ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಧಂಧೆ ಬಗ್ಗೆ ಇಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಲೇಬೇಕು ನಟಿ ರಾಗಿಣಿ

ರಾಗಿಣಿ ದ್ವಿವೇದಿಗೆ ಸೋಮವಾರದವರೆಗೆ ಕಾಲವಕಾಶ ನೀಡದ ಸಿಸಿಬಿ (CCB) ಪೊಲೀಸರು ಇಂದೇ (ಸೆಪ್ಟೆಂಬರ್ 4) ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.  

Last Updated : Sep 4, 2020, 07:16 AM IST
  • ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಬೃಹತ್ ಡ್ರಗ್ಸ್ ಮಾಫಿಯಾ
  • ಕನ್ನಡ ಚಿತ್ರರಂಗದ 15 ಮಂದಿ ನಟ-ನಟಿಯರು ಭಾಗಿಯಾಗಿದ್ದಾರೆಂದು ಭಾರೀ ಮಟ್ಟದ ಚರ್ಚೆ
  • ಇದೇ ಹಿನ್ನಲೆಯಲ್ಲಿ ನಿನ್ನೆ ವಿಚಾರಣೆಗೆ ಹಾಜರಾಗಬೇಕಿದ್ದ ಚಿತ್ರನಟಿ ರಾಗಿಣಿ ದ್ವಿವೇದಿ ಅನಾರೋಗ್ಯದ ಕಾರಣಕೊಟ್ಟು ಹಾಜರಾಗಿರಲಿಲ್ಲ.
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಧಂಧೆ ಬಗ್ಗೆ ಇಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಲೇಬೇಕು ನಟಿ ರಾಗಿಣಿ title=

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಬೃಹತ್ ಡ್ರಗ್ಸ್ ಮಾಫಿಯಾದಲ್ಲಿ‌ (Drugs Mafia) ಕನ್ನಡ ಚಿತ್ರರಂಗದ 15 ಮಂದಿ ನಟ-ನಟಿಯರು ಭಾಗಿಯಾಗಿದ್ದಾರೆಂದು ಭಾರೀ ಮಟ್ಟದ ಚರ್ಚೆ ನಡೆಯುತ್ತಿದೆ. ಇದೇ ಹಿನ್ನಲೆಯಲ್ಲಿ ನಿನ್ನೆ ವಿಚಾರಣೆಗೆ ಹಾಜರಾಗಬೇಕಿದ್ದ ಚಿತ್ರನಟಿ ರಾಗಿಣಿ ದ್ವಿವೇದಿ (Ragini Dwivedi) ಅನಾರೋಗ್ಯದ ಕಾರಣಕೊಟ್ಟು ಹಾಜರಾಗಿರಲಿಲ್ಲ. ಮತ್ತೆ ಅವರಿಗೆ ಸಿಸಿಬಿ ಪೊಲೀಸರು ನೊಟೀಸ್ ನೀಡಿದ್ದು ಇಂದು ಅವರು ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಹಾಜರಾಗಲೇಬೇಕಿದೆ.

ನಿನ್ನೆ ಬೆಳಿಗ್ಗೆ 10 ಗಂಟೆಗೆ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಬರುವಂತೆ ನಟಿ ರಾಗಿಣಿಗೆ (Ragini) ನೊಟೀಸ್ ನೀಡಲಾಗಿತ್ತು.‌ ತಮ್ಮ ವಕೀಲರನ್ನು ಸಿಸಿಬಿ ಕಚೇರಿಗೆ ಕಳುಹಿಸಿದ್ದ ರಾಗಿಣಿ ದ್ವಿವೇದಿ 'ನನಗೆ ನೊಟೀಸ್ ಬಂದಿದೆ, ಆದರೆ ಬಹಳ‌ ಕಡಿಮೆ ಸಮಯ ಇದೆ. ಜೊತೆಗೆ ಅನಾರೋಗ್ಯದ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ‌ಮುಂದಿನ ಸೋಮವಾರ ವಿಚಾರಣೆಗೆ ಹಾಜರಾಗುತ್ತೇನೆ' ಎಂದು ಮನವಿ ಮಾಡಿದ್ದರು. ಬಳಿಕ‌ ಇದನ್ನು ಟ್ವೀಟ್ ಮುಖಾಂತರವೂ ತಿಳಿಸಿದ್ದರು.

ಆದರೆ ರಾಗಿಣಿ ದ್ವಿವೇದಿಗೆ ಸೋಮವಾರದವರೆಗೆ ಕಾಲವಕಾಶ ನೀಡದ ಸಿಸಿಬಿ (CCB) ಪೊಲೀಸರು ಇಂದೇ (ಸೆಪ್ಟೆಂಬರ್ 4) ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಹಾಗಾಗಿ ಅವರು ಇಂದು ವಿಚಾರಣೆಗೆ ಹಾಜರಾಗಲೇಬೇಕಿದೆ.

ಇವತ್ತು ನಟಿ ವಿಚಾರಣೆಗೆ ಹಾಜರಾಗದಿದೆ ಇದ್ದರೆ ತಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಿಸಿಬಿ ಪೊಲೀಸರು ರಾಗಿಣಿ ದ್ವಿವೇದಿಗೆ ನೀಡಿರುವ ಕಾರಣಕ್ಕೆ ಅವರು ಇಂದು ವಿಚಾರಣೆ ಎದುರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದೊಮ್ಮೆ ರಾಗಿಣಿ ದ್ವಿವೇದಿ ಇವತ್ತು ಸಹ ವಿಚಾರಣೆಗೆ ಹಾಜರಾಗದಿದ್ದರೆ ಹುಡುಕಾಟ ನಡೆಸಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇರುತ್ತದೆ. ಮೊನ್ನೆ (ಸೆಪ್ಟೆಂಬರ್ 2) ಸಂಜೆಯಿಂದ ರಾಗಿಣಿಯ ಸ್ನೇಹಿತ ಎನ್ನಲಾದ ರವಿಶಂಕರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ರವಿಶಂಕರ್ ಮೊಬೈಲ್ ನಲ್ಲಿ ಅವರು ರಾಗಿಣಿ ನಿರಂತರ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ.

ಇಬ್ಬರ ಟೆಕ್ಸ್ಟ್ ಮೆಸೇಜ್ ಹಾಗೂ ವಾಟ್ಸ್ ಅಪ್ (Whatsapp) ಚಾಟ್ ಗಳಲ್ಲಿ ಸಾಕಷ್ಟು ಕೋರ್ಡ್ ವರ್ಡ್ ಗಳು ಕಂಡುಬಂದಿವೆ. ಅವು ಅನುಮಾನಕ್ಕೂ ಎಡೆಮಾಡಿಕೊಟ್ಟಿವೆ. ಹಾಗಾಗಿ ಇಂದು ನಡೆಯಲಿರುವ ರಾಗಿಣಿ ದ್ವಿವೇದಿಯ ವಿಚಾರಣೆ ತೀವ್ರ ಕುತೂಹಲ ಮೂಡಿಸಿದೆ.

ರಾಗಿಣಿ ದ್ವಿವೇದಿ ಸ್ನೇಹಿತ ಎಂದು ಹೇಳಲಾಗುತ್ತಿರುವ ರವಿಶಂಕರ್  ಬೆಂಗಳೂರಿನ ಜಯನಗರದ ಆರ್ ಟಿಓ (RTO) ಕಚೇರಿಯ ಸಿಬ್ಬಂದಿಯಾಗಿದ್ದಾರೆ.
 

Trending News