Auto Expo 2023 : “ಥ್ರಿ ಲ್ & ಜಾಯ್ ಆಫ್ ಮೂವಿಂಗ್ ಟುಗೆದರ್” ಪರಿಕಲ್ಪನೆಯಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್

ಫಾರ್ಚೂನರ್, ಭಾರತಕ್ಕಾಗಿ ಟೊಯೊಟಾ ರೇಸಿಂಗ್ ಡೆವಲಪ್ಮೆಂಟ್ (TRD) ವಿಶೇಷವಾಗಿ ವಿನ್ಯಾಸಗೊಳಿಸಿದೆ, ಇದು ಪವರ್-ಪ್ಯಾಕ್ಡ್ 6-ಸ್ಪೀಡ್ ಡೀಸೆಲ್ ಮತ್ತು ಪೆಟ್ರೋಲ್ ಎಟಿ ಮತ್ತು ಎಂಟಿ ಎಂಜಿನ್ ಅನ್ನು ಹೊಂದಿದೆ, ಪರ್ವತಗಳನ್ನು ಮೋಲ್ ಹಿಲ್ ಗಳಾಗಿ(ಗುಡ್ಡಗಳು) ಪರಿವರ್ತಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

Written by - Zee Kannada News Desk | Last Updated : Jan 12, 2023, 03:59 PM IST
  • 2050 ರ ವೇಳೆಗೆ ಕಾರ್ಬನ್ ನ್ಯೂಟ್ರಾಲಿಟಿಗೆ ಜಾಗತಿಕ ಬದ್ಧತೆಯನ್ನು ಎಕ್ಸ್ಇವಿಸ್ (xEVs) ಮತ್ತು ಹಸಿರು ಪರ್ಯಾಯ ಇಂಧನ ತಂತ್ರಜ್ಞಾನಗಳ ದೃಢವಾದ ಸಾಲಿನೊಂದಿಗೆ ಬಲಪಡಿಸಲಿದೆ.
  • ಇನೋವಾ ಹೈಕ್ರಾಸ್, ಫಾರ್ಚೂನರ್, ಲೆಜೆಂಡರ್, ವೆಲ್ ಫೈರ್, ಕ್ಯಾಮ್ರಿ ಹೈಬ್ರಿಡ್ – ಸೆಗ್ಮೆಂಟ್ ನ ಪ್ರಮುಖ ಉತ್ಪನ್ನಗಳನ್ನು ಪ್ರದರ್ಶಿಸಲಿದೆ.
  • ಹಿಲಕ್ಸ್, ಆಲ್ ನ್ಯೂ ಲ್ಯಾಂಡ್ ಕ್ರುಸರ್ ಎಲ್ ಸಿ 300 ಮತ್ತು ಮಾಡಿಫೈಡ್ ಕೂಲ್ ಗ್ಲಾಂಝಾದ ಎಕ್ಸ್ ಟ್ರೀಮ್ ಆಫ್-ರೋಡ್ ಪರಿಕಲ್ಪನೆಯೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲಿದೆ.
 Auto Expo 2023 : “ಥ್ರಿ ಲ್ & ಜಾಯ್ ಆಫ್ ಮೂವಿಂಗ್ ಟುಗೆದರ್” ಪರಿಕಲ್ಪನೆಯಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ title=

ನವದೆಹಲಿ: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಅತ್ಯಾಕರ್ಷಕ ಶ್ರೇಣಿಯ ಉತ್ಪನ್ನ ಮತ್ತು ತಂತ್ರಜ್ಞಾನಗಳನ್ನು ಆಟೋ ಎಕ್ಸ್ಪೋ 2023 ರಲ್ಲಿ ಪ್ರದರ್ಶಿಸಿದೆ. ಥ್ರಿಲ್ ಅಂಡ್ ಜಾಯ್ ಆಫ್ ಮೂವಿಂಗ್ ಟುಗೆದರ್ ಎಂಬ ವಿಷಯದ ಆಧಾರದ ಮೇಲೆ, ಎಕ್ಸ್ಪೋದ ಸ್ಟಾಲ್ ನಂ. 10 ರಲ್ಲಿ ಟೊಯೊಟಾ ಸ್ಟಾಲ್ ಅನ್ನು ಟೆಕ್ನಾಲಜಿ(ತಂತ್ರಜ್ಞಾನ) ವಲಯ, ಎಮೋಷನಲ್ (ಭಾವನಾತ್ಮಕ) ವಲಯ ಮತ್ತು ಸುಸ್ಥಿರತೆ ವಲಯದ ಎಂಬ ಮೂರು ವಿಶಿಷ್ಟ ವಿಷಯಗಳ ಮೇಲೆ ಪರಿಕಲ್ಪನೆಯೊಂದಿಗೆ ಪ್ರದರ್ಶನದಲ್ಲಿ ಪಾಲ್ಗೊಂಡಿದೆ.

ಭಾರತದಲ್ಲಿ ತನ್ನ 25 ವರ್ಷಗಳ ಕಾರ್ಯಾಚರಣೆಯ ವೈಭವ ಪೂರಿತ ವರ್ಷಗಳಲ್ಲಿ ಟೊಯೊಟಾ ಗೌರವಾನ್ವಿತ ಗ್ರಾಹಕರ ಚಲನಶೀಲತೆಯ ಅಗತ್ಯಗಳನ್ನು ಪೂರೈಸಲು ಕೆಲಸ ಮಾಡುತ್ತಿದೆ. ಗ್ರಾಹಕರ ತೃಪ್ತಿಯ ಮೇಲೆ ದೃಢವಾದ ಗಮನ ಹರಿಸುವ ಮೂಲಕ ಕಂಪನಿಯು 2 ಮಿಲಿಯನ್ ಟೊಯೊಟಾ ಗ್ರಾಹಕರ ಕುಟುಂಬಗಳ ವಿಶ್ವಾಸವನ್ನು ಗೆದ್ದಿದೆ. ಎಕ್ಸ್ಪೋದಲ್ಲಿ ಕೆಳಕಂಡವು  ಪ್ರದರ್ಶನದಲ್ಲಿವೆ.

ಇದನ್ನೂ ಓದಿ: ಬಾದಾಮಿಯಿಂದಲೇ ಸ್ಪರ್ಧಿಸಲು ವಿದೇಶದಲ್ಲಿರುವ ಸಿದ್ದು ಅಭಿಮಾನಿ ಮನವಿ

ಟೆಕ್ನಾಲಜಿ ಝೋನ್ (ತಂತ್ರಜ್ಞಾನ ವಲಯ) - ಸುಧಾರಿತ ವಿದ್ಯುತ್ ಮತ್ತು ಹಸಿರು ಪರ್ಯಾಯ ಇಂಧನ ತಂತ್ರಜ್ಞಾನಗಳ ಶ್ರೇಣಿಯನ್ನು ಇಲ್ಲಿ ಪ್ರದರ್ಶಿಸಲಾಗಿದೆ.  ಕಾರ್ಬನ್ ಶೂನ್ಯತೆ  ಮತ್ತು ಹಸಿರು ಭವಿಷ್ಯಕ್ಕೆ ಒಂದು ದಿಕ್ಕು ದಿಕ್ಸೂಚಿ. ಕೆಳಕಂಡವು ಪ್ರದರ್ಶನಗಳಲ್ಲಿ ಇವು ಸೇರಿವೆ:

 ನೂತನವಾಗಿ ಬಿಡುಗಡೆಯಾಗಿರುವ  ಇನ್ನೋವಾ ಹೈಕ್ರಾಸ್, ಇದು ಕುಟುಂಬದ ಅಗತ್ಯಗಳನ್ನು ಪೂರೈಸುವ ಪರಿಪೂರ್ಣ ವಾಹನವಾಗಿದೆ, ಇದು ಅಮೂರ್ತ ನಿಲುವು ಮತ್ತು ಎಂಪಿವಿಯ ವಿಶಾಲತೆಯನ್ನು ಹೊಂದಿದೆ. ಇನ್ನೋವಾ ಹೈಕ್ರೊಸಿಸ್ 5 ನೇ ತಲೆಮಾರಿನ ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಸಿಸ್ಟಂನಿಂದ ಚಾಲಿತವಾಗಿದೆ.  TNGA 2.0 ಲೀಟರ್ 4-ಸಿಲಿಂಡರ್ ಗ್ಯಾಸೋಲಿನ್ ಎಂಜಿನ್, ಮೊನೊಕೋಕ್ ಫ್ರೇಮ್ ಸೇರಿದಂತೆ ಅನೇಕ ಫಸ್ಟ್ ಇನ್ ಸೆಗ್ಮೆಂಟ್ ವೈಶಿಷ್ಟ್ಯಗಳನ್ನು ಹೊಂದಿದೆ.

ಅರ್ಬನ್ ಕ್ರೂಸರ್ ಹೈರೈಡರ್, ಇದು ಟೊಯೋಟಾದ ಜಾಗತಿಕವಾಗಿ ಮೆಚ್ಚುಗೆ ಪಡೆದ ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (SHEV) ತಂತ್ರಜ್ಞಾನದ ಪ್ರವೇಶವನ್ನು ಭಾರತದ ಸಮೂಹ ವಿಭಾಗದಲ್ಲಿ ಗುರುತಿಸಿದೆ. ಇದು ಟೊಯೊಟಾದ 'ಸಾಮೂಹಿಕ ವಿದ್ಯುದ್ದೀಕರಣ'ದ ಪ್ರಯತ್ನಗಳಿಗೆ ಉತ್ತೇಜನ ನೀಡಿದೆ. ಇದರ ಅನುಕರಣೀಯ ಕಾರ್ಯಕ್ಷಮತೆ ಮತ್ತು ಅತ್ಯುತ್ತಮ ದರ್ಜೆಯ ಇಂಧನ ದಕ್ಷತೆಯ ಟೊಯೊಟಾದ ಪ್ರಯತ್ನಗಳಿಗೆ ಮತ್ತಷ್ಟು ಉತ್ತೇಜನ ನೀಡಿತು.

ಇದನ್ನೂ ಓದಿ: "ಮೋದಿ ಮೋದಿ ಎಂದು ಕೂಗುತ್ತಿದ್ದವರಿಗೆ ಬಿಜೆಪಿ ಪಕ್ಷ ಮಕ್ಮಲ್‌ ಟೋಪಿ ಹಾಕಿದೆ"

ಸುಸ್ಥಿರ ಐಷಾರಾಮಿ ಮತ್ತು ಉನ್ನತ ಸ್ಥಾನಮಾನವನ್ನು ವ್ಯಾಖ್ಯಾನಿಸುವ ದಿಟ್ಟ, ನಿರ್ಭೀತ ಮತ್ತು ವಿಶಿಷ್ಟವಾಗಿರುವ ವೆಲ್ ಫೈರ್. 2.5L ಗ್ಯಾಸೋಲಿನ್ ಹೈಬ್ರಿಡ್ ಎಂಜಿನ್ ಮತ್ತು ಡ್ಯುಯಲ್ ಮೋಟರ್ ಗಳೊಂದಿಗೆ ಜೋಡಿಸಲಾದ ಈ ವಾಹನವು ಗರಿಷ್ಠ ಕಾರ್ಯಕ್ಷಮತೆ, ಅತ್ಯಾಧುನಿಕ ಐಷಾರಾಮಿ ಮತ್ತು ಉತ್ಕೃಷ್ಟ ಇಂಧನ ದಕ್ಷತೆಯನ್ನು ನೀಡುತ್ತದೆ.

ಕ್ಯಾಮ್ರಿ ಹೈಬ್ರಿಡ್, ಇದು ಶಕ್ತಿಯುತ ಕಾರ್ಯಕ್ಷಮತೆ, ಪರಿಸರ ಸ್ನೇಹಪರತೆ, ಉನ್ನತ ಸುರಕ್ಷತೆ ಮತ್ತು ವರ್ಧಿತ ಎಕ್ಸ್ಟೀರಿಯರ್ ಮತ್ತು ಇಂಟೀರಿಯರ್ ವೈಶಿಷ್ಟ್ಯಗಳೊಂದಿಗೆ ಐಷಾರಾಮಿ ಪರಂಪರೆಯನ್ನು ಮುಂದುವರೆಸುತ್ತದೆ. ತಡೆರಹಿತ ಚಾಲನಾ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾದ ಶಕ್ತಿ ಮತ್ತು ಐಷಾರಾಮಿಯ ಅದ್ಭುತ ಸಂಯೋಜನೆ ಇದಾಗಿದೆ.

ಇತರ ಪ್ರದರ್ಶನಗಳಲ್ಲಿ ಪ್ಯೂರ್ ಎಲೆಕ್ಟ್ರಿಕ್ (ಬಿಇವಿ) ವಾಹನಗಳು ಸಹ ಸೇರಿವೆ, ಉದಾಹರಣೆಗೆ bZ4X, ಇದು ಸುಬಾರುವಿನ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಹೊಸ e-TNGA ಎಲೆಕ್ಟ್ರಿಕ್ ವೆಹಿಕಲ್ ಆರ್ಕಿಟೆಕ್ಚರ್ ಅನ್ನು ಬಳಸಿದ ಮೊದಲ ಮಾದರಿಯಾಗಿದೆ. ಮಿರಾಯ್ ಫ್ಯೂಯಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ಸ್ ((FCEV), ಕೊರೊಲಾ ಕ್ರಾಸ್ ಎಚ್ 2 ಕಾನ್ಸೆಪ್ಟ್, ಫ್ಯೂಯಲ್ ಸೆಲ್ ಸಿಸ್ಟಮ್ ಮಾಡ್ಯೂಲ್ ಮತ್ತು ಪ್ರಿಯಸ್ ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ((PHEV) ಮತ್ತು ಕೊರೊಲ್ಲಾ ಆಲ್ಟಿಸ್ ಫ್ಲೆಕ್ಸಿ-ಫ್ಯೂಯೆಲ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ಸ್ (FF-SHEV) ನಂತಹ ಇತರ ವಿದ್ಯುದ್ದೀಕೃತ ವಾಹನಗಳು (xEV)) ತಂತ್ರಜ್ಞಾನ ವಾಹನಗಳು ಪ್ರದರ್ಶನಗೊಳ್ಳುತ್ತಿವೆ.

 ಭಾವನಾತ್ಮಕ ವಲಯ(ಎಮೋಷನಲ್ ಝೋನ್) - ಗ್ರಾಹಕರ ಆಕಾಂಕ್ಷೆ ಮತ್ತು ಟೊಯೊಟಾವನ್ನು ಡ್ರೈವ್ ಮಾಡುವ ರೋಮಾಂಚನದೊಂದಿಗೆ ಸಂಪರ್ಕ ಹೊಂದಿದೆ.

 ಹೊಚ್ಚ ಹೊಸ ಲೈಫ್ ಸ್ಟೈಲ್ ವಾಹನ ಹಿಲಕ್ಸ್ ಎಲ್ಲಾ ಭೂಪ್ರದೇಶಗಳು ಮತ್ತು ಖಂಡಗಳಾದ್ಯಂತ ತೀವ್ರ ಗಟ್ಟಿತನ ಮತ್ತು ದಿಟ್ಟತನಕ್ಕೆ ಹೆಸರುವಾಸಿಯಾಗಿದೆ. ಇದರ ಕಾರ್ಯಕ್ಷಮತೆ, ಶಕ್ತಿ ಮತ್ತು ಅತ್ಯಾಧುನಿಕತೆಯ ಟ್ರೇಡ್ಮಾರ್ಕ್ ಸಂಯೋಜನೆಯೊಂದಿಗೆ. ಪ್ರದರ್ಶಿಸಲಾದ ಹಿಲಕ್ಸ್ ರೋಡ್ ಕಾನ್ಸೆಪ್ಟ್ ವೆಹಿಕಲ್ ನ ಎಕ್ಸ್ ಟ್ರೀಮ್ ಆಗಿದೆ.

ಆಲ್ ವ್ಹೀಲ್ ಡ್ರೈವ್ ಆಯ್ಕೆಯೊಂದಿಗೆ ಅರ್ಬನ್ ಕ್ರೂಸರ್ ಹೈರೈಡರ್ ನಿಯೋ ಡ್ರೈವ್ ಭಾರತದಲ್ಲಿ ಪ್ರತಿಷ್ಠಿತ ಬಿ-ಎಸ್ ಯುವಿ ಸೆಗ್ಮೆಂಟ್ ನಲ್ಲಿ ಟೊಯೊಟಾದ ಉಪಸ್ಥಿತಿಯನ್ನು ಮತ್ತಷ್ಟು ಮರುಸ್ಥಾಪಿಸಲು  ಉತ್ಸಾಹವನ್ನು ಹೆಚ್ಚಿಸಿದೆ.  AWD (ಆಲ್ ವ್ಹೀಲ್ ಡ್ರೈವ್), ಪನೋರಮಿಕ್ ಸನ್ರೂಫ್, 17" ಅಲಾಯ್,  ವೈರ್ ಲೆಸ್ ಚಾರ್ಜರ್, ಹೆಡ್ಸ್ ಅಪ್ ಡಿಸ್ಪ್ಲೇ (HUD)) ಮತ್ತು 360-ಡಿಗ್ರಿ ಕ್ಯಾಮೆರಾ ಮತ್ತು ಕನೆಕ್ಟೆಡ್ ಡಿಸಿಎಂ (ಡೇಟಾ ಕಮ್ಯುನಿಕೇಷನ್ ಮಾಡ್ಯೂಲ್) ನಂತಹ ಹಲವಾರು 'ಅತ್ಯುತ್ತಮ ಸೆಗ್ಮೆಂಟ್' ವೈಶಿಷ್ಟ್ಯಗಳೊಂದಿಗೆ ಇವು ಪ್ರದರ್ಶನಗೊಂಡಿವೆ.

ಇದನ್ನೂ ಓದಿ: National youth festival 2023 : ಹಣೆಗೆ ಹಚ್ಚಿದ ತಿಲಕ ಅಳಿಸಿಕೊಂಡ ಸಿಎಂ, ಚರ್ಚೆಗೆ ಗ್ರಾಸವಾದ ಮುಖ್ಯಮಂತ್ರಿಗಳ ನಡೆ

ಫಾರ್ಚೂನರ್, ಭಾರತಕ್ಕಾಗಿ ಟೊಯೊಟಾ ರೇಸಿಂಗ್ ಡೆವಲಪ್ಮೆಂಟ್ (TRD) ವಿಶೇಷವಾಗಿ ವಿನ್ಯಾಸಗೊಳಿಸಿದೆ, ಇದು ಪವರ್-ಪ್ಯಾಕ್ಡ್ 6-ಸ್ಪೀಡ್ ಡೀಸೆಲ್ ಮತ್ತು ಪೆಟ್ರೋಲ್ ಎಟಿ ಮತ್ತು ಎಂಟಿ ಎಂಜಿನ್ ಅನ್ನು ಹೊಂದಿದೆ, ಪರ್ವತಗಳನ್ನು ಮೋಲ್ ಹಿಲ್ ಗಳಾಗಿ(ಗುಡ್ಡಗಳು) ಪರಿವರ್ತಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

 ಲೆಜೆಂಡರ್, ಪ್ರದರ್ಶನ ಉತ್ಸಾಹಿಗಳು ಮತ್ತು ಐಷಾರಾಮಿ ಎಸ್ಯುವಿಯನ್ನು ಬಯಸುವವರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು "ಪ್ರತಿಷ್ಠಿತ" ಎಂದು ವಿಶಿಷ್ಟವಾಗಿ ಸ್ಥಾನ ಪಡೆದಿದೆ, ಇದು ಶಕ್ತಿ, ಅತ್ಯಾಧುನಿಕತೆ ಮತ್ತು ಸರಿ ಸಾಟಿಯಿಲ್ಲದ ಶೈಲಿಯ ಪ್ರಬಲ ಸಂಯೋಜನೆಯಾಗಿದೆ.

ಯುವ, ಕ್ರೀಡಾ ಉತ್ಸಾಹಿಗಳಿಗೆ ಗ್ಲಾಂಝಾ ಪ್ರದರ್ಶನದ ಮೂಲಕ ಒಂದು ಅತ್ಯುತ್ತಮವಾದ ಆಯ್ಕೆ ಲಭ್ಯವಿದೆ, ಇದು ಇ-ಸಿಎನ್ ಜಿ ತಂತ್ರಜ್ಞಾನದ ಮೂಲಕ ಕೆ.ಜಿ.ಗೆ 30.61 ಕಿ.ಮೀ ಮೈಲೇಜ್ ನೀಡುತ್ತದೆ. ಭಾರತೀಯ ಗ್ರಾಹಕರಿಗೆ ಟೊಯೊಟಾದ ಅತ್ಯಂತ ಕೈಗೆಟುಕುವ ಕೊಡುಗೆಯಾದ ಈ ಕೂಲ್ ಹ್ಯಾಚ್ಬ್ಯಾಕ್ ಸ್ಟೈಲಿಶ್, ತಂತ್ರಜ್ಞಾನ ಪೂರ್ಣ , ಸುರಕ್ಷಿತ ಮತ್ತು ಆರಾಮದಾಯಕ ಕಾರನ್ನು ಬಯಸುವವರಿಗೆ ಸೂಕ್ತವಾಗಿದೆ.

ನ್ಯೂ ಲ್ಯಾಂಡ್ ಕ್ರೂಸರ್ ಎಲ್ ಸಿ 300 ಒಂದು ಜಾಗತಿಕ ದಂತಕಥೆಯಾಗಿದ್ದು, ಅದರ ನಿಸ್ಸಂದಿಗ್ಧವಾದ ಕಠಿಣ ವೈಶಿಷ್ಟ್ಯ ಮತ್ತು ಪವರ್ ಪ್ಯಾಕ್ಡ್ ಪ್ರದರ್ಶನವು ಪ್ರೇಕ್ಷಕರನ್ನು ತನ್ನತ್ತ ಸೆಳೆಯಿತು.

 ಸುಸ್ಥಿರತೆ ವಲಯ - ವೆಹಿಕಲ್ ಟೇಲ್ ಪೈಪ್ ಹೊರಸೂಸುವಿಕೆಗಳನ್ನು ಮೀರಿದ ಟಿಕೆಎಂನ ಪ್ರಯತ್ನಗಳನ್ನು ಪ್ರದರ್ಶಿಸುತ್ತದೆ ಮತ್ತು ಸುಸ್ಥಿರ ಭವಿಷ್ಯದ ಕಡೆಗೆ ಟೊಯೊಟಾದ ಬದ್ಧತೆಯನ್ನು ಎತ್ತಿ ತೋರಿಸುವ ಹಸಿರು ಸ್ಥಾವರದಲ್ಲಿ ತಯಾರಿಸಿದ ಹಸಿರು ಉತ್ಪನ್ನಗಳ ಮೇಲೆ ಕೇಂದ್ರೀಕರಿಸುತ್ತದೆ:

 ಪ್ರದರ್ಶನವು ಟೊಯೋಟಾದ 2050ರ ಚಾಲೆಂಜ್ ಕುರಿತ ವೀಡಿಯೊಗಳು ಮತ್ತು TKM ಪ್ರಯತ್ನಗಳು, ಅದರ ಉತ್ಪಾದನಾ ಚಟುವಟಿಕೆಗಳು ಮತ್ತು ಪರಿಸರದ ನಡುವೆ ಸಾಮರಸ್ಯವನ್ನು ಸಾಧಿಸುವ ಮೂಲಕ ಸುಸ್ಥಿರ ಭವಿಷ್ಯಕ್ಕಾಗಿ ಕಂಪನಿಯ ದೃಷ್ಟಿಕೋನ, ತತ್ವಶಾಸ್ತ್ರ ಮತ್ತು ಬದ್ಧತೆಯ ಪ್ರದರ್ಶಿಸುವ ನಿಜವಾದ ಪ್ರತಿಬಿಂಬವಾಗಿದೆ.

ಹಸಿರು ಭವಿಷ್ಯಕ್ಕೆ ಬುದ್ಧಿವಂತ ಆಯ್ಕೆಗಳ" ಕಡೆಗೆ ಸಾಗುತ್ತಿರುವಾಗ ಭಾರತೀಯ ಮಾರುಕಟ್ಟೆಯ ವೈವಿಧ್ಯಮಯ ಚಲನಶೀಲತೆಯ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿರುವ ಉತ್ಪನ್ನ ಸಾಲು ಮತ್ತು ಸುಧಾರಿತ ತಂತ್ರಜ್ಞಾನಗಳ ಸಂಪೂರ್ಣ ಶ್ರೇಣಿಯನ್ನು ಅನುಭವಿಸಲು ನಾವು ನಿಮ್ಮೆಲ್ಲರನ್ನೂ ಟೊಯೋಟಾ ಸ್ಟಾಲ್ ಗೆ ಸ್ವಾಗತಿಸುತ್ತೇವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News