"ಚಿತ್ರಕ್ಕೆ ಸಹಿ ಹಾಕಲು ಹೋದರೆ ನನ್ನೊಂದಿಗೆ ಮಲಗು ಅಂದಿದ್ರು ಆ ನಿರ್ಮಾಪಕ" ಬಿಗ್ ಬಾಸ್ ಬ್ಯೂಟಿ ಸೆನ್ಸೇಷನಲ್ ಕಾಮೆಂಟ್!‌

Bigg Boss Contestant: ಬಾಲಿವುಡ್ ನಟಿ, ಬಿಗ್ ಬಾಸ್ ಬ್ಯೂಟಿ ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ಆಕೆಯ ಕಾಮೆಂಟ್ ಈಗ ವೈರಲ್ ಆಗಿದೆ.

Written by - Savita M B | Last Updated : Mar 2, 2024, 03:56 PM IST
  • ಇಂದಿನ ಅನೇಕ ಸ್ಟಾರ್ ಹೀರೋಯಿನ್ ಗಳು ಈ ಹಿಂದೆ ಈ ಕಾಸ್ಟಿಂಗ್ ಕೌಚ್‌ನ ಕಹಿಅನುಭವವನ್ನು ಎದುರಿಸಿದ್ದಾರೆ
  • ಈ ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ನಾಯಕಿಯರು ತಮ್ಮ ಧ್ವನಿಯನ್ನು ತೆರೆದಿದ್ದಾರೆ.
  • ಇತ್ತೀಚೆಗಷ್ಟೇ ಅಂಕಿತಾ ಲೋಖಂಡೆ ಈ ಬಗ್ಗೆ ಆಘಾತಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ..
 "ಚಿತ್ರಕ್ಕೆ ಸಹಿ ಹಾಕಲು ಹೋದರೆ ನನ್ನೊಂದಿಗೆ ಮಲಗು ಅಂದಿದ್ರು ಆ ನಿರ್ಮಾಪಕ" ಬಿಗ್ ಬಾಸ್ ಬ್ಯೂಟಿ ಸೆನ್ಸೇಷನಲ್ ಕಾಮೆಂಟ್!‌  title=

Bollywood Actress Ankita Lokande: ಕಾಸ್ಟಿಂಗ್ ಕೌಚ್ ಎಂಬುದು ಚಿತ್ರರಂಗದಲ್ಲಿ ಗುಲ್ಲೆಬ್ಬಿಸಿರುವ ವಿಚಾರ.. ಕೆಲವು ನಾಯಕಿಯರು ಈ ಕಾಸ್ಟಿಂಗ್ ಕೌಚ್ ಇಂದಿಗೂ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಇಂದಿನ ಅನೇಕ ಸ್ಟಾರ್ ಹೀರೋಯಿನ್ ಗಳು ಈ ಹಿಂದೆ ಈ ಕಾಸ್ಟಿಂಗ್ ಕೌಚ್‌ನ ಕಹಿಅನುಭವವನ್ನು ಎದುರಿಸಿದ್ದಾರೆ. ಆದರೆ ಕೆಲವರು ಇದಕ್ಕೆ ಮಣಿದರೆ... ಇನ್ನು ಕೆಲವರು ಅದನ್ನು ದಿಕ್ಕರಿಸಿ ಚಿತ್ರರಂಗದಲ್ಲಿ ಬೆಳೆದು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಈ ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ನಾಯಕಿಯರು ತಮ್ಮ ಧ್ವನಿಯನ್ನು ತೆರೆದಿದ್ದಾರೆ. ಇತ್ತೀಚೆಗಷ್ಟೇ ಅಂಕಿತಾ ಲೋಖಂಡೆ ಈ ಬಗ್ಗೆ ಆಘಾತಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.. 

ಬಿಗ್ ಬಾಸ್ ಹಿಂದಿಯ 17 ನೇ ಸೀಸನ್ ಮೂಲಕ ಸೂಪರ್ ಜನಪ್ರಿಯತೆ ಗಳಿಸಿದ ಅಂಕಿತಾ ಲೋಖಂಡೆ, ಇತ್ತೀಚಿನ ಸಂದರ್ಶನವೊಂದರಲ್ಲಿ 19 ನೇ ವಯಸ್ಸಿನಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ-ನಟಿ ಸೌಂದರ್ಯ ಜೊತೆಗೆ ಜಗಪತಿ ಬಾಬು ಅಫೇರ್.! ಮದುವೆ ವರೆಗೂ ಹೋಗಿತ್ತಾ ಈ ಸಂಬಂಧ?

ದಿವಂಗತ ನಾಯಕ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಪ್ರೇಯಸಿಯೂ ಆಗಿರುವ ಅಂಕಿತಾ ಲೋಖಂಡೆ ಸಂದರ್ಶನವೊಂದರಲ್ಲಿ ''ನಾನು ಸೌತ್ ಚಿತ್ರರಂಗದ ಆಡಿಷನ್‌ಗೆ ಹೋಗಿದ್ದೆ. ನಂತರ ನನಗೆ ಕರೆ ಮಾಡಿ ನೀವು ಆಯ್ಕೆಯಾಗಿದ್ದೀರಿ.. ಬನ್ನಿ ಸಹಿ ಮಾಡಿ ಎಂದು ಹೇಳಿದರು. ನಾನು ಸಂತೋಷದಿಂದ ಹೋದೆ ಆದರೆ ಆ ದಿನ ನಡೆದಿದ್ದೇ ಬೇರೆ ಆ ನಿರ್ಮಾಪಕ ನನ್ನನ್ನು ಹೋಟೆಲ್‌ಗೆ ಸಹಿ ಮಾಡಲು ಕರೆದು ನನ್ನೊಂದಿಗೆ ಮಲಗು ಎಂದಿದ್ದರು... ಹೀಗಾಗಿ ದುಖದಲ್ಲಿ ಮುಳುಗಿದ ನಾನು ಸಿನಿಮಾ ಮಾಡಲೇ ಬಾರದು ಎಂದು ನಿರ್ಧರಿಸಿದ್ದೆ" ಎಂದು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.. 

ಇದನ್ನೂ ಓದಿ-ಒಂದೇ ಸಿನಿಮಾದಿಂದ ಸ್ಟಾರ್‌ ಪಟ್ಟ.. ಮದುವೆಗೂ ಮುನ್ನ ತಾಯಿಯಾದ ನಟಿ ಈಕೆ!

ಇನ್ನು ಪವಿತ್ರ ರಿಷ್ತಾ ಧಾರಾವಾಹಿಯ ಮೂಲಕ ಅಂಕಿತಾ ಲೋಖಂಡೆ ಉತ್ತಮ ನಟಿ ಎಂದು ಗುರುತಿಸಿಕೊಂಡರು. ಇದಲ್ಲದೆ, ಈ ಧಾರಾವಾಹಿಯ ಹೆಸರು ಹಿಂದಿ ಕಿರುತೆರೆ ಕ್ಷೇತ್ರದಲ್ಲಿ ಅಂಕಿತಾ ಲೋಖಂಡೆ ಅವರ ನಿಕ್‌ ನೇಮ್‌ ಆಗಿದೆ... ದಿವಂಗತ ಸುಶಾಂತ್ ಸಿಂಗ್ ರಜಪೂತ್ ಈ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು.. 

ಅಂಕಿತಾ ತನ್ನ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡ ನಂತರ, ದಕ್ಷಿಣದ ನಿರ್ಮಾಪಕ ಯಾರು ಎಂದು ಎಲ್ಲರೂ ಚರ್ಚಿಸುತ್ತಿದ್ದಾರೆ. ನಿರ್ಮಾಪಕ ಯಾರು ಎಂಬ ಬಗ್ಗೆ ನಟಿ ಯಾವುದೇ ಸುಳಿವು ನೀಡಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News