ಬ್ರಾಂಡ್ ಅಂಬಾಸಿಡರ್ ಆಗಿದ್ದಕ್ಕೆ, ಬ್ರೇಕಪ್ ಕುರಿತು ಬಹಿರಂಗವಾಗಿ ಹೇಳಿಕೊಂಡ ಶಾರುಖ್ ಪುತ್ರಿ

Suhana khan : ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಹೊಸ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ, ಲಕ್ಸ್ ಸೋಪ್ ನ  ಬ್ರಾಂಡ್ ಅಂಬಾಸಿಡರ್ ಆಗಿದ್ದು, ಬ್ರೇಕಪ್ ಕುರಿತಂತೆ ಈ ವಿಡಿಯೋದಲ್ಲಿ ಮಾತನಾಡಿದ್ದಾರೆ. 

Written by - Zee Kannada News Desk | Last Updated : Apr 30, 2024, 11:12 PM IST
  • ಲಕ್ಸ್ ನ ಬ್ರಾಂಡ್ ಅಂಬಾಸಿಡರ್ ಆಗಿ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಕಾಣಿಸಿಕೊಂಡಿದ್ದಾರೆ.
  • ಇತ್ತೀಚಿಗಷ್ಟೇ ಅವರ ಮಗಳು ಸುಹಾನಾ ಬ್ರಾಂಡ್ ನ ಇತ್ತೀಚಿನ ರಾಯಭಾರಿಯಾಗಲು ಸಹಿ ಹಾಕಿದ್ದಾರೆ.
  • 19 ವರ್ಷಗಳ ನಂತರ ತಮ್ಮ ಮಗಳು ಕೂಡ ಅದೇ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಬ್ರಾಂಡ್ ಅಂಬಾಸಿಡರ್ ಆಗಿದ್ದಕ್ಕೆ, ಬ್ರೇಕಪ್ ಕುರಿತು ಬಹಿರಂಗವಾಗಿ ಹೇಳಿಕೊಂಡ ಶಾರುಖ್ ಪುತ್ರಿ title=

Sharukh khan daughter : ಲಕ್ಸ್ ನ ಬ್ರಾಂಡ್ ಅಂಬಾಸಿಡರ್ ಆಗಿ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಅವರ ತಂದೆ ಶಾರುಖ್ ಖಾನ್ ಬ್ರಾಂಡ್ ಅಂಬಾಸಿಡರ್ ಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರು. ಆ ಜಾಹಿರಾತಿನ ಸುದೀರ್ಘ ಪ್ರಯಾಣ ಬೆಳೆಸಿದರು. ಇತ್ತೀಚಿಗಷ್ಟೇ  ಅವರ ಮಗಳು ಸುಹಾನಾ ಬ್ರಾಂಡ್ ನ ಇತ್ತೀಚಿನ ರಾಯಭಾರಿಯಾಗಲು ಸಹಿ ಹಾಕಿದ್ದಾರೆ. ಮತ್ತು ಇಂದು ಲಕ್ಸ್ ಜಾಹಿರಾತಿನ ವಿಡಿಯೋ ಬಿಡುಗಡೆಗೊಂಡಿದೆ. 

ಇದನ್ನು ಓದಿ : Covishield : ಲಸಿಕೆಯಿಂದ ಅಡ್ಡ ಪರಿಣಾಮ ಎಂಬ ಆರೋಪದ ಬೆನ್ನಲ್ಲೇ ಪರಿಶೀಲನೆಗೆ ಅರೋಗ್ಯ ಸಚಿವರಿಂದ ಒತ್ತಾಯ

 ಶಾರುಖ್ ಲಕ್ಸ್ ನ ಬ್ರಾಂಡ್ ಅಂಬಾಸಿಡರ್ ಗಳಲ್ಲಿ  ಒಬ್ಬರಾಗಿ ತಮ್ಮ ಸುದೀರ್ಘ ಹೆಜ್ಜೆಗಳೊಂದಿಗೆ ಪ್ರಯಾಣ ಬೆಳೆಸಿ,  19 ವರ್ಷಗಳ ನಂತರ ತಮ್ಮ ಮಗಳು ಕೂಡ ಅದೇ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಮಗಳು ಸುಹಾನಾ ಬ್ರಾಂಡ್ ನ ಇತ್ತೀಚಿನ ರಾಯಭಾರಿಯಾಗಲು ಸಹಿ ಹಾಕಿದ್ದು, ಇದು ಸುಹಾನಾ ಅವರನ್ನು ಒಳಗೊಂಡ ಮೊದಲ ಜಾಹಿರಾತು ಅನಾವರಣಗೊಂಡಿದೆ. 

ಈ ಜಾಹಿರಾತಿನ ಪ್ರಾರಂಭದಲ್ಲೇ ಸುಹಾನಾ ಬ್ರೇಕಪ್ ಬಗ್ಗೆ ಮಾತಾನಾಡುತ್ತಾ ನಾನು ಬ್ರೇಕಪ್ ಮಾಡಿಕೊಂಡೆ ಎಂದು ಹೇಳಿ ನಾನು ಸೋಪ್ ನೊಂದಿಗೆ ಬ್ರೇಕಪ್ ಮಾಡಿಕೊಂಡೆ ಎಂದು ಹೇಳಿ ಮುಂದೆ ಜಾಹೀರಾತು ಹಾಗೆಯೇ ಮುಂದುವರೆಯುತ್ತದೆ. ಸಾಬೂನಿನ ಬಳಕೆಗೂ ಮತ್ತು ಬಾಡಿ ವಾಷ್ ಬಳಕೆಗೂ ಇರುವ ವ್ಯತ್ಯಾಸ ಕುರಿತು ಈ ಜಾಹೀರಾತು ತಿಳಿಸುತ್ತದೆ. 

ಬಾರ್ ನ ಪರಿಮಳವು ಕಾಲಾನಂತರದಲ್ಲಿ ಕಡಿಮೆಯಾಗುವುದರಿಂದ ಅವಳು ತನ್ನ ಸಾಬೂನಿನಿಂದ ಬೇರ್ಪಡುತ್ತಿದ್ದೇನೆ ಎಂದು ಹೇಳಿ, ನಂತರ ಅವಳು ಲಕ್ಸ್ ನ ಹೊಸ ಉತ್ಪನ್ನವನ್ನು ತೋರಿಸುತ್ತಾಳೆ ಮತ್ತು ಪ್ರಯೋಜನಗಳನ್ನು ಹೇಳುತ್ತಾ, ಇತರ ಲಕ್ಸ್ ಜಾಹೀರಾತು ಗಳಂತೆ, ಸುಹಾನಾ ಕೂಡ ಶವರ್ ದೃಶ್ಯದಲ್ಲಿ ಕಾಣಿಸಿಕೊಂಡರು.

ಇದನ್ನು ಓದಿ : ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಗೆದ್ದರೆ ನನಗೆ ಶಕ್ತಿ ಬಂದಂತೆ: ಸಿಎಂ ಸಿದ್ದರಾಮಯ್ಯ

ಅವರ ಮಗಳು ಲಕ್ಸ್ ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಕ್ಕೆ, ಪ್ರೇಕ್ಷಕರಿಗೆ ಶಾರುಖ್ ಲಕ್ಸ್ ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.2005ರಲ್ಲಿ ಬಿಡುಗಡೆಯಾದ ಈ ವಿಡಿಯೋದಲ್ಲಿ ಹೇಮಾ ಮಾಲಿನಿ, ಜೂಹಿ ಚಾವ್ಲಾ, ಕರೀನಾ ಕಪೂರ್ ಮತ್ತು ಶ್ರೀದೇವಿ ಅವರೊಂದಿಗೆ  ಶಾರುಖ್ ಬಾತ್ ಟಬ್ ನಲ್ಲಿ ಕಾಣಿಸಿಕೊಂಡಿದ್ದರು 

ಸುಹಾನಾ ಖಾನ್ ಆರ್ಚೀಸ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಈ ಚಿತ್ರವು ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಯಿತು ಮತ್ತು. ಸುಹಾನಾ ಈಗ ತನ್ನ ಮೊದಲ ದೊಡ್ಡ ಪರದೆಯ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಸುಹಾನಾ ಖಾನ್ ತಮ್ಮ ಮುಂದಿನ ಚಿತ್ರ ಕಿಂಗ್ ಗಾಗಿ ತಮ್ಮ ತಂದೆ ಶಾರುಖ್ ಖಾನ್ ಅವರೊಂದಿಗೆ ಕೈಜೋಡಿಸಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News