#AskSRK: PM Cares Fundಗೆ ಶಾರುಕ್ ಖಾನ್ ನೀಡಿದ ಕೊಡುಗೆ ಎಷ್ಟು? ಇಲ್ಲಿದೆ ಶಾರುಕ್ ಉತ್ತರ

ಆಸ್ಕ್ ಶಾರುಕ್ ಸೆಶನ್ ನಲ್ಲಿ ಅಭಿಮಾನಿಗಳು ಶಾರುಕ್ ಖಾನ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಉತ್ತರ ನೀಡಲು ಶಾರುಕ್ ಕೂಡ ಹಿಂದೇಟು ಹಾಕಿಲ್ಲ. ಒಂದೊಂದಾಗಿ ಪ್ರತಿಯೊಂದು ಪ್ರಶ್ನೆಗಳಿಗೂ ಶಾರುಕ್ ಸ್ವಾರಸ್ಯಕರ ಉತ್ತರ ನೀಡಿದ್ದಾರೆ.  

Last Updated : Apr 20, 2020, 07:01 PM IST
#AskSRK: PM Cares Fundಗೆ ಶಾರುಕ್ ಖಾನ್ ನೀಡಿದ ಕೊಡುಗೆ ಎಷ್ಟು? ಇಲ್ಲಿದೆ ಶಾರುಕ್ ಉತ್ತರ title=

ಕೊರೊನಾ ವೈರಸ್ ಕಾರಣ ಜನರಲ್ಲಿ ಉಂಟಾಗಿರುವ ಗಂಭೀರತೆಯನ್ನು ಕಾಲ ಕಾಲಕ್ಕೆ ತಕ್ಕಂತೆ ಬಾಲಿವುಡ್ ನಟರು ಲೈಟ್ ಮಾಡುತ್ತಿರುತ್ತಾರೆ. ಫನ್ನಿ ವಿಡಿಯೋ ಆಗಲಿ ಅಥವಾ ಸ್ವಾರಸ್ಯಕರ ಚಾಲೆಂಜ್ ಆಗಲಿ. ಇದೇ ರೀತಿಯ ಸ್ವಾರಸ್ಯಕರ ಕೆಲಸ ಶಾರುಕ್ ಕೂಡ ಮಾಡಿದ್ದಾರೆ. ಶಾರುಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಅಭಿಮಾನಿಗಳ ಜೊತೆಗೆ ಪ್ರಶ್ನೋತ್ತರ ಸೆಶನ್ ನಡೆಸಿದ್ದಾರೆ. ಈ ಸೆಷನ್ಸ್ ನಲ್ಲಿ ಅಭಿಮಾನಿಗಳು ಹಲವು ರೀತಿಯ ಪ್ರಶ್ನೆಗಳನ್ನು ಕೇಳಿದ್ದು, ಶಾರುಕ್ ಕೂಡ ಸ್ವಾರಸ್ಯಕರ ಉತ್ತರಗಳನ್ನು ನೀಡುತ್ತಿದ್ದಾರೆ.

ಏತನ್ಮಧ್ಯೆ ಟ್ವಿಟ್ಟರ್ ಬಳಕೆದರನೊಬ್ಬ ಶಾರುಕ್ ಅವರಿಗೆ ಡೊನೇಶನ್ ಕುರಿತು ಪ್ರಶ್ನಿಸಿದ್ದಾನೆ. ಈ ಕುರಿತು ಬರೆದುಕೊಂಡಿರುವ ಟ್ವಿಟ್ಟರ್ ಬಳಕೆದಾರ, "ಶಾರುಕ್ ಸರ್ ನಿಜವಾಗಿಯೂ ಹೇಳಿ ಪಿಎಂ ಫಂಡ್ ಗೆ ಎಷ್ಟು ಕೊಡುಗೆ ನೀಡಿದ್ದೀರಿ?".  ಈ ಪ್ರಶ್ನೆಗೆ ಶಾರುಕ್ ಕೂಡ ತನ್ನ ಅಭಿಮಾನಿಯ ಜೊತೆಗೆ ತಮಾಷೆ ಮಾಡಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಶಾರುಕ್, "ನಿಜವಾಗಿಯೂ.. ಖಜಾಂಚಿಯಾಗಿದ್ದೀರಾ?". ಅಂದರೆ, ತುಂಬಾ ಚಾಣಾಕ್ಷತೆಯಿಂದ ಉತ್ತರಿಸಿರುವ ಶಾರುಕ್ ಡೊನೇಶನ್ ನೀಡುವ ಪ್ರಶ್ನೆಗೆ ಉತ್ತರ ನೀಡಲು ನಿರಕರಿಸಿಯೂ ಇಲ್ಲ ಹಾಗೂ ಅಮೌಂಟ್ ಕುರಿತು ಮಾಹಿತಿಯೂ ನೀಡಲಿಲ್ಲ.

ಆಸ್ಕ್ ಶಾರುಕ್ ಸೆಶನ್ ನಲ್ಲಿ ಅಭಿಮಾನಿಗಳು ಶಾರುಕ್ ಖಾನ್ ಅವರಿಗೆ ಇನ್ನೂ ಹಲವು ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು ಶಾರುಕ್ ಕೂಡ ಹಿಂದೇಟು ಹಾಕಿಲ್ಲ. ಅವರೂ ಕೂಡ ಒಂದೊಂದಾಗಿ ಎಲ್ಲ ಪ್ರಶ್ನೆಗಳಿಗೆ ಸ್ವಾರಸ್ಯಕರ ಉತ್ತರ ನೀಡಿದ್ದಾರೆ.

ಇತ್ತೀಚಿಗೆ ವಿಶ್ವ ಆರೋಗ್ಯ ಸಂಘಟನೆ ಆಯೋಜಿಸಿದ್ದ ಒನ್ ವರ್ಲ್ಡ್ ಕಾನ್ಸರ್ಟ್ ನಲ್ಲಿಯೂ ಕೂಡ ಶಾರುಕ್ ಭಾಗವಹಿಸಿದ್ದರು. ಈ ಕಾನ್ಸರ್ಟ್ ನಲ್ಲಿ ಶಾರುಕ್ ಜೊತೆಗೆ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ನ ಹಲವು ತಾರೆಯರು ಭಾಗಿಯಾಗಿದ್ದರು. ವಿಶ್ವಾದ್ಯಂತ ಇರುವ ಹೆಲ್ತ್ ಕೆಯರ್ ವರ್ಕರ್ಸ್ ಪ್ರತಿ ಧನ್ಯವಾದ ಸಮರ್ಪಣೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಈ ಕಾನ್ಸರ್ಟ್ ಮೂಲಕ ಸಂಗ್ರಹಿಸಲಾಗಿರುವ ಹಣವನ್ನು ಕೊರೊನಾ ವೈರಸ್ ಪರಿಹಾರ ಕಾರ್ಯಕ್ಕಾಗಿ ಬಳಸಲಾಗುತ್ತಿದೆ.

Trending News