ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ನಲ್ಲಿ ನಡುಕ ಹುಟ್ಟಿಸಿವೆ- ಮನೋಜ್ ಬಾಜ್‌ಪೇಯಿ

ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಕಿಚ್ಚ ಸುದೀಪ್ ಹೇಳಿಕೆ ನೀಡಿದ್ದ ಬೆನ್ನಲ್ಲೇ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದ ಹಿಂದಿ ನಟ ಅಜಯ್ ದೇವಗನ್ ಹೇಳಿಕೆಗೆ ಈಗ ಬಾಲಿವುಡ್ ನಲ್ಲಿಯೇ ವಿರೋಧ ವ್ಯಕ್ತವಾಗಿದೆ.

Last Updated : Apr 28, 2022, 01:51 PM IST
  • ಇದು ಮುಂಬೈ ಚಲನಚಿತ್ರೋದ್ಯಮದ ಎಲ್ಲಾ ಮುಖ್ಯವಾಹಿನಿಯ ಚಲನಚಿತ್ರ ನಿರ್ಮಾಪಕರ ಬೆನ್ನೆಲುಬಿನಲ್ಲಿ ನಡುಕವನ್ನುಂಟು ಮಾಡಿದೆ..
  • ಅವರಿಗೆ ಈಗ ನಿಜವಾಗಿಯೂ ಯಾವ ರೀತಿ ಇದನ್ನು ಗ್ರಹಿಸಬೇಕು ಎನ್ನುವುದು ತಿಳಿಯುತ್ತಿಲ್ಲ" ಎಂದು ಅವರು ಹೇಳಿಕೆ ನೀಡಿದ್ದಾರೆ.
ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ನಲ್ಲಿ ನಡುಕ ಹುಟ್ಟಿಸಿವೆ- ಮನೋಜ್ ಬಾಜ್‌ಪೇಯಿ  title=

ನವದೆಹಲಿ: ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಕಿಚ್ಚ ಸುದೀಪ್ ಹೇಳಿಕೆ ನೀಡಿದ ಬೆನ್ನಲ್ಲೇ ಬಾಲಿವುಡ್ ನಟ ಅಜಯ್ ದೇವಗನ್ ಹಾಗಾದರೆ ನೀವು ನಿಮ್ಮ ಸಿನಿಮಾಗಳನ್ನು ಹಿಂದಿಯಲ್ಲೇಕೆ ಡಬ್ ಮಾಡುತ್ತೀರಿ ಎಂದು ಪ್ರತಿಕ್ರಿಯಿಸಿದ್ದಕ್ಕೆ ಈಗ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.ನಿನ್ನೆ ಅಜಯ್ ದೇವಗನ್ ಮಾಡಿದ ಟ್ವೀಟ್ ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಗೆ ಒಳಗಾಗಿತ್ತು, ಆದರೆ ಕಿಚ್ಚ ಸುದೀಪ್ ಅವರು ಅಜಯ್ ದೇವಗನ್ ಅವರ ಹಿಂದಿ ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯಿಸುವ ಮೂಲಕ ತಿರುಗೇಟು ನೀಡಿದ್ದರು.ನೀವು ಹಿಂದಿಯಲ್ಲಿ ಮಾಡಿರುವ ಟ್ವೀಟ್ ನ್ನು ನಾವು ಅರ್ಥೈಸಿಕೊಂಡಿದ್ದೇವೆ. ಒಂದು ವೇಳೆ ನಾನು ಕನ್ನಡದಲ್ಲಿ ಪ್ರತಿಕ್ರಿಯಿಸಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಅವರು ತಿರುಗೇಟು ನೀಡಿದ್ದರು.

ಇದನ್ನೂ ಓದಿ: 'ನಿಮಗೆ ನಾನು ಕನ್ನಡದಲ್ಲಿ ಪ್ರತಿಕ್ರಿಯಿಸಿದ್ದರೆ ಹೇಗಿರ್ತಿತ್ತು....! ಅಜಯ್ ದೇವಗನ್ ಗೆ ತಿರುಗೇಟು ನೀಡಿದ ಕಿಚ್ಚ ಸುದೀಪ್

ಇದಾದ ಬೆನ್ನಲ್ಲೇ ಈಗ ಹಿಂದಿ ನಟರೇ ಅಜಯ್ ದೇವಗನ್ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಾಲಿವುಡ್ ನಟ ಮನೋಜ್ ವಾಜಪೇಯಿ 'ಇತ್ನಿ ಬ್ಲಾಕ್ಬಸ್ಟರ್ ಹೋ ರಹೀ ಹೈ ( ಇಷ್ಟೆಲ್ಲಾ ಬ್ಲಾಕ್ ಬಸ್ಟರ್ ಸಿನಿಮಾಗಳಿವೆ) ಮನೋಜ್ ಬಾಜಪೇಯಿ ಮತ್ತು ನನ್ನಂತಹವರನ್ನು ಒಂದು ನಿಮಿಷ ಮರೆತುಬಿಡಿ, ಇದು ಮುಂಬೈ ಚಲನಚಿತ್ರೋದ್ಯಮದ ಎಲ್ಲಾ ಮುಖ್ಯವಾಹಿನಿಯ ಚಲನಚಿತ್ರ ನಿರ್ಮಾಪಕರ ಬೆನ್ನೆಲುಬಿನಲ್ಲಿ ನಡುಕವನ್ನುಂಟು ಮಾಡಿದೆ..ಅವರಿಗೆ ಈಗ ನಿಜವಾಗಿಯೂ ಯಾವ ರೀತಿ ಇದನ್ನು ಗ್ರಹಿಸಬೇಕು ಎನ್ನುವುದು ತಿಳಿಯುತ್ತಿಲ್ಲ" ಎಂದು ಅವರು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: 'ಕನ್ನಡ ಸಿನಿಮಾ ಕೆಜಿಎಫ್ 2 ಬಾಕ್ಸ್ ಆಫೀಸ್ ನಲ್ಲಿ ಹವಾ ಮಾಡಿರೋದು ಹಿಂದಿ ನಟರಿಗೆ ಹೊಟ್ಟೆ ಉರಿ'

ಸೂರ್ಯವಂಶಿಯಂತಹ ದೊಡ್ಡ ಬಜೆಟ್ ಹಿಂದಿ ಚಿತ್ರಗಳು ಭಾರತದಲ್ಲಿ ₹ 200 ಕೋಟಿ ತಲುಪಲು ಹೆಣಗಾಡುತ್ತಿರುವಾಗ ಹಿಂದಿಗೆ ಡಬ್ ಆಗಿರುವ ಕೆಜಿಎಫ್ 2 ಅಥವಾ ಆರ್‌ಆರ್‌ಆರ್ ನಂತರ ಚಿತ್ರಗಳು  ₹ 300 ಕೋಟಿ ಗಳಿಸುತ್ತಿರುವುದೇಕೆ? ಎಂಬುದರ ಕುರಿತಾಗಿ ನಟ ಮನೋಜ್ ವಾಜಪೇಯಿ ಮಾತನಾಡುತ್ತಾ, ಈ ಚಿತ್ರಗಳ ಯಶಸ್ಸು ಬಾಲಿವುಡ್ ಚಿತ್ರಗಳಿಗೆ ಪಾಠವಾಗಬೇಕಾಗಿದೆ. ಇದರಿಂದ ಅವರು ಬೇಗನೆ ಕಲಿಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Kiccha Sudeep : ಅಜಯ್ ದೇವಗನ್ ಗೆ ಬೆವರಿಳಿಸಿದ ಕಿಚ್ಚ ಸುದೀಪ್

"ಅವರು ಸಹಜವಾಗಿ ಪರಿಗಣಿಸುವುದಿಲ್ಲ, ಅವರು ಅದರ ಬಗ್ಗೆ ಹೆಚ್ಚಿನ ಉತ್ಸಾಹವನ್ನು ಹೊಂದಿದ್ದಾರೆ.ಅವರ ಚಿತ್ರಗಳು ಪ್ರತಿಯೊಂದು ಶಾಟ್ ಗಳು ವಿಶ್ವದಲ್ಲೇ ಅತ್ಯುತ್ತಮ ಎನ್ನುವಂತೆ ಇರುತ್ತವೆ. ಅವರು ತಾವು ಅಂದುಕೊಂಡಂತೆ ಚಿತ್ರದ ಶೂಟ್ ಮಾಡುತ್ತಾರಷ್ಟೇ ಅಲ್ಲದೆ ಅವರು ಪ್ರೇಕ್ಷಕರನ್ನು ಸಹಜವಾಗಿ ಪರಿಗಣಿಸುವುದಿಲ್ಲ. ಏಕೆಂದರೆ ಅವರು ಚಿತ್ರವು ಪ್ರೇಕ್ಷಕರಿಗೆ ಅತ್ಯುನ್ನತವಾಗಿ ಮತ್ತು ಅವರ ಉತ್ಸಾಹವು ಅತ್ಯುನ್ನತವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.ನೀವು ಪುಷ್ಪ ಅಥವಾ ಆರ್ ಆರ್ ಆರ್ ಅಥವಾ ಕೆಜಿಎಫ್ ಅನ್ನು ನೋಡಿದರೆ, ಅದರ ಮೇಕಿಂಗ್ ಅದ್ಬುತವಾಗಿದೆ. ಪ್ರತಿಯೊಂದು ಫ್ರೇಮ್ ಅನ್ನು ನಿಜವಾಗಿ ಜೀವನ ಮತ್ತು ಮರಣದ ಸನ್ನಿವೇಶದ ರೀತಿಯಲ್ಲಿ ಚಿತ್ರೀಕರಿಸಲಾಗಿದೆ.ಇದರ ಕೊರತೆ ನಮ್ಮಲ್ಲಿ ಇದೆ.ನಾವು ಮುಖ್ಯವಾಹಿನಿಯ ಚಿತ್ರಗಳನ್ನು ಕೇವಲ ಹಣ ಮತ್ತು ಅದರ ಬಾಕ್ಸ್ ಆಫೀಸ್ ಹಿನ್ನೆಲೆಯಲ್ಲಿ ನೋಡಲು ಯೋಚಿಸುತ್ತೇವೆ.ಆದರೆ ನಾವು ನಮ್ಮನ್ನು ವಿಮರ್ಶೆಗೆ ಒಳಪಡಿಸಿಕೊಳ್ಳುವುದಿಲ್ಲ.ಆದ್ದರಿಂದ ನಾವು ಅವರನ್ನು ವಿಭಿನ್ನ ಎಂದು ಕರೆಯುವ ಮೂಲಕ ಅವುಗಳನ್ನು ಭಿನ್ನಗೊಳಿಸುತ್ತಿದ್ದೇವೆ.ಆದರೆ ಇದು ಮುಂಬೈ ಮುಖ್ಯವಾಹಿನಿಯ ಚಲನಚಿತ್ರ ನಿರ್ಮಾಪಕರಿಗೆ ಮುಖ್ಯವಾಹಿನಿಯ ಸಿನಿಮಾವನ್ನು ಹೇಗೆ ಮಾಡಬೇಕು ಎನ್ನುವುದರ ಕುರಿತಾದ ಒಂದು ಪಾಠವಾಗಿದೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News