BBK 9 : ಗಳಿಸಿದ ಅಂಕ ಉಳಿಸಿಕೊಳ್ಳಲು ಪರದಾಟ! ಈ ವಾರ ಯಾರು ಔಟ್‌? ಯಾರಾಗ್ತಾರೆ ಇನ್‌!

Bigg Boss Kannada Season 9 : ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಗಳಿಸಿಕೊಳ್ಳೊದಷ್ಟೆ ಅಲ್ಲ, ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ನೀತಿಯನ್ನು ಬಿಗ್‌ ಬಾಸ್ ತಿಳಿಸಿದ್ದಾರೆ. ಈ ವಾರ ಎಲ್ಲಾ ಆಟಗಳು ತುಂಬಾ ಕಠಿಣ ಮತ್ತು ಬ್ಯಾಲೆನ್ಸಿಂಗ್‌ ಆಗಿ ಆಡೊ ಆಟ ಮತ್ತು ಮನೆಯ ನಿಯಮಗಳನ್ನು ನೆನಪಿಟ್ಟುಕೊಳ್ಳುವುದು ಒಂದಾಗಿತ್ತು. 

Written by - Chetana Devarmani | Last Updated : Dec 15, 2022, 02:26 PM IST
  • ಗಳಿಸಿದ ಅಂಕ ಉಳಿಸಿಕೊಳ್ಳಲು ಪರದಾಟ
  • ಈ ವಾರ ಯಾರು ಔಟ್‌? ಯಾರಾಗ್ತಾರೆ ಇನ್‌?
BBK 9 : ಗಳಿಸಿದ ಅಂಕ ಉಳಿಸಿಕೊಳ್ಳಲು ಪರದಾಟ! ಈ ವಾರ ಯಾರು ಔಟ್‌? ಯಾರಾಗ್ತಾರೆ ಇನ್‌! title=
ಬಿಗ್‌ ಬಾಸ್‌

Bigg Boss Kannada Season 9 : ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಗಳಿಸಿಕೊಳ್ಳೊದಷ್ಟೆ ಅಲ್ಲ, ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ನೀತಿಯನ್ನು ಬಿಗ್‌ ಬಾಸ್ ತಿಳಿಸಿದ್ದಾರೆ. ಈ ವಾರ ಎಲ್ಲಾ ಆಟಗಳು ತುಂಬಾ ಕಠಿಣ ಮತ್ತು ಬ್ಯಾಲೆನ್ಸಿಂಗ್‌ ಆಗಿ ಆಡೊ ಆಟ ಮತ್ತು ಮನೆಯ ನಿಯಮಗಳನ್ನು ನೆನಪಿಟ್ಟುಕೊಳ್ಳುವುದು ಒಂದಾಗಿತ್ತು. ವಾರದ ಕೊನೆಯಲ್ಲಿ ಯಾರು ಅತ್ಯತ್ತಮ ಪ್ರದರ್ಶನ ನೀಡುತ್ತಾರೊ ಅವರಿಗೆ ಬಿಗ್‌ ಬಾಸ್‌ ಕಡೆಯಿಂದ ಉಡುಗೊರೆ ದೊರೆಯುತ್ತದೆ.

ಇದನ್ನೂ ಓದಿ : ನಮಗೆ ಮನೆ ಮಾರೋ ಪರಿಸ್ಥಿತಿ ಬಂದಿಲ್ಲ, ಮುಂದೆ ಬರೋದು ಇಲ್ಲ - ರವಿಚಂದ್ರನ್ ಪುತ್ರ ಮನೋರಂಜನ್

ಈ ವಾರ ಪ್ರತಿಯೊಬ್ಬರು ಅವರದ್ದೇ ಆದ ಹಾಡು, ಕುಣಿತ, ಕಿರುಚಾಟ, ಸಣ್ಣ ಮೌನದಿಂದ ಕಳೆದಿದ್ದಾರೆ. ಈ ವಾರ ಯಾರು  ಅತ್ಯತ್ತಮ, ಯಾರು ಕಳಪೆ ಎಂದು ಕಾದು ನೋಡಬೇಕಿದೆ. ಮನೆಯಲ್ಲಿ ಗುರೂಜಿ ಹವಾ ಭರ್ಜರಿಯಾಗಿದೆ. ಏನೇ ಹೇಳಿ ದೋಸೆ ಬಿಸ್‌ನೆಸ್‌ ಕಲೆಕ್ಷನ್‌ ಮಾತ್ರ ಜೋರಾಗೆ ನಡಿತಿದೆ. ಗುರೂಜಿಗೆ ಅವರ ಬಿಸ್‌ ನೆಸ್‌ ಜೊತೆಗೆ ಎದುರಿನ ರೆಸ್ಟೊರೆಂಟ್‌ ಮೇಲೆ ಏನ್‌ ಮಾಡ್ತಿರಬಹುದು ಇವರು ಎಂಬ ಯೋಚನೆ ಶುರುವಾಗಿದೆ.ಮನೆಯಲ್ಲಿ ರಾಜಣ್ಣನ ಬದಲು ಇವರೇ ಡೈರೆಕ್ಟರ್‌ ಆಗಿದ್ದಾರೆ.

ದಿವ್ಯಾ ಉರುಡುಗ ಮನೆಯವರಿಗೆ ಸಕ್ಕರೆ, ಬೆಲ್ಲ, ಟೀ ಪುಡಿ, ಹಾಲು, ಪಾತ್ರೆ ಎಂದು ಪೆಟ್‌ ನೇಮ್ಸ್ ಗಳನ್ನು ಇಟ್ಟಿದ್ದಾರೆ. ಕಳೆದ ವಾರಕ್ಕೆ ಹೋಲಿಸಿದರೆ ದಿವ್ಯಾ ಈ ವಾರ ಎಲ್ಲರೊಟ್ಟಿಗೆ ಬೆರತು, ಲವಲವಿಕೆಯಿಂದ ಇದ್ದಾರೆ. ಅನುಪಮಾ ಡ್ಯಾನ್ಸ್‌ ಹೇಳಿಕೊಡುತ್ತಾ, ತಮ್ಮ ನೇರ ನುಡಿಗಳಿಂದ ಇದ್ದಾರೆ. ಕೊನೆಯ ವಾರ ಊಹಿಸಲು ಸಾಧ್ಯವಾಗದಂತೆ ಪ್ರಶಾಂತ್‌ ಸಂಬರಗಿ ಹೊರ ನಡೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಾರ ದಿವ್ಯಾ ಉರುಡುಗ ಎಲಿಮಿನೇಟ್‌ ಆಗಬಹುದು ಎಂದು ಹೇಳಲಾಗುತ್ತಿದೆ. ಯಾರೂ ಹೋಗುತ್ತಾರೆ, ಯಾರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಕಾದು ನೊಡೋಣ.

ಇದನ್ನೂ ಓದಿ : ಟ್ರೇಲರ್ ಮೂಲಕ ಸದ್ದು ಮಾಡುತ್ತಿದೆ "ನಾನು, ಅದು ಮತ್ತು ಸರೋಜ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News