ಪತಿ ಅಭಿಷೇಕ್‌ನನ್ನು ಕುಟುಂಬದಿಂದ ಬೇರ್ಪಡಿಸಿದ್ರಾ ಐಶ್ವರ್ಯಾ ರೈ? ಬಚ್ಚನ್ ಫ್ಯಾಮಿಲಿ ಕಲಹಕ್ಕೆ ಸಾಕ್ಷಿಯಾಯ್ತು ಆ ಒಂದು ಪೋಟೋ!!

Aishwarya rai: ಮಾರ್ಚ್ 25 ರಂದು ದೇಶಾದ್ಯಂತ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಎಲ್ಲರೂ ತಮ್ಮ ಕುಟುಂಬದೊಂದಿಗೆ ಅತ್ಯಂತ ಉತ್ಸಾಹದಿಂದ ಹೋಳಿ ಆಡಿದರು. ಇದೇ ವೇಳೆ ಬಚ್ಚನ್ ಕುಟುಂಬವನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ.. ಆದರೆ ಇದೀಗ ಇತ್ತೀಚೆಗೆ ಹೊರಬಿದ್ದಿರುವ ಹೋಳಿ ಆಚರಣೆಯ ಪೋಟೋಗಳು ಮತ್ತೇನನ್ನೋ ಹೇಳುತ್ತಿವೆ. 

Written by - Savita M B | Last Updated : Mar 26, 2024, 04:28 PM IST
  • ಹೋಳಿ ಆಚರಣೆಯ ನಂತರ ಐಶ್ವರ್ಯಾ ರೈ ತಮ್ಮ ಕುಟುಂಬದೊಂದಿಗೆ ಹೋಳಿ ಆಚರಿಸಿಲ್ಲ
  • ಮಗಳು ಆರಾಧ್ಯ ಅವರ ಸ್ನೇಹಿತರ ಕುಟುಂಬದೊಂದಿಗೆ ಐಶ್ವರ್ಯ ರೈ ಈ ಬಾರಿ ಹೋಳಿ ಆಚರಿಸಿದ್ದಾರೆ
ಪತಿ ಅಭಿಷೇಕ್‌ನನ್ನು ಕುಟುಂಬದಿಂದ ಬೇರ್ಪಡಿಸಿದ್ರಾ ಐಶ್ವರ್ಯಾ ರೈ? ಬಚ್ಚನ್ ಫ್ಯಾಮಿಲಿ ಕಲಹಕ್ಕೆ ಸಾಕ್ಷಿಯಾಯ್ತು ಆ ಒಂದು ಪೋಟೋ!! title=

Aishwarya rai-Abhishek Bachchan: ವಾಸ್ತವವಾಗಿ, ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹೋಳಿ ಆಚರಣೆಯ ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದರು. ಇದರಲ್ಲಿ ಜಯಾ ಬಚ್ಚನ್ ವಾಟರ್ ಗನ್ ಹಿಡಿದು ಕಾಣಿಸಿಕೊಂಡಿದ್ದರು. ಹೀಗಿರುವಾಗ ಸೊಸೆ ಐಶ್ವರ್ಯ ಕೂಡ ಕುಟುಂಬದೊಂದಿಗೆ, ಎಲ್ಲರೂ ಒಟ್ಟಾಗಿ ಹೋಳಿ ಆಚರಿಸುತ್ತಿದ್ದಾರೆ ಎನ್ನಲಾಗಿತ್ತು.. 

ಆದರೆ ಹಾಗಾಗಿಲ್ಲ.. ಹೌದು! ಹೋಳಿ ಆಚರಣೆಯ ನಂತರ ಐಶ್ವರ್ಯಾ ರೈ ತಮ್ಮ ಕುಟುಂಬದೊಂದಿಗೆ ಹೋಳಿ ಆಚರಿಸಿಲ್ಲ ಎಂದು ತಿಳಿದುಬಂದಿದೆ. ಐಶ್ವರ್ಯಾ ಅವರ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಅದರಲ್ಲಿ ಅವರ ಅತ್ತೆ, ಮಾವ ಮತ್ತು ಇತರ ಕುಟುಂಬ ಸದಸ್ಯರು ಕಾಣಿಸುತ್ತಿಲ್ಲ. ಐಶ್ವರ್ಯಾ ಅವರೊಂದಿಗೆ ಅವರ ಮಗಳು ಆರಾಧ್ಯ ಮತ್ತು ಪತಿ ಮಾತ್ರ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ-Bollywood: ಅನುಷ್ಕಾ ಶರ್ಮಾ ಸೇರಿದಂತೆ ಕ್ರಿಕೆಟಿಗರನ್ನು ಮದುವೆಯಾದ ಬಾಲಿವುಡ್ ನಟಿಯರಿವರು!!

ಮಗಳು ಆರಾಧ್ಯ ಅವರ ಸ್ನೇಹಿತರ ಕುಟುಂಬದೊಂದಿಗೆ ಐಶ್ವರ್ಯ ರೈ ಈ ಬಾರಿ ಹೋಳಿ ಆಚರಿಸಿದ್ದಾರೆ.. ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಕೂಡ ಕಾಣಿಸಿಕೊಂಡಿದ್ದಾರೆ. ಇದರಿಂದ ಐಶ್ವರ್ಯಾ ತನ್ನ ಫ್ಯಾಮಿಲಿ ಜೊತೆ ಹೋಳಿ ಆಚರಿಸಿಲ್ಲ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿದೆ. ಐಶ್‌ ಕುಟುಂಬದೊಂದಿಗೆ ಯಾವುದೇ ಕಲಹ ಮಾಡಿಕೊಂಡಿಲ್ಲ ಎಂದು ಅಭಿಮಾನಿಗಳು ಊಹಿಸಿದ್ದರು.

ಆದರೆ ಅಭಿಮಾನಿಗಳ ಪ್ರಕಾರ ಐಶ್ವರ್ಯಾ ತನ್ನ ಸಂಬಂಧಿಕರು ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಹೋಳಿ ಆಚರಿಸದಿರುವುದು ಕುಟುಂಬದಲ್ಲಿ ಏನೋ ಸರಿಯಿಲ್ಲ ಎಂದು ಸೂಚಿಸುತ್ತದೆ. ಐಶ್ವರ್ಯಾ ಮತ್ತು ಅಭಿಷೇಕ್ ನಡುವಿನ ವಿಚ್ಛೇದನದ ಸುದ್ದಿ ಬಹಳ ದಿನಗಳಿಂದ ಹೊರಬರುತ್ತಿದೆ.. ಅಮಿತಾಭ್ ಬಚ್ಚನ್ ಅವರಂತಹ ವ್ಯಕ್ತಿಯ ಕುಟುಂಬದಲ್ಲಿ ಇದೆಲ್ಲ ಏಕೆ ನಡೆಯುತ್ತಿದೆ ಎಂದು ಅಭಿಮಾನಿಗಳು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಈ ಸುದ್ದಿಗೆ ಕುಟುಂಬದವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

ಇದನ್ನೂ ಓದಿ-ಧಾರಾವಾಹಿಯ ಅಣ್ಣ-ತಂಗಿ.. ನಿಜಜೀವನದ ಗಂಡ-ಹೆಂಡ್ತಿ! ‘ಶ್ರೀರಸ್ತು ಶುಭಮಸ್ತು’ ಪೂರ್ಣಿ ರಿಯಲ್‌ ಲೈಫ್ ಪತಿ ಈ ನಟ !!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News