Challenging Star Darshan: ನಟ ದರ್ಶನ್‌ ಕೈ ಶಸ್ತ್ರಚಿಕಿತ್ಸೆ ಯಶಸ್ವಿ, ಶೀಘ್ರವೇ ಡಿಸ್ಚಾರ್ಜ್?

Darshan: Actor Darshan's hand surgery successful: ಮೋಹನ್‌ ಬಿ ಕೆರೆ ಸ್ಟುಡಿಯೋದಲ್ಲಿ ದೊಡ್ಡ ಸೆಟ್‌ ಹಾಕಿ ʼಡೆವಿಲ್‌ʼ ಸಿನಿಮಾದ ಆಕ್ಷನ್‌ ಸನ್ನಿವೇಶವನ್ನು ಶೂಟ್‌ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ನಟ ದರ್ಶನ್‌ ಅವರ ಕೈಗೆ ಪೆಟ್ಟಾಗಿತ್ತು.

Written by - Puttaraj K Alur | Last Updated : Apr 7, 2024, 05:43 PM IST
  • ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಎಡಗೈಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಆಗಿದೆ
  • ʼಡೆವಿಲ್ʼ ಸಿನಿಮಾದ ಚಿತ್ರೀಕರಣದ ವೇಳೆ ದರ್ಶನ್ ಎಡಗೈಗೆ ಪೆಟ್ಟಾಗಿ ನೋವುಂಟಾಗಿತ್ತು
  • ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ನಟ ದರ್ಶನ್‌ ಕೈಗೆ ಸರ್ಜರಿ ಮಾಡಲಾಗಿದೆ
Challenging Star Darshan: ನಟ ದರ್ಶನ್‌ ಕೈ ಶಸ್ತ್ರಚಿಕಿತ್ಸೆ ಯಶಸ್ವಿ, ಶೀಘ್ರವೇ ಡಿಸ್ಚಾರ್ಜ್? title=
ದರ್ಶನ್‌ ಕೈ ಶಸ್ತ್ರಚಿಕಿತ್ಸೆ ಯಶಸ್ವಿ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಎಡಗೈಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಆಗಿದ್ದು, ಶೀಘ್ರವೇ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.  ʼಡೆವಿಲ್ʼ ಸಿನಿಮಾದ ಚಿತ್ರೀಕರಣದ ವೇಳೆ ದರ್ಶನ್ ಅವರ ಎಡಗೈಗೆ ಪೆಟ್ಟಾಗಿ ನೋವುಂಟಾಗಿತ್ತು. ಎಡಗೈ ನೋವಿನ ನಡುವೆಯೇ ಅವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. 

ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ನಟ ದರ್ಶನ್‌ ಕೈಗೆ ಸರ್ಜರಿ ಮಾಡಲಾಗಿದ್ದು, ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಳಿಕ ದರ್ಶನ್‌ ತಮ್ಮ ಅಭಿಮಾನಿಯ ಜೊತೆಗೆ ತೆಗೆಸಿಕೊಂಡಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ʼಆದಷ್ಟು ಬೇಗ ಗುಣಮುಖರಾಗಿ ಬಾಸ್‌ʼ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.  

ಇದನ್ನೂ ಓದಿ: Ram Charan: ಥಾಯ್ಲೆಂಡ್‌ನಲ್ಲಿ ಆನೆಮರಿಗೆ ಸ್ನಾನ ಮಾಡಿಸಿದ ಮೆಗಾ ಪವರ್‌ ಸ್ಟಾರ್!

ಮಿಲನಾ ಪ್ರಕಾಶ್‌ ನಿರ್ದೇಶನದ ʼಡೆವಿಲ್‌ʼ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಈ ಚಿತ್ರದ ಸಣ್ಣ ಶೆಡ್ಯೂಲ್‌ನ ಚಿತ್ರೀಕರಣ ಮುಕ್ತಾಯವಾಗಿದೆ. ಮೋಹನ್‌ ಬಿ ಕೆರೆ ಸ್ಟುಡಿಯೋದಲ್ಲಿ ದೊಡ್ಡ ಸೆಟ್‌ ಹಾಕಿ ಆಕ್ಷನ್‌ ಸನ್ನಿವೇಶವನ್ನು ಶೂಟ್‌ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ದರ್ಶನ್‌ ಅವರ ಕೈಗೆ ಪೆಟ್ಟಾಗಿತ್ತು. ಕೈನೋವಿಗೆ ಪಟ್ಟಿ ಧರಿಸಿದ್ದ ದರ್ಶನ್‌ ಸತೀಶ್‌ ನಿನಾಸಂ ಮತ್ತು ರಚಿತಾ ರಾಮ್‌ ನಟನೆಯ ʼಮ್ಯಾಟ್ನಿʼ ಸಿನಿಮಾದ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಇದಲ್ಲದೆ ತಮ್ಮ ಕೈನೋವಿನ ನಡುವೆಯೂ ಏಪ್ರಿಲ್‌ 4ರಂದು ನಟಿ ಸುಮಲತಾ ಅಂಬರೀಶ್‌ ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬ ಅವರ ಕೈ ಮುಟ್ಟಿದ್ದರಿಂದ ನೋವುಂಟಾಗಿತ್ತು. ಈ ವೇಳೆ ʼಯಾರೂ ಸಹ ನನ್ನ ಕೈ ಮುಟ್ಟಬೇಡಿ, ದಯವಿಟ್ಟು ಅರ್ಥಮಾಡಿಕೊಂಡು ಸಹಕರಿಸಬೇಕುʼ ಅಂತಾ ಅವರು ಮನವಿ ಮಾಡಿಕೊಂಡಿದ್ದರು.  

ಇದನ್ನೂ ಓದಿಒಂದು ಕಾಲದಲ್ಲಿ 10 ಪೈಸೆಗೂ ಪರದಾಡುತ್ತಿದ್ದ ಈ ನಟ ಇದೀಗ 6300 ಕೋಟಿ ರೂ. ಒಡೆಯ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News