“ಅಪ್ಪಾ ತಪ್ಪಾಯ್ತಪ್ಪ… ಕ್ಷಮಿಸು!”- ತಂದೆ ಕರೆ ಮಾಡುತ್ತಿದ್ದಂತೆ ಬಿಕ್ಕಿಬಿಕ್ಕಿ ಅಳುತ್ತಾ ಡ್ರೋಣ್ ಪ್ರತಾಪ್ ಹೀಗಂದಿದ್ದೇಕೆ?

Drone Prathap, entertainment news in kannada: ವಾರಪೂರ್ತಿ ಜಗಳ, ವಾದ, ವೈಮನಸ್ಸುಗಳಿಂದಲೇ ಕೂಡಿದ್ದ ಬಿಗ್ ಬಾಸ್ ಮನೆಯಲ್ಲಿ ಇಂದು ಭಾವನಾತ್ಮಕ ಜಗತ್ತು ಅನಾವರಣಗೊಂಡಿದೆ.

Written by - Bhavishya Shetty | Last Updated : Nov 18, 2023, 05:45 PM IST
    • ಕಿಚ್ಚ ನಡೆಸಿಕೊಡುವ ಎಪಿಸೋಡ್’ಗಳು ಭರ್ಜರಿ ಯಶಸ್ಸು ಸಾಧಿಸುತ್ತಿದೆ
    • ಇಂದು ಕೂಡ ಅಂತಹದ್ದೇ ಒಂದು ಎಪಿಸೋಡ್ ಬಿಗ್ ಬಾಸ್ ವಾರದ ಕಥೆಯಲ್ಲಿ ಕಾಣಿಸಿಕೊಳ್ಳಲಿದೆ
    • ಮನೆಯಿಂದ ಬಂದ ಪತ್ರ ಓದುವುದಕ್ಕೆ ಸ್ಪರ್ಧಿಗಳು ಹರಸಾಹಸ ಪಟ್ಟಿದ್ದು ಸುಳ್ಳಲ್ಲ
“ಅಪ್ಪಾ ತಪ್ಪಾಯ್ತಪ್ಪ… ಕ್ಷಮಿಸು!”- ತಂದೆ ಕರೆ ಮಾಡುತ್ತಿದ್ದಂತೆ ಬಿಕ್ಕಿಬಿಕ್ಕಿ ಅಳುತ್ತಾ ಡ್ರೋಣ್ ಪ್ರತಾಪ್ ಹೀಗಂದಿದ್ದೇಕೆ? title=
drone pratap

Drone Prathap Father: ಬಿಗ್’ಬಾಸ್ ಸೀಸನ್ 10ರ ವಾರಾಂತ್ಯದ ಎಪಿಸೋಡ್’ಗಳು ಅಂದರೆ ಕಿಚ್ಚ ನಡೆಸಿಕೊಡುವ ಎಪಿಸೋಡ್’ಗಳು ಕಳೆದ ಕೆಲ ವಾರಗಳಿಂದ ಭರ್ಜರಿ ಯಶಸ್ಸು ಸಾಧಿಸುತ್ತಿದೆ. ಈ ಬಗ್ಗೆ ವಾಹಿನಿಯು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿಕೊಳ್ಳುವ ಮೂಲಕ ಮಾಹಿತಿ ಹಂಚಿಕೊಂಡಿತ್ತು.

 ಇದನ್ನೂ ಓದಿ: ಮತ್ತೊಂದು ಇತಿಹಾಸ ಸೃಷ್ಟಿಯ ತವಕದಲ್ಲಿ ವಿರಾಟ್ ಕೊಹ್ಲಿ! ಯಾವೊಬ್ಬ ಸಕ್ರಿಯ ಬ್ಯಾಟರ್ ಮಾಡಿರದ ದಾಖಲೆ

ಇಂದು ಕೂಡ ಅಂತಹದ್ದೇ ಒಂದು ಎಪಿಸೋಡ್ ಬಿಗ್ ಬಾಸ್ ವಾರದ ಕಥೆಯಲ್ಲಿ ಕಾಣಿಸಿಕೊಳ್ಳಲಿದೆ. ವಾರಪೂರ್ತಿ ಜಗಳ, ವಾದ, ವೈಮನಸ್ಸುಗಳಿಂದಲೇ ಕೂಡಿದ್ದ ಬಿಗ್ ಬಾಸ್ ಮನೆಯಲ್ಲಿ ಇಂದು ಭಾವನಾತ್ಮಕ ಜಗತ್ತು ಅನಾವರಣಗೊಂಡಿದೆ.

ಈ ವಾರ, ಮನೆಯಿಂದ ಬಂದ ಪತ್ರ ಓದುವುದಕ್ಕೆ ಸ್ಪರ್ಧಿಗಳು ಹರಸಾಹಸ ಪಟ್ಟಿದ್ದು ಸುಳ್ಳಲ್ಲ. ಈ ಎಲ್ಲದರ ಮಧ್ಯೆ ಡ್ರೋಣ್ ಪ್ರತಾಪ್’ಗೆ ತಮ್ಮ ಮನೆಯವರು ಅವರ ಜೊತೆ ಮಾತನಾಡುತ್ತಾರೆಯೇ? ತಾನು ಮಾಡಿದ ತಪ್ಪನ್ನು ಕ್ಷಮಿಸಿದ್ದಾರೆಯೇ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕಿತ್ತು. ಈ ವಿಚಾರ ಮನೆಯ ಜನರ ಜೊತೆ ಹೇಳಿಕೊಂಡು ಒಂದೊಮ್ಮೆ ಕಣ್ಣೀರು ಸುರಿಸಿದ್ದರು ಸಹ.

 ಇದನ್ನೂ ಓದಿ: “ಫೈನಲ್ ಪಂದ್ಯದಲ್ಲಿ ಸಿರಾಜ್ ಬದಲಿಯಾಗಿ ಈ ಅನುಭವಿ ಸ್ಪಿನ್ನರ್ ಆಡಲಿದ್ದಾರೆ”- ಬಿಸಿಸಿಐ ಅಧಿಕಾರಿ ಮಾಹಿತಿ

ಇದೀಗ ಕಿಚ್ಚ ಸುದೀಪ್ ಅವರು ಪ್ರತಾಪ್ ಅವರಿಗೆ ಬಿಗ್ ಸರ್ಪೈಸ್ ನೀಡಿದ್ದಾರೆ. ಅದೇನೆಂದರೆ ಪ್ರತಾಪ್ ಅವರ ತಂದೆ ಸ್ವತಃ ಕರೆ ಮಾಡಿ ಮಗನ ಜೊತೆ ಮಾತನಾಡುವಂತೆ ಮಾಡಿದ್ದಾರೆ. ಈ ಸರ್ಪೈಸ್’ಗೆ ಸಂತಸದಲ್ಲಿ ಕಣ್ಣೀರಾದ ಪ್ರತಾಪ್, “ಅಪ್ಪಾ ತಪ್ಪಾಯತ್ತಪ್ಪಾ, ಕ್ಷಮಿಸು” ಎಂದು ಗೋಗರೆದಿದ್ದಾರೆ. ಈ ಭಾವನಾ ಜಗತ್ತಿನ ವಿಡಿಯೋವನ್ನು ಕಲರ್ಸ್ ಕನ್ನಡ ವಾಹಿನಿ ತಮ್ಮ ಸೋಶಿಯಲ್ ಮೀಡಿಯಾ ಅಧಿಕೃತ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News