22ನೇ ವಯಸ್ಸಿಗೆ ಮನೆ ಬಿಟ್ಟು.. ಕುಟುಂಬದಿಂದ ದೂರ ಉಳಿದಿದ್ದ ಈಕೆ ಬಿಗ್‌ಬಾಸ್‌ನ 2nd ರನ್ನರ್‌ಅಪ್!

Bollywood Actress: ಪ್ರತಿಯೊಬ್ಬ ಯಶಸ್ಸುಗಳಿಸಿರುವ ವ್ಯಕ್ತಿ ಕಷ್ಟಗಳನ್ನು ಎದುರಿಸಿಯೇ ಆ ಮಟ್ಟಕ್ಕೆ ಬಂದು ತಲುಪಿರುತ್ತಾನೆ... ಈ ಮಾತಿನಂತೆ ಖ್ಯಾತ ನಟಿ, ಬಿಗ್‌ಬಾಸ್‌ ಸ್ಪರ್ಧಿಯೂ ಚಿಕ್ಕಂದಿನಲ್ಲಿ ಸಾಕಷ್ಟು ಕಷ್ಟದ ದಿನಗಳನ್ನು ಎದುರಿಸಿ ಈಗ ಸ್ಟಾರ್‌ ಪಟ್ಟಕ್ಕೇರಿದ್ದಾರೆ.. ಯಾರು ಆ ನಟಿ ಅಂತೀರಾ.. ಈ ಸ್ಟೋರಿ ಓದಿ..   

Written by - Savita M B | Last Updated : Jan 30, 2024, 02:33 PM IST
  • ಪ್ರತಿಯೊಬ್ಬ ಯಶಸ್ಸುಗಳಿಸಿರುವ ವ್ಯಕ್ತಿ ಕಷ್ಟಗಳನ್ನು ಎದುರಿಸಿಯೇ ಆ ಮಟ್ಟಕ್ಕೆ ಬಂದು ತಲುಪಿರುತ್ತಾನೆ.
  • ಈ ಪೈಕಿ, ಕಂಗನಾ ರನೌತ್, ಯಶ್ ಮತ್ತು ನಾಸಿರುದ್ದೀನ್ ಶಾ ಅವರಂತಹ ಅನೇಕ ನಟ-ನಟಿಯರಿದ್ದಾರೆ
  • ನಾವು ಹೇಳುತ್ತಿರುವ ನಟಿ ತನ್ನ ಮನೆಯಿಂದ ಓಡಿಹೋದದ್ದು ಮಾತ್ರವಲ್ಲದೆ ತನ್ನ ಕುಟುಂಬವನ್ನು ಸಹ ದೂರವಿಟ್ಟಿದ್ದಾಳೆ..
22ನೇ ವಯಸ್ಸಿಗೆ ಮನೆ ಬಿಟ್ಟು.. ಕುಟುಂಬದಿಂದ ದೂರ ಉಳಿದಿದ್ದ ಈಕೆ ಬಿಗ್‌ಬಾಸ್‌ನ 2nd ರನ್ನರ್‌ಅಪ್! title=

Actress Shehnaaz Kaur Gill: ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮ ಅನೇಕ ತಾರೆಯರು ತಮ್ಮ ವೃತ್ತಿಗಾಗಿ ಕುಟುಂಬದಿಂದ ದೂರುಳಿದು.. ಸುದೀರ್ಘ ಹೋರಾಟದ ನಂತರ ಒಂದು ಮಟ್ಟಕ್ಕೆ ತಲುಪಿದ್ದಾರೆ.. ಈ ಪೈಕಿ, ಕಂಗನಾ ರನೌತ್, ಯಶ್ ಮತ್ತು ನಾಸಿರುದ್ದೀನ್ ಶಾ ಅವರಂತಹ ಅನೇಕ ನಟ-ನಟಿಯರು ವೃತ್ತಿಜೀವನವಕ್ಕಾಗಿ ಮನೆಯಿಂದ ಓಡಿಹೋಗಿದ್ದರು.. ಆದರೆ ಈಗ ಅವರು ಚಿತ್ರರಂಗದ ಉನ್ನತ ತಾರೆಗಳಲ್ಲಿ ಒಬ್ಬರು. ಇದೀಗ ನಾವು ಮಾತನಾಡುತ್ತಿರುವುದು ಇಂತಹ ಪರಿಸ್ಥಿತಿಯನ್ನು ಎದುರಿಸಿದ ನಟಿಯ ಬಗ್ಗೆಯೇ ಯಾರು ಆ ನಾಯಕಿ ಅಂತೀರಾ.. ಇಲ್ಲಿದೆ ಉತ್ತರ.. 

ನಾವು ಹೇಳುತ್ತಿರುವ ನಟಿ ತನ್ನ ಮನೆಯಿಂದ ಓಡಿಹೋದದ್ದು ಮಾತ್ರವಲ್ಲದೆ ತನ್ನ ಕುಟುಂಬವನ್ನು ಸಹ ದೂರವಿಟ್ಟಿದ್ದಾಳೆ... ಸಲ್ಮಾನ್ ಖಾನ್ ಅವರೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅವರು ಈಗ ಸಾಲು ಸಾಲು ಚಿತ್ರಗಳನ್ನು ಮಾಡುತ್ತಿದ್ದಾರೆ.. ಆಕೆ ಬೇರೆ ಯಾರೂ ಅಲ್ಲ, ಪಂಜಾಬ್‌ನ ಕತ್ರಿನಾ ಕೈಫ್ ಎಂದೂ ಕರೆಯಲ್ಪಡುವ ಶೆಹನಾಜ್ ಗಿಲ್.

ಇದನ್ನೂ ಓದಿ-ಕಿಚ್ಚನಿಲ್ಲದೇ ಬಿಗ್‌ ಬಾಸ್‌... ಇನ್ಮುಂದೆ BBK ಹೋಸ್ಟ್‌ ಮಾಡಲ್ವಂತೆ ಸುದೀಪ್!‌?

ಶೆಹನಾಜ್ ಗಿಲ್ ತನ್ನ 22 ನೇ ವಯಸ್ಸಿನಲ್ಲಿ ಚಿತ್ರರಂಗದಲ್ಲಿ ತನ್ನ ಕನಸುಗಳನ್ನು ನನಸಾಗಿಸಲು ಮನೆಯಿಂದ ಓಡಿಹೋಗಿದ್ದರಂತೆ.. ಅಲ್ಲಿಂದ ಆಕೆ ತನ್ನ ಕುಟುಂಬದಿಂದಲೂ ದೂರವಿದ್ದು..ತಾನು ಬೆಳೆದು ಒಂದು ಒಳ್ಳೆಯ ಮಟ್ಟಕ್ಕೆ ನಿಂತಾಗ ಮಾತ್ರ ಮನೆಗೆ ಹಿಂತಿರುಗುವುದಾಗಿ ಪ್ರಮಾಣ ಮಾಡಿದ್ದರಂತೆ.. ಅದೇ ರೀತಿ ಶೆಹನಾಜ್‌ ತಾನು ಜನಪ್ರಿಯತೆಯನ್ನು ಪಡೆದುಕೊಂಡಾಗಲೇ ತನ್ನ ಮನೆಗೆ ಹೋಗಿದ್ದು.. 

ಇನ್ನು ಶೆಹನಾಜ್‌ ಸಂದರ್ಶನವೊಂದರಲ್ಲಿ ಆ ಕಷ್ಟದ ದಿನಗಳ ಬಗ್ಗೆ ಮಾತನಾಡಿ 'ನಾನು ಪಿಜಿಯಲ್ಲಿ ಇದ್ದುಕೊಂಡು ಸುಮಾರು 15,000 ರೂ. ಗಳಿಸುತ್ತಿದ್ದೆ.. ಪ್ರತಿದಿನ ಶೂಟಿಂಗ್‌ಗೆ ಹೋಗುತ್ತಿದ್ದೆ. ಆಗ ನನಗೆ ನನ್ನ ಮನೆಯಿಂದ ಕಾಲ್‌ ಬರುತ್ತಿತ್ತು..ನಾನು Ignore ಮಾಡುತ್ತಿದ್ದೆ.. ಮತ್ತೆ ಬ್ಲಾಕ್‌ ಮಾಡಿದ್ದೆ... ಆದರೆ ಈಗ, ಅವರೆಲ್ಲರೂ ನನ್ನ ಬಗ್ಗೆ ಹೆಮ್ಮೆಪಡುತ್ತಾರೆ" ಎಂದಿದ್ದರು.. 

ಇದನ್ನೂ ಓದಿ-Sreeleela: ನದಿಯ ದಡದಲ್ಲಿ ಉಯ್ಯಾಲೆ ಮೇಲೆ ಪೋಟೋಗೆ ಫೋಸ್‌ ನೀಡಿದ ಭರಾಟೆ ಬೆಡಗಿ!

ಶೆಹ್ನಾಜ್ ಗಿಲ್ ಅವರು ಶಿವ್ ದಿ ಕಿತಾಬ್, ಮಜೆ ದಿ ಜಟ್ಟಿ ಮತ್ತು ದಿಯಾನ್ ಕುಡಿಯನ್ ನಂತಹ ಮ್ಯೂಸಿಕ್ ವೀಡಿಯೊಗಳಿಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು. 2017 ರಲ್ಲಿ, ಅವರು ಸತ್ ಶ್ರೀ ಅಕಾಲ್ ಇಂಗ್ಲೆಂಡ್ ಮತ್ತು 2019 ರಲ್ಲಿ, ಕಾಲಾ ಶಾ ಕಾಲಾ ಔರ್ ದಾಕಾದಂತಹ ಪಂಜಾಬಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮೊದಲು ದಪ್ಪಗಿದ್ದ ನಟಿ ತಮ್ಮ ತೂಕ ಕಡಿಮೆಯಾದಾಗ ಬಾಲಿವುಡ್ ಚಿತ್ರಗಳ ಭಾಗವಾದರು.. 

2019 ರಲ್ಲಿ, ನಟಿ ಬಿಗ್ ಬಾಸ್ 13 ರಲ್ಲಿ ಕಾಣಿಸಿಕೊಂಡಿದ್ದರು.. ಅಲ್ಲಿಂದಲೂ ಅಧಿಕ ಜನಪ್ರಿಯತೆ ಪಡೆದುಕೊಂಡ ಈಕೆಯನ್ನು ಸಲ್ಮಾನ್ ಖಾನ್ ಅವರನ್ನು ಪಂಜಾಬ್‌ನ ಕತ್ರಿನಾ ಕೈಫ್ ಎಂದು ಕರೆಯುತ್ತಿದ್ದರು. ಮನೆಯಲ್ಲಿ ನಟಿ ಶೆಹನಾಜ್‌ ಹಾಗೂ ಸಿದ್ಧಾರ್ಥ್ ಶುಕ್ಲಾ ಅವರ ಬಾಂಧವ್ಯವೂ ಪ್ರೇಕ್ಷಕರಿಗೆ ಇಷ್ಟವಾಯಿತು, ಅವರು ಶೋ ಗೆಲ್ಲದಿದ್ದರೂ, ಅನೇಕ ಹೃದಯಗಳನ್ನು ಗೆದ್ದರು ಮತ್ತು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿ ಸ್ಟಾರ್ ಆದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News