Virushka Love Story: ಪ್ರೀತಿ, ಜಗಳ.. ಮದುವೆಗೂ ಮುನ್ನ ಬ್ರೇಕಪ್! ಅನುಷ್ಕಾ - ವಿರಾಟ್‌ ಮತ್ತೆ ಒಂದಾಗಿದ್ದೇ ಅಚ್ಚರಿ!!

Anushka Sharma - Virat Kohli Love Story: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿಯನ್ನು ಅನೇಕರು ಇಷ್ಟಪಡುತ್ತಾರೆ. ಇಬ್ಬರೂ ಪವರ್ ಕಪಲ್ ಆಗಿ ಕಾಣುತ್ತಾರೆ.   

Written by - Chetana Devarmani | Last Updated : May 1, 2023, 05:24 PM IST
  • ಸ್ಟಾರ್‌ ಕಪಲ್‌ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ
  • ಮದುವೆಗೂ ಮುನ್ನ ಬ್ರೇಕಪ್!
  • ಅನುಷ್ಕಾ - ವಿರಾಟ್‌ ಮತ್ತೆ ಒಂದಾಗಿದ್ದೇ ಅಚ್ಚರಿ!!
Virushka Love Story: ಪ್ರೀತಿ, ಜಗಳ.. ಮದುವೆಗೂ ಮುನ್ನ ಬ್ರೇಕಪ್! ಅನುಷ್ಕಾ - ವಿರಾಟ್‌ ಮತ್ತೆ ಒಂದಾಗಿದ್ದೇ ಅಚ್ಚರಿ!!  title=
Anushka - Virat

Anushka Sharma - Virat Kohli Love Story: ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸದಾ ಕಾತರರಾಗಿರುತ್ತಾರೆ. ಹೀಗಿರುವಾಗ ಇಬ್ಬರ ಲವ್ ಸ್ಟೋರಿ ವಿಚಾರಕ್ಕೆ ಬಂದರೆ ಅಭಿಮಾನಿಗಳು ತುಂಬಾ ಉತ್ಸುಕರಾಗುತ್ತಾರೆ. ವಾಸ್ತವವಾಗಿ ಇಂದು ಅಂದರೆ ಮೇ 1 ರಂದು ಅನುಷ್ಕಾ ಶರ್ಮಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟುಹಬ್ಬದ ಈ ವಿಶೇಷ ಸಂದರ್ಭದಲ್ಲಿ, ನಾವು ನಿಮಗೆ ಅನುಷ್ಕಾ ಮತ್ತು ವಿರಾಟ್ ಅವರ ಪ್ರೇಮಕಥೆಯ ಆಸಕ್ತಿದಾಯಕ ಕಥೆಗಳನ್ನು ಹೇಳಲಿದ್ದೇವೆ. ಇಬ್ಬರ ನಡುವೆ ಪ್ರೀತಿ ಹೇಗೆ ಶುರುವಾಯಿತು ಎಂದು ತಿಳಿಯೋಣ.

ಅನುಷ್ಕಾ ಮತ್ತು ವಿರಾಟ್ ಮೊದಲ ಭೇಟಿ: 

2013ರಲ್ಲಿ ಶಾಂಪೂ ಜಾಹೀರಾತಿನಲ್ಲಿ ಅನುಷ್ಕಾ ಮತ್ತು ವಿರಾಟ್ ಮೊದಲ ಬಾರಿ ಭೇಟಿಯಾಗಿದ್ದರು. ಅನುಷ್ಕಾಳನ್ನು ಮೊದಲ ಬಾರಿಗೆ ಭೇಟಿಯಾದಾಗ ತುಂಬಾ ನರ್ವಸ್ ಆಗಿದ್ದೆ ಎಂದು ವಿರಾಟ್ ಹೇಳಿದ್ದಾರೆ. ವಿರಾಟ್ ನರ್ವಸ್ ಆಗಿದ್ದಾರೆ ಎಂಬುದು ಅನುಷ್ಕಾಗೆ ಚೆನ್ನಾಗಿ ಅರ್ಥವಾಗಿತ್ತಂತೆ.

ಇದನ್ನೂ ಓದಿ: 3 Idiots ನಲ್ಲಿ ಕರೀನಾ ಪಾತ್ರಕ್ಕೆ ಅನುಷ್ಕಾ ಶರ್ಮಾ ನೀಡಿದ್ದ ಆಡಿಷನ್ ವಿಡಿಯೋ ವೈರಲ್‌!

ಹೀಗಿರುವಾಗ ಕೊಹ್ಲಿಯನ್ನು ಕೂಲ್‌ ಮಾಡಲು ಅನುಷ್ಕಾ ಜೋಕ್ ಹೇಳಿದ್ದಾರೆ. ಇಲ್ಲಿಂದಲೇ ಇವರಿಬ್ಬರು ಸ್ನೇಹಿತರಾದರು. ನಂತರ ಅವರು ಅನೇಕ ಸ್ಥಳಗಳಲ್ಲಿ ಭೇಟಿಯಾದರು. ಕ್ರಮೇಣ ಇಬ್ಬರ ಸ್ನೇಹವೂ ಗಾಢವಾಗತೊಡಗಿತು. 2014 ರಲ್ಲಿ, ವಿರಾಟ್ ಮತ್ತು ಅನುಷ್ಕಾ ಅವರ ಸಂಬಂಧದ ಸುದ್ದಿ ಜೋರಾಗಿ ಹಬ್ಬಿತ್ತು. ಇಬ್ಬರೂ ಸಮಯ ಸಿಕ್ಕಾಗಲೆಲ್ಲಾ ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯುತ್ತಿದ್ದರು.

ಸ್ಟೇಡಿಯಂನಲ್ಲಿ ಫ್ಲೈಯಿಂಗ್‌ ಕಿಸ್‌ ಕೊಟ್ಟಿದ್ದ ಕೊಹ್ಲಿ :

ಅದೇ ವರ್ಷ ಹೈದರಾಬಾದ್‌ನಲ್ಲಿ ನಡೆದ ಏಕದಿನ ಪಂದ್ಯದ ವೇಳೆ ವಿರಾಟ್ ಅರ್ಧಶತಕ ಬಾರಿಸಿದ್ದರು. ಶತಕ ಬಾರಿಸಿದ ನಂತರವೇ ಅನುಷ್ಕಾಗೆ ವಿರಾಟ್ ಬ್ಯಾಚ್ ಮೂಲಕ ಫ್ಲೈಯಿಂಗ್ ಕಿಸ್ ನೀಡಿದ್ದರು. ಇಲ್ಲಿಂದ ಇಬ್ಬರ ಪ್ರೀತಿ ಚರ್ಚೆಯಾಗತೊಡಗಿತು. ಇದರ ನಂತರ, ಅನುಷ್ಕಾ ಅವರ ಹುಟ್ಟುಹಬ್ಬದಂದು ಭೇಟಿಯಾಗಲು ವಿರಾಟ್ ಉದಯಪುರ ತಲುಪಿದರು, ಅಲ್ಲಿ ಅನುಷ್ಕಾ ಅವರ ವೆಲ್ವೆಟ್ ಚಿತ್ರದ ಚಿತ್ರೀಕರಣದಲ್ಲಿದ್ದರು. 

ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಚಂದ್ರುರವರ ಕಥೆ ಹೇಗಿತ್ತು.. ಸಿಹಿಯೋ ಕಹಿಯೋ? 

2016ರಲ್ಲಿ ವಿರಾಟ್ ಮತ್ತು ಅನುಷ್ಕಾ ಬ್ರೇಕಪ್‌ : 

2016ರಲ್ಲಿ ವಿರಾಟ್ ಮತ್ತು ಅನುಷ್ಕಾ ಸಂಬಂಧದಲ್ಲಿ ಬಿರುಕು ಮೂಡಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಗಳು ಬಂದಿದ್ದವು. ವಿರಾಟ್ ಮತ್ತು ಅನುಷ್ಕಾ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದರು. ಇಬ್ಬರೂ ಒಟ್ಟಿಗೆ ಕಾಣಿಸುತ್ತಿರಲಿಲ್ಲ. ಹಾರ್ಟ್‌ ಬ್ರೇಕ್‌ ಶೀರ್ಷಿಕೆಯನ್ನೂ ಫೋಟೋವೊಂದಕ್ಕೆ ಕೊಹ್ಲಿ ನೀಡಿದ್ದರು. ಇದಾದ ನಂತರವೇ ಜನರು ಊಹಾಪೋಹ ಆರಂಭಿಸಿದರು.

2017 ರಲ್ಲಿ ಸಪ್ತಪದಿ ತುಳಿದ ಅನುಷ್ಕಾ - ವಿರಾಟ್‌ : 

ಇದಾದ ಬಳಿಕ 2016ರಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಮದುವೆಯಾದ ಬಳಿಕ ಮತ್ತೊಮ್ಮೆ ಇಬ್ಬರ ನಡುವೆ ಮಾತುಕತೆ ಶುರುವಾಗಿ ಆಪ್ತತೆ ಹೆಚ್ಚಾಗತೊಡಗಿತು. ಇದಾದ ನಂತರ ಅವರ ನಿಶ್ಚಿತಾರ್ಥದ ಸುದ್ದಿ ಬರಲಾರಂಭಿಸಿತು ಮತ್ತು ವಿರಾಟ್ ಟ್ವೀಟ್ ಮೂಲಕ ಇದನ್ನು ನಿರಾಕರಿಸಿದರು.

ಇದನ್ನೂ ಓದಿ: ಟಾಪ್‌ ನಟಿ ಮಾತ್ರವಲ್ಲ.. ಸ್ಟಾರ್‌ ಕ್ರಿಕೆಟಿಗನ ಪತ್ನಿ ಈ ಫೋಟೋದಲ್ಲಿರುವ ಪುಟ್ಟ ಬಾಲಕಿ

ನಾನು ಮತ್ತು ಅನುಷ್ಕಾ ನಿಶ್ಚಿತಾರ್ಥ ಮಾಡಿಕೊಳ್ಳುವ ದಿನ ಅಥವಾ ಮದುವೆ ಆಗುವ ದಿನ ನಾವು ಅದನ್ನು ಮುಚ್ಚಿಡುವುದಿಲ್ಲ, ನಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ವಿರಾಟ್ ಹೇಳಿದ್ದರು. ಅದರ ನಂತರ 2017 ರಲ್ಲಿ ಇಬ್ಬರ ಮದುವೆಯ ಬಗ್ಗೆ ಸುದ್ದಿಗಳು ಹೊರಬರಲು ಪ್ರಾರಂಭಿಸಿದವು. ಅಂತಿಮವಾಗಿ, 11 ಡಿಸೆಂಬರ್ 2017 ರಂದು ಇಬ್ಬರೂ ವಿವಾಹವಾದರು.

ಇಟಲಿಯಲ್ಲಿ ಸೀಕ್ರೇಟ್‌ ಮ್ಯಾರೇಜ್‌ : 

ಇಬ್ಬರೂ ಇಟಲಿಯ ಲೇಕ್ ಕೊಮೊದಲ್ಲಿ ರಹಸ್ಯವಾಗಿ ಮದುವೆಯಾಗಿದ್ದರು. ಈ ಮದುವೆಯಲ್ಲಿ ಕುಟುಂಬದವರು ಮತ್ತು ಇಬ್ಬರ ವಿಶೇಷ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ನಂತರ ಇಬ್ಬರೂ ತಮ್ಮ ಮದುವೆಯ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡರು. ವಿವಾಹದ ನಂತರ ವಿರಾಟ್ ಮತ್ತು ಅನುಷ್ಕಾ ದೆಹಲಿಯಲ್ಲಿ ಹಾಗೂ ಮುಂಬೈನಲ್ಲಿ ಎರಡು ಕಡೆ ಆರತಕ್ಷತೆಗಳನ್ನು ಆಯೋಜಿಸಿದರು. ಈ ದಂಪತಿ ಬಾಳಲ್ಲಿ ಮುದ್ದಾದ ಮಗಳು ವಾಮಿಕಾ ಆಗಮಿಸಿದರು. ಇದೀಗ ಇಬ್ಬರೂ ಸುಖ ದಾಂಪತ್ಯ ನಡೆಸುತ್ತಿದ್ದಾರೆ. 

ಇದನ್ನೂ ಓದಿ:  ಶ್ರೀದೇವಿಗೆ ಸ್ಟಾರ್ ಪಟ್ಟ ಬಂದಿದ್ದು ಈ ನಟಿ ಮಾಡಿದ ಆ ಒಂದು ತಪ್ಪಿನಿಂದ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News