗಾರ್ಡನ್ ಭಾವಚಿತ್ರವನ್ನು ಹಂಚಿಕೊಂಡಿದ್ದರು. 

ಕಾರವಾಚೌತ್ ಸಂದರ್ಭದಂದು ಈ ಜೋಡಿ ತಮ್ಮ ಟೆರೆಸ್ ನ ಭಾವಚಿತ್ರ ಹಂಚಿಕೊಂಡಿತ್ತು.

 
 
 
 

 
 
 
 
 
 
 
 
 
 
 

A post shared by Virat Kohli (@virat.kohli)

ವಿರಾಟ್ (​Virat Kohli)  ಮನೆಯ ಹೊರಗಿನ ನೋಟ ತುಂಬಾ ಸುಂದರವಾಗಿದೆ. ಆಗಾಗ ಇಬ್ಬರು ಈ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

 
 
 
 

 
 
 
 
 
 
 
 
 
 
 

A post shared by Virat Kohli (@virat.kohli)

ಮನೆಯಲ್ಲಿ ಫೋಟೋ ಶೂಟ್ ನಡೆಸಲು ಅನುಷ್ಕಾ (​anushka sharma) ಅವರ ವಿಶೇಷ ಸ್ಥಳವೊಂದಿದೆ. ಈ ಸ್ಥಳದಲ್ಲಿ ಅನುಷ್ಕಾ ಪ್ರಿರೆಡ್ ಕಾರ್ಪೆಟ್ ಮೇಲೆ ಭಾವಚಿತ್ರ ಕ್ಲಿಕ್ಕಿಸುತ್ತಾಳೆ. ಈ ಬ್ಯಾಕ್ ಡ್ರಾಪ್ ನಲ್ಲಿ ಅನುಷ್ಕಾ ತಮ್ಮ ಸಾಕಷ್ಟು ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ- Virat Kohli : ಹೆಣ್ಣು ಮಗುವಿಗೆ ಜನ್ಮ ನೀಡಿದ Anushka Sharma

ಈ ವೈಭವೋಪೇತ ಮನೆಯ ಬಾಲ್ಕನಿ ಕೂಡ ತುಂಬಾ ಸುಂದರವಾಗಿದೆ. ಹಬ್ಬದ ದಿನಗಳಲ್ಲಿ ಅನುಷ್ಕಾ ಹಾಗೂ ವಿರಾಟ್ ಇಲ್ಲಿ ಭಾವಚಿತ್ರಗಳನ್ನು ಕ್ಲಿಕ್ಕಿಸುತ್ತಾರೆ. ಇತ್ತೀಚೆಗಷ್ಟೇ ದೀಪಾವಳಿ ಹಬ್ಬದ ವೇಳೆ ಬಾಲ್ಕನಿಯಲ್ಲಿ ಭಾವಚಿತ್ರಗಳನ್ನು ಕ್ಲಿಕ್ಕಿಸಿದ್ದರು ಹಾಗೂ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು.

ಇದನ್ನು ಓದಿ- Video:ವಿರುಷ್ಕಾ ದಂಪತಿಯ ಮುದ್ದಾದ ಮಗಳ ಮೊದಲ ಝಲಕ್ ಹಂಚಿಕೊಂಡ ವಿರಾಟ್ ಸಹೋದರ

 
 
 
 

 
 
 
 
 
 
 
 
 
 
 

A post shared by Virat Kohli (@virat.kohli)

ಈ ಜೋಡಿ ಜೊತೆ ಜೊತೆಯಾಗಿ ಸೀರಿಸ್ ಹಾಗೂ ಚಿತ್ರಗಳನ್ನು ಸಹ ವಿಕ್ಷೀಸುತ್ತದೆ.

ಇದನ್ನು ಓದಿ -Virushka ಮಗಳಿಗೆ ನಾಮಕರಣ ಮಾಡುವ ಸಂತ ಇವರು..! ಆ ಸಿದ್ದಪುರುಷ ಯಾರು..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News