ಬೃಂದಾವನ ಸೀರಿಯಲ್‌ ಹೀರೋ ಚೇಂಜ್: ಸೋಶಿಯಲ್ ಮೀಡಿಯಾ ಸ್ಟಾರ್‌ಗೆ ತೆರೆದಿತು ಅದೃಷ್ಟದ ಬಾಗಿಲು!

Brundavana Serial: ಕಲರ್ಸ್ ಕನ್ನಡ ಚಾನೆಲ್‌ನ ತುಂಬು ಕುಟುಂಬದ ಕಥೆ ಬೃಂದಾವನ ಧಾರವಾಹಿಯ ನಾಯಕ ಆಕಾಶ್‌ ಪಾತ್ರಧಾರಿಯಾಗಿದ ವಿಶ್ವನಾಥ್ ಹಾವೇರಿ ಸೀರಿಯಲ್‌ನಿಂದ ಹೊರ ನಡೆದಿದ್ದು, ಇದೀಗ ಈ ಅವಕಾಶ ಸೋಷಿಯಲ್‌ ಮಿಡಿಯಾ ಸ್ಟಾರ್‌ಗೆ ದೊರಕಿದೆ. ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.

Written by - Zee Kannada News Desk | Last Updated : Nov 19, 2023, 12:08 PM IST
  • ಬೃಂದಾವನ ಸೀರಿಯಲ್‌ ನಾಯಕನ ಪಾತ್ರ ಮಾಡ್ತಿದ್ದ ವಿಶ್ವನಾಥ್ ಹಾವೇರಿ ಸದ್ಯ ಸೀರಿಯಲ್‌ನಿಂದ ಹೊರ ನಡೆದಿದ್ದಾರೆ.
  • ಬೃಂದಾವನ ಸೀರಿಯಲ್‌ನಲ್ಲಿ ಮದುವೆ ಎಪಿಸೋಡ್ ಶುರುವಾಗಿದ್ದು, ಈ ಎಪಿಸೋಡ್ ನೋಡೋಕೆ ಜನ ಸೂಪರ್ ಎಕ್ಸೈಟ್ ಆಗಿರುವಾಗಲೇ ಹೀರೋನ ಚೇಂಜ್ ಮಾಡಿದ್ದು ಎಲ್ಲರಿಗೂ ಶಾಕ್ ನೀಡಿದೆ.
  • ಬೃಂದಾವನ ಧಾರವಾಹಿಯ ನಾಯಕ ಬದಲಾಗಿದ್ದು, ಪ್ರೇಕ್ಷಕರು ಕೂಡ ಪಾತ್ರ ಬದಲಾವಣೆ ಬಗ್ಗೆ ನಾನಾ ಕಮೆಂಟ್ ಮಾಡ್ತಿದ್ದಾರೆ.
ಬೃಂದಾವನ ಸೀರಿಯಲ್‌ ಹೀರೋ ಚೇಂಜ್: ಸೋಶಿಯಲ್ ಮೀಡಿಯಾ ಸ್ಟಾರ್‌ಗೆ ತೆರೆದಿತು ಅದೃಷ್ಟದ ಬಾಗಿಲು! title=

Varun Aradhya In Brundavana Serial: ಇತ್ತೀಚಿಗಷ್ಟೇ ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಆರಂಭವಾದ ತುಂಬು ಕುಟುಂಬದ ಕಥೆ ಬೃಂದಾವನ ಸೀರಿಯಲ್ ಜನರ ಮನಗೆದ್ದಿದ್ದು, ಧಾರಾವಾಹಿ ಇನ್ನು 25ರಷ್ಟು ಎಪಿಸೋಡ್‌ಗಳನ್ನು ಮುಗಿಸಿರುವಾಗಲೇ ಆ ಕುಟುಂಬದ ಮುದ್ದು ಮಗನಾಗಿದ್ದ  ಆಕಾಶ್​ ಪಾತ್ರ ಆಗಿದೆ. ಬೃಂದಾವನ ಸೀರಿಯಲ್‌ ನಾಯಕನ ಪಾತ್ರ ಮಾಡ್ತಿದ್ದ ವಿಶ್ವನಾಥ್ ಹಾವೇರಿ  ಸದ್ಯ  ಸೀರಿಯಲ್‌ನಿಂದ ಹೊರ ನಡೆದಿದ್ದಾರೆ. ಈ ಹಿಂದೆ ವಿಶ್ವನಾಥ್ ಬಿಗ್‌ಬಾಸ್ ಹಾಗೂ ಕ್ರಾಂತಿ ಸಿನಿಮಾದಲ್ಲಿ ಕಾಣಿಸಿಕೊಂಡವರು, ಈ ಸೀರಿಯಲ್‌ನಲ್ಲಿ ಫಾರಿನ್​ನಲ್ಲಿ ಓದುವ ಹುಡುಗನಾಗಿ ಪಾತ್ರ ನಿರ್ವಹಿಸಿದ್ದು, ಸೀರಿಯಲ್‌ನಿಂದ ಹೊರ ಬಂದಿದಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಬೃಂದಾವನ ಸೀರಿಯಲ್‌ನಲ್ಲಿ ಸೂಪರ್ ಆಗಿ ಮದುವೆ ಎಪಿಸೋಡ್ ಶುರುವಾಗಿದ್ದು, ಸಂಭ್ರಮದ ಈ ಎಪಿಸೋಡ್ ನೋಡೋಕೆ ಜನ ಸೂಪರ್ ಎಕ್ಸೈಟ್ ಆಗಿರುವಾಗಲೇ ಹೀರೋನ ಚೇಂಜ್ ಮಾಡಿದ್ದು ಎಲ್ಲರಿಗೂ ಶಾಕ್ ನೀಡಿದೆ. ಇದೀಗ ಸೋಶಿಯಲ್ ಮೀಡಿಯಾ ಸ್ಟಾರ್ ವರುಣ್​ ಆರಾಧ್ಯ, ವಿಶ್ವನಾಥ್​ ಹಾವೇರಿ ಮಾಡ್ತಿದ್ದ ಆಕಾಶ್​ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದು, ಮದುವೆ ಸಂಭ್ರಮದಲ್ಲಿ ವರುಣ್ ಎಂಟ್ರಿ ಕೊಟ್ಟಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಮಾಡುತ್ತಾ ಫೇಮಸ್ ಆಗಿದ್ದ ನಟ ವರುಣ್‌ಗೆ ಇದೀಗ ದೊಡ್ಡ ಅವಕಾಶ ಸಿಕ್ಕಿ, ಸೀರಿಯಲ್ ನಟನಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಇದನ್ನು ಓದಿ: ವಿಜಯ್, ರಜನಿಕಾಂತ್, ಪ್ರಭಾಸ್ ಮೂವರು ಅಲ್ಲ.. ದಕ್ಷಿಣ ಭಾರತದ ಶ್ರೀಮಂತ ಸೂಪರ್ ಸ್ಟಾರ್ ಈತ

ಬೃಂದಾವನ ಧಾರವಾಹಿಯ ನಾಯಕ ಬದಲಾಗಿದ್ದು, ಪ್ರೇಕ್ಷಕರು ಕೂಡ ಪಾತ್ರ ಬದಲಾವಣೆ ಬಗ್ಗೆ ನಾನಾ ಕಮೆಂಟ್ ಮಾಡ್ತಿದ್ದಾರೆ.ಅರಶಿನ ಶಾಸ್ತ್ರದ ತನಕವೂ ವಿಶ್ವನಾಥ್ ಹಾವೇರಿ  ಆಕಾಶ್ ಪಾತ್ರದಲ್ಲಿದ್ದರು. ಆ ನಂತರ ದಿಢೀರ್ ಆಗಿ ಪಾತ್ರವನ್ನು ಬದಲಾಯಿಸಲಾಗಿದ್ದು ಈಗ ಜನರು ಇದೇನಿದು ಅಂತ ಕಣ್ಕಣ್ ಬಿಟ್ಟಿದ್ದಾರೆ. ಮದುವೆ ನಿಶ್ಚಯ, ಅರಶಿನ ಶಾಸ್ತ್ರ ಒಬ್ಬನ ಜೊತೆ, ಈಗ ಮದುವೆ ಮುಹೂರ್ತ ಹತ್ತಿರ ಬಂದಾಗ ಮತ್ತೊಬ್ಬ ಬಂದ. ಇನ್ನು ಫಸ್ಟ್ ನೈಟ್ ಹೊತ್ತಿಗೆ ಇನ್ನೊಬ್ಬ ಬರ್ತಾನಾ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ಟ್ರೋಲ್​ ಬಾಯಿ ಮುಚ್ಚಿಸುವಂತೆ ಕಲರ್ಸ್ ಕನ್ನಡ ಇದಕ್ಕೆ ಸಂಬಂಧಿಸಿದ ಪ್ರೋಮೋ ಕೂಡಾ ರಿಲೀಸ್ ಮಾಡಿದೆ.

ಬೃಂದಾವನ ಸೀರಿಯಲ್​ ಬದಲಾವಣೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್​ ಕಮೆಂಟ್ ಕೂಡ ಬರ್ತಿದ್ದು, ವರುಣ್​ ನನ್ನು ಜನರು ಹೇಗೆ ಒಪ್ಪಿಕೊಳ್ತಾರೆ ಎಂಬುದನ್ನು ಕಾದು ನೋಡ್ಬೇಕಿದೆ. ಈ ಧಾರವಾಹಿಯಲ್ಲಿ ಆಕಾಶ್​ ಹಾಗೂ ಪುಷ್ಪ ಕಲ್ಯಾಣೋತ್ಸವ ಶುರುವಾಗಿದ್ದು, ಪ್ರೇಕ್ಷಕರಿಗೆ ಪುಷ್ಪ ಆಕಾಶ್ ಜೋಡಿ ಇಷ್ಟವಾಗಿದ್ದು, ಇಬ್ಬರ ಮದುವೆಯನ್ನು ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಈ ಎಪಿಸೋಡ್ ತುಂಬಾ ಅದ್ಧೂರಿಯಾಗಿ ಮೂಡಿಬರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News