Drone Prathap: "ಓವರ್‌ನೈಟ್ ಹೀರೋ ಆಗ್ಬಿಟ್ರಲ್ಲಾ ಸರ್‌"... ಡ್ರೋನ್ ಬುದ್ಧಿವಂತಿಕೆಗೆ ಕಿಚ್ಚನ ಮೆಚ್ಚುಗೆ!

Bigg Boss Kannada 10: ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲೊ ಒಂದು ಕಡೆ ಕಳೆದು ಹೋಗಿದ್ದ ಡ್ರೋನ್‌ ಪ್ರತಾಪ್‌ ಇದೀಗ ಅಸಲಿ ಆಟ ಶುರು ಮಾಡಿದ್ದಾರೆ.. ಈ ಬಗ್ಗೆ ಕಿಚ್ಚ ಸುದೀಪ್‌ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ..

Written by - Savita M B | Last Updated : Nov 6, 2023, 01:35 PM IST
  • ಬಿಗ್‌ ಬಾಸ್‌ ಮನೆಯಲ್ಲಿ ಕಳೆದ ವಾರ ನಾಮಿನೇಷನ್ ಸಲುವಾಗಿ ಒಂದು ಟಾಸ್ಕ್‌ ನೀಡಲಾಗಿತ್ತು
  • ಅದರಲ್ಲಿ ಪ್ರತಾಪ್‌ ತಮ್ಮ ಅಸಲಿ ಮುಖವನ್ನು ತೋರಿಸಿದ್ದಾರೆ.
  • ಡ್ರೋನ್‌ ಪ್ರತಾಪ್‌ ಬುದ್ಧಿವಂತಿಕೆಗೆ ಕಿಚ್ಚನ ಮೆಚ್ಚುಗೆ
Drone Prathap: "ಓವರ್‌ನೈಟ್ ಹೀರೋ ಆಗ್ಬಿಟ್ರಲ್ಲಾ ಸರ್‌"... ಡ್ರೋನ್ ಬುದ್ಧಿವಂತಿಕೆಗೆ ಕಿಚ್ಚನ ಮೆಚ್ಚುಗೆ!  title=

Kiccha Sudeep on Drone Prathap: ಬಿಗ್‌ ಬಾಸ್‌ ಮನೆಯಲ್ಲಿ  ಕಳೆದ ವಾರ ನಾಮಿನೇಷನ್ ಸಲುವಾಗಿ ಒಂದು ಟಾಸ್ಕ್‌ ನೀಡಲಾಗಿತ್ತು.. ಅದರಲ್ಲಿ ಪ್ರತಾಪ್‌ ತಮ್ಮ ಅಸಲಿ ಮುಖವನ್ನು ತೋರಿಸಿದ್ದಾರೆ. ಇಷ್ಟು ದಿನ ಕಾಣದೇ ಕುಳಿತಿದ್ದ ಡ್ರೋನ್‌ ಇದೀಗ ತಮ್ಮ ಸ್ಟ್ಯಾಂಡ್‌ ತೆಗೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಕಿಚ್ಚ ಸುದೀಪ್‌ ಡ್ರೋನ್‌ ಪ್ರತಾಪ್‌ಗೆ ಹೊಗಳಿದ್ದಾರೆ.

ಬಿಗ್‌ ಬಾಸ್‌ ಮೆನೆಗೆ ಅಸಮರ್ಥರು ಎಂಬ ಪಟ್ಟಿಯೊಂದಿಗೆ ಎಂಟ್ರಿಕೊಟ್ಟಿದ್ದ ಡ್ರೋನ್‌ ಇದೀಗ ಎಲ್ಲರೂ ನಿಬ್ಬೆರಾಗಗುವಂತೆ ಮಾಡಿದ್ದಾರೆ.. ಕೆಲವೇ ಕೆಲವು ಸ್ಟ್ರಾಂಗ್‌ ಸ್ಪರ್ಧಿಗಳಲಿ ಡ್ರೋನ್‌ ಪ್ರತಾಪ್‌ ಕೂಡಾ ಒಬ್ಬರು. ಅದರಲ್ಲೂ ಕಳೆದ ವಾರ ಡ್ರೋನ್‌ ಕಿಂಗ್ ಎನಿಸಿಕೊಂಡಿದ್ರು..

ಇದನ್ನೂ ಓದಿ-Bollywood : 6 ಬಾರಿ ಮದುವೆ ಮುರಿದರೂ 7ನೇ ಬಾರಿ ಉದ್ಯಮಿ ಕೈ ಹಿಡಿದ ಖ್ಯಾತ ನಟಿ!

‌ಸದ್ಯ ಈ ಬಗ್ಗೆ ಕಿಚ್ಚ ಸುದೀಪ್‌ ವಾರಾಂತ್ಯದಲ್ಲಿ ಮಾತಾನಡಿದ್ದಾರೆ... ಬಲೂನ್‌ ಒಡೆದಾಗ ಸಿಕ್ಕ ಪಾಸ್‌ಗಳನ್ನು ಡ್ರೋನ್ ಬಚ್ಚಿಟ್ಟುಕೊಂಡ ಬುದಿವಂತಿಕೆಗೆ ಕಿಚ್ಚ ಫಿದಾ ಆಗಿದ್ದಾರೆ..  'ಓವರ್‌ನೈಟ್ ಹೀರೋ ಆಗ್ಬಿಟ್ರಲ್ಲಾ ಸರ್‌.... ವೆಲ್ ಡನ್ ಪ್ರತಾಪ್..' ಎಂದು ಹೊಗಳಿದ್ದಾರೆ.. 

ಪ್ರತಾಪ್‌ ಮಾಡಿದ್ದು ತಪ್ಪಲ್ಲ ಎಂದ ಕಿಚ್ಚ..
"ಓವರ್‌ನೈಟ್ ಹೀರೋ ಆಗ್ಬಿಟ್ರಲ್ಲಾ ಸರ್‌.. ವೆಲ್ ಡನ್ ಪ್ರತಾಪ್ ಅವ್ರೆ.. ವೆಲ್ ಡನ್.. ನನ್ನ ಪ್ರಕಾರ, ನಾಲ್ಕು ಪಾಸ್‌ಗಳಲ್ಲಿ ಒಂದನ್ನು ಜೇಬಿನಲ್ಲಿ ಇಟ್ಟುಕೊಂಡು, ಮೂರನ್ನು ಮೈಕ್‌ನಲ್ಲಿ ಬಚ್ಚಿಟ್ಟಿದ್ದು ತುಂಬ ಸುಂದರವಾದ ನಡೆಯಾಗಿತ್ತು. ಅದು ಕ್ರಿಮಿನಲ್‌ ಯೋಚನೆ ಅಲ್ಲ.. ಅದು ತುಂಬ ಒಳ್ಳೆಯ ಯೋಚನೆ..  ಅದರಲ್ಲಿ ತಪ್ಪೇನಿಲ್ಲ" ಎಂದು ಸುದೀಪ್ ಪ್ರತಾಪ್‌ ಬೆನ್ನು ತಟ್ಟಿದ್ದಾರೆ.. 

ಇದನ್ನೂ ಓದಿ-ಅಧೀರನ ಸಂಭಾವನೆ ರಿವಿಲ್‌! ವಿಲನ್‌ ಪಾತ್ರದಲ್ಲಿ ಆಕ್ಟ್‌ ಮಾಡೋಕೆ ಸಂಜು ಕೇಳೋದೆಷ್ಟು ಗೊತ್ತೇ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News