BBK10: ವಿನಯ್‌-ಕಾರ್ತಿಕ್‌ಗೆ ಥಂಡಾಪಾನಿ ಶಿಕ್ಷೆ! ತಣ್ಣೀರ ಅಭಿಷೇಕದಿಂದ...ಮುಂದೆ ಬಿಸಿನೀರ ಹೊಗೆಯೂ ಆಡಲಿದೆಯೇ?

Vinay-Karthik Friendship: ಬಿಗ್‌ಬಾಸ್‌ ಮನೆ ಅಂದಮೇಲೆ ಎಲ್ಲದಕ್ಕೂ ನೀತಿ-ನಿಯಮಗಳು ಇದ್ದೇ ಇರತ್ತೆ. ಅದನ್ನು ಮೀರಿದವರಿಗೆ ಶಿಕ್ಷೆಯೂ ಅಷ್ಟೇ ಖಚಿತವಾಗಿ ಸಿಗುತ್ತದೆ. ಇಂದಿನ ಬಿಗ್‌ಬಾಸ್‌ ಮನೆಯ ಬೆಳಗು ಅಂಥದ್ದೊಂದು ಶಿಕ್ಷೆಗೆ ಸಾಕ್ಷಿಯಾಗಿದೆ. ಅಂದಹಾಗೆ ಶಿಕ್ಷೆಗೆ ಗುರಿಯಾದವರು ಯಾರು ಗೊತ್ತೆ?  

Written by - Savita M B | Last Updated : Oct 27, 2023, 03:54 PM IST
  • ವಿನಯ್‌ ಮತ್ತು ಕಾರ್ತಿಕ್ ಮೊದಲಿನಿಂದಲೂ ತಮ್ಮ ಸ್ನೇಹಸಂಬಂಧವನ್ನು ಉಳಿಸಿಕೊಂಡು ಬಂದವರು.
  • ಇದೀಗ ಈ ಸ್ನೇಹದ ಜೋಡಿ ಜೊತೆಜೊತೆಯಲ್ಲಿಯೇ ಶಿಕ್ಷೆ ಅನುಭವಿಸುವ ಸಂದರ್ಭವೂ ಬಂದಿದೆ.
  • ವಿನಯ್ ಮತ್ತು ಕಾರ್ತಿಕ್ ತಣ್ಣೀರ ಸ್ನಾನದಿಂದ ಗಡಗಡ ನಡುಗಿಹೋಗಿದ್ದಾರೆ.
BBK10: ವಿನಯ್‌-ಕಾರ್ತಿಕ್‌ಗೆ ಥಂಡಾಪಾನಿ ಶಿಕ್ಷೆ! ತಣ್ಣೀರ ಅಭಿಷೇಕದಿಂದ...ಮುಂದೆ ಬಿಸಿನೀರ ಹೊಗೆಯೂ ಆಡಲಿದೆಯೇ?  title=

Bigg Boss Kannada: ವಿನಯ್‌ ಮತ್ತು ಕಾರ್ತಿಕ್ ಮೊದಲಿನಿಂದಲೂ ತಮ್ಮ ಸ್ನೇಹಸಂಬಂಧವನ್ನು ಉಳಿಸಿಕೊಂಡು ಬಂದವರು. ಪರಸ್ಪರ ವಿರುದ್ಧ ತಂಡಗಳಲ್ಲಿ ಆಡುವಾಗಲೂ, ಜಿದ್ದಾಜಿದ್ದಿನ ಸ್ಪರ್ಧೆ ಇದ್ದಾಗಲೂ, ಟಾಸ್ಕ್‌ ಕಾರಣಕ್ಕೆ  ಮನೆಯೊಳಗೆ ಪರಸ್ಪರ ಮಾತಿಗೆ ಮಾತು ಬೆಳೆದಾಗಲೂ ಇವರಿಬ್ಬರೂ ನಂತರ ಅದನ್ನು ಮರೆತು ಒಂದಾಗಿದ್ದರು. ಭುಜಕ್ಕೆ ಭುಜ ಢೀ ಹೊಡೆದು ನಕ್ಕಿದ್ದರು. ಇದೀಗ ಈ ಸ್ನೇಹದ ಜೋಡಿ ಜೊತೆಜೊತೆಯಲ್ಲಿಯೇ ಶಿಕ್ಷೆ ಅನುಭವಿಸುವ ಸಂದರ್ಭವೂ ಬಂದಿದೆ. 

ಆಗಿದ್ದು ಇಷ್ಟೆ!
ಬೆಳಿಗ್ಗೆ ಎದ್ದಾಗ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಧ್ವನಿ ಕೇಳಿಸಿದೆ. ಆ ಧ್ವನಿ ಯಾವುದೋ ಸೂಚನೆ ನೀಡುವುದಕ್ಕಾಗಲಿ, ಶುಭಾಶಯ ಕೋರುವುದಕ್ಕಾಗಿ, ಅಥವಾ ಟಾಸ್ಕ್‌ ನೀಡುವುದಕ್ಕಾಗಲಿ ಬಂದಿದ್ದಲ್ಲ. ಬದಲಿಗೆ ಶಿಕ್ಷೆ ನೀಡುವುದಕ್ಕೆ! ‘ವಿನಯ್‌ ಹಾಗೂ ಕಾರ್ತಿಕ್ ಇಬ್ಬರೂ ರಾತ್ರಿ ಲೈಟ್‌ ಆಫ್ ಆಗುವ ಮೊದಲೇ ಮಲಗಿದ್ದರು. ಇನ್ನೂ ಮನೆಯ ಮಹತ್ವಗಳನ್ನು ಅರಿಯದೇ ಬದುಕುತ್ತಿರುವ ವಿನಯ್ ಹಾಗೂ ಕಾರ್ತಿಕ್ ಅವರಿಗೆ ಶಿಕ್ಷೆ ವಿಧಿಸಲಾಗುತ್ತಿದೆ’ -ಬಿಗ್‌ಬಾಸ್‌ ಧ್ವನಿ ಹೀಗೆ ಹೇಳುತ್ತಿರುವ ಹಾಗೆಯೇ ಮನೆಯವರೆಲ್ಲರೂ ಅಚ್ಚರಿಗೊಂಡಿದ್ದಾರೆ. 

ಇದನ್ನೂ ಓದಿ-ರಣಬೀರ್‌ನ ವಿಚಿತ್ರ ಫ್ಯಾಶನ್‌ ಸೆನ್ಸ್‌ ತಡೆದುಕೊಳ್ತಾಯಿದ್ದೀನಿ: ದೀಪಿಕಾಳ ವೇದನೆ

ಬಿಗ್‌ಬಾಸ್‌ ವಿಧಿಸಿದ ಶಿಕ್ಷೆಯೂ ಅಷ್ಟೇ ಪ್ರಖರವಾಗಿತ್ತು. ವಿನಯ್‌ ಮತ್ತು ಕಾರ್ತಿಕ್ ಅವರನ್ನು ಗಾರ್ಡನ್‌ ಏರಿಯಾದಲ್ಲಿ ಕುರ್ಚಿಯಲ್ಲಿ ಕೂಡಿಸಿ, ಮನೆಯವರೆಲ್ಲರೂ ಅವರ ಮುಖದ ಮೇಲೆ ತಣ್ಣೀರು ಎರಚಿ, ‘ಎದ್ದೇಳಿ ವಿನಯ್, ಎದ್ದೇಳಿ ಕಾರ್ತಿಕ್’ ಎಂದು ಹೇಳಿದ್ದಾರೆ. ಬೆಳಗಿನ ಚಳಿಯಲ್ಲಿ ಮೊದಲೇ ಮುದುರಿದ್ದ ವಿನಯ್ ಮತ್ತು ಕಾರ್ತಿಕ್ ತಣ್ಣೀರ ಸ್ನಾನದಿಂದ ಗಡಗಡ ನಡುಗಿಹೋಗಿದ್ದಾರೆ.

ಇದನ್ನೂ ಓದಿ-ಆ ಚಟಕ್ಕೆ ಶಿವಕಾರ್ತಿಕೇಯನ್ ಅಡಿಕ್ಟ್! ನನ್ನನ್ನೂ ಬಲವಂತ ಮಾಡಿದ್ರು.. ಸತ್ಯ ಬಿಚ್ಚಿಟ್ಟ ಪ್ರಿಯಾಂಕಾ ಮೋಹನ್  

ಶಿಕ್ಷೆ ಮುಗಿದ ಮೇಲೆ ಕಾರ್ತಿಕ್ ಅವರ ಒದ್ದೆ ತಲೆಯನ್ನು ಸಂಗೀತಾ ತಮ್ಮ ಕೈಯಾರೆ ಒರೆಸಿಕೊಟ್ಟಿದ್ದು ಇನ್ನೊಂದು ವಿಶೇಷ. ಶಿಕ್ಷೆಯನ್ನು ಅನುಭವಿಸಿದ ಮೇಲೂ ನಗುನಗುತ್ತಲೇ ಭುಜಕ್ಕೆ ಭುಜ ಢೀ ಹೊಡೆದು ‘ಶಿಕ್ಷೆ ಆಗಿದೆ’ ಎಂದು ಗಹಗಹಿಸಿ ನಕ್ಕಿದ್ದಾರೆ. ಸಂಗೀತಾ ‘ನಿಮಗೆ ನಾಚಕೆ ಆಗಲ್ವಾ?’ ಎಂದು ಕೇಳಿದ್ದಾರೆ. ಅಲ್ಲದೆ, ‘ಇನ್ನಾದ್ರೂ ಎದ್ದೇಳಿ ಕಾರ್ತಿಕ್’ ಎಂದು ಎಚ್ಚರಿಸಿದ್ದಾರೆ. 

ಕಾರ್ತಿಕ್ ಮಾತ್ರ, ‘ಪ್ರೀತಿ ತೋರಿಸ್ತೀಯಾ ಸರಿ… ಹಂಗಾ ತೋರಿಸೋದು?’ ಎಂದು ಸಂಗೀತಾಳನ್ನು ಹುಸಿಮುನಿಸಿನಿಂದಲೇ ಪ್ರಶ್ನಿಸಿದ್ದಾರೆ. ಇಂದಿನ ಬೆಳಿಗ್ಗೆಯೇ ತಣ್ಣೀರ ಅಭಿಷೇಕದಿಂದ ಶುರುವಾಗಿದೆ. ಮುಂದೆ ಬಿಸಿನೀರ ಹೊಗೆಯೂ ಆಡಲಿದೆಯೇ ಎಂಬ ಪ್ರಶ್ನೆಯೊಂದು ಪ್ರೇಕ್ಷಕರ ಮನಸಲ್ಲಿ ಮೂಡಿದೆ.

ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News