16 ವರ್ಷದ ಕೆರಿಯರ್ ನಲ್ಲಿ 7 ಫ್ಲಾಪ್ ನೀಡಿ.. ಒಂದೇ ಸಿನಿಮಾದಿಂದ 900 ಕೋಟಿ ಕಲೆಕ್ಷನ್‌ ಮಾಡಿದ ಖ್ಯಾತ ನಟ ಈತ!

Bollywood Actor: ಸಹಾಯಕ ನಿರ್ದೇಶಕನಾಗಿ ವೃತ್ತಿ ಜೀವನ ಆರಂಭಿಸಿದ ಈ ನಟ ನಂತರ ಚಾಕೊಲೇಟ್ ಬಾಯ್ ಎಂದೇ ಖ್ಯಾತರಾಗಿ... ತಮ್ಮ ವೃತ್ತಿಜೀವನದಲ್ಲಿ 14 ಹಿಟ್ ಚಿತ್ರಗಳನ್ನು ನೀಡಿದ ನಟನ ಕರಿಯರ್‌ನಲ್ಲಿ ಕೇವಲ ಒಂದು ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 900 ಕೋಟಿ ಗಳಿಸಿತು... ಹಾಗಾದರೆ ಯಾರು ಆ ಸ್ಟಾರ್ ಅಂತೀರಾ.. ಈ ಸ್ಟೋರಿ ಒದಿ..  

Written by - Savita M B | Last Updated : Jan 26, 2024, 01:10 PM IST
  • ಈ ನಟ ತಮ್ಮ ಮೊದಲ ಚಿತ್ರದಿಂದಲೇ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.
  • ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡ ಇವರ ಮೊದಲ ಸಿನಿಮಾ ಸೋತಿತ್ತು
  • ಆದರೆ ಅದರಲ್ಲಿ ಒಂದೇ ಒಂದು ಚಿತ್ರ ಇಷ್ಟು ದೊಡ್ಡ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿದೆ...
16 ವರ್ಷದ ಕೆರಿಯರ್ ನಲ್ಲಿ 7 ಫ್ಲಾಪ್ ನೀಡಿ.. ಒಂದೇ ಸಿನಿಮಾದಿಂದ 900 ಕೋಟಿ ಕಲೆಕ್ಷನ್‌ ಮಾಡಿದ ಖ್ಯಾತ ನಟ ಈತ! title=

Bollywood Actor Ranbir kapoor: ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡ ಈ ನಟನ ಮೊದಲ ಸಿನಿಮಾ ಸೋತರು ಅದೇ ಚಿತ್ರದಿಂದ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.. ಅಲ್ಲದೇ ಮೊದಲ ಸಿನಿಮಾ ಮೂಲಕ ಸಿಕ್ಕ ಮನ್ನಣೆಯಿಂದ ತನ್ನನ್ನು ತಾನು ಸಾಬೀತುಪಡಿಸಿ ಇಂದು ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ. ಅವರು ತಮ್ಮ ಹದಿನಾರು ವರ್ಷಗಳ ವೃತ್ತಿ ಜೀವನದಲ್ಲಿ ಇದುವರೆಗೆ 14 ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ ಅದರಲ್ಲಿ ಒಂದೇ ಒಂದು ಚಿತ್ರ ಇಷ್ಟು ದೊಡ್ಡ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿದೆ... 

2007 ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ಚಲನಚಿತ್ರದೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ನಟ ಬೇರೆ ಯಾರೂ ಅಲ್ಲ, ಅನಿಮಲ್‌ ಚಿತ್ರದ ನಾಯಕ ರಣಬೀರ್ ಕಪೂರ್. ರಣಬೀರ್ 2007 ರಲ್ಲಿ 'ಸಾವರಿಯಾ' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.. ಈ ಚಿತ್ರದಲ್ಲಿ ಸೋನಂ ಕಪೂರ್ ಜೊತೆ ನಟಿಸಿದ್ದರು..

ಇದನ್ನೂ ಓದಿ-Bigg boss 10 winner : ಎಲಿಮಿನೇಟ್ ಆದ ಸ್ಪರ್ಧಿಗಳಿಂದ ಬಯಲಿಗೆ ಬಂತು ವಿನ್ನರ್‌ ಹೆಸರು..! ಗೆಲ್ಲೋದು ಯಾರ್‌ ಗೊತ್ತೆ?

ರಣಬೀರ್ ಕಪೂರ್ ತನ್ನ ಮೊದಲ ಚಿತ್ರದಿಂದ ಯಾವುದೇ ಯಶಸ್ಸನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಚಾಕೊಲೇಟ್ ಬಾಯ್‌ ಲುಕ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಾಗಲೇ ಜನರ ಹೃದಯದಲ್ಲಿ ಸ್ಥಾನ ಪಡೆದರು. ಹಾಗಾಗಿಯೇ ಅವರ ವೃತ್ತಿ ಜೀವನದಲ್ಲಿ 14 ಹಿಟ್ ಚಿತ್ರಗಳನ್ನು ನೀಡಲು ಸಾಧ್ಯವಾಯಿತು.

ಆದರೆ ರಣಬೀರ್ ಕಪೂರ್ ಮೊದಲು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದು ನಟನಾಗಿ ಅಲ್ಲ ಸಹಾಯಕ ನಿರ್ದೇಶಕನಾಗಿ.. ಹೌದು ರಾಜೇಶ್ ಖನ್ನಾ ಮತ್ತು ಐಶ್ವರ್ಯಾ ರೈ ಅಭಿನಯದ 'ಆ ಅಬ್ ಲೌತ್ ಚಲೇನ್' ಚಿತ್ರದ ಮೂಲಕ ರಣಬೀರ್‌ ಅಸಿಸ್ಟೆಂಟ್ ಡೈರೆಕ್ಟರ್‌ ಆಗಿ ಸಿನಿರಂಗಕ್ಕೆ ಕಾಲಿಟ್ಟರು... ಇದು ಕೆಲವೇ ಜನರಿಗೆ ತಿಳಿದಿದೆ. ಇದರಿಂದ ಅವರಿಗೆ ಮನ್ನಣೆ ಸಿಗಲಿಲ್ಲ. ಆ ನಂತರ ‘ಸಾವರಿಯಾ’ ಚಿತ್ರದ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟರು.

ಇದನ್ನೂ ಓದಿ-BBK 10 : ʼತುಕಾಲಿ ಮಹಾರಾಜʼರಿಗೆ ಕಿಸ್‌ ಮಾಡಿ ಲವ್‌ ಯೂ ಎಂದ ಸುಂದರಿ..! ಯಾರವಳು ಗೊತ್ತೆ..?

ರಣಬೀರ್ ತಮ್ಮ ಸಿನಿಮಾಗಳ ಹೊರತಾಗಿ, ತನ್ನ ಪ್ರೇಮ ಪ್ರಕರಣಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ... ಮದುವೆಗೂ ಮುನ್ನ ಈ ನಟ ಬಿ-ಟೌನ್‌ನಲ್ಲಿ ಹಲವು ದೊಡ್ಡ ನಟಿಯರೊಂದಿಗೆ ರೊಮ್ಯಾನ್ಸ್ ಮಾಡಿದ್ದರು. ಸೋನಂ ಕಪೂರ್, ನರ್ಗೀಸ್ ಫಕ್ರಿ, ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ ಮುಂತಾದ ಹಲವು ನಟಿಯರ ಹೆಸರುಗಳು ಈ ಪಟ್ಟಿಯಲ್ಲಿವೆ.

ಇನ್ನು ರಣಬೀರ್ ಕಪೂರ್ ತಮ್ಮ ವೃತ್ತಿಜೀವನದಲ್ಲಿ 14 ಹಿಟ್ ಚಿತ್ರಗಳು ಮತ್ತು 7 ಫ್ಲಾಪ್ಗಳನ್ನು ನೀಡಿದ್ದಾರೆ. ಆದರೆ ಕಳೆದ ವರ್ಷ ತೆರೆಕಂಡ ‘ಅನಿಮಲ್’ ಚಿತ್ರದಲ್ಲಿ ಅವರು ತಮ್ಮ ಲುಕ್‌ನಿಂದ ಅಭಿಮಾನಿಗಳ ಮನಸ್ಸಲ್ಲಿ ಛಾಪು ಮೂಡಿಸಿದ್ದಾರೆ.. ಈ ಚಿತ್ರವು ವಿಶ್ವಾದ್ಯಂತ ರೂ.900 ಕೋಟಿ ಗಳಿಸಿ ಅವರ ವೃತ್ತಿಜೀವನದಲ್ಲಿ ಅತ್ಯುತ್ತಮ ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿತು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News