ಬೆಂಗಳೂರು: ಚಂದನವನದ ಖ್ಯಾತ ಕಲಾವಿದರಾದ ಅನುಪ್ರಭಾಕರ್ ಮುಖರ್ಜಿ ಹಾಗೂ ರಘು ಮುಖರ್ಜಿ ಮೊದಲ ಬಾರಿಗೆ ತಮ್ಮ ಮುದ್ದು ಮಗಳು ‘ನಂದನ ಪ್ರಭಾಕರ್ ಮುಖರ್ಜಿ’ಯೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.
ಸಂಕ್ರಾಂತಿ ಶುಭಾಶಯ ಕೋರಿ ನಿಮೆಲ್ಲರಿಗೂ ನಮ್ಮ ಮಗಳು ‘ನಂದನ ಪ್ರಭಾಕರ್ ಮುಖರ್ಜಿ’ ಪರಿಚಯಿಸುತಿದ್ದೀವಿ!!! ಎಂದು ಅನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ನಟಿ ಅನು ಪ್ರಭಾಕರ್ ಹಾಗೂ ನಟ ರಘು ಮುಖರ್ಜಿ ಅವರು 2016 ಏಪ್ರಿಲ್ 25 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಅನುಪ್ರಭಾಕರ್ ಮುಖರ್ಜಿ 2018ರ ಆಗಸ್ಟ್ 15 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗಳಿಗೆ ‘ನಂದನ ಪ್ರಭಾಕರ್ ಮುಖರ್ಜಿ’ ಎಂದು ಹೆಸರಿಡಲಾಗಿದೆ.