Animal: ಶಾರುಕ್‌ಗೆ ರಣಬೀರ್ ಶಾಕ್‌..! ಬಿಡುಗಡೆಗೂ ಮುನ್ನವೇ ಜವಾನ್ ದಾಖಲೆ ಮುರಿದ ಅನಿಮಲ್

Animal Movie Records: 1000 ಕೋಟಿ ಕಲೆಕ್ಷನ್ ಮಾಡಿ ಗೆದ್ದು ಬೀಗಿದ ಶಾರುಕ್‌ ಅಭಿನಯದ ಜವಾನ್‌ ಸಿನಿಮಾ ದೊಡ್ಡ ದಾಖಲೆ ಬರೆದಿತ್ತು.. ಆದರೆ ಇದೀಗ ರಣಬೀರ್ ಕಪೂರ್ ಅವರ ಅನಿಮಲ್‌ ಚಿತ್ರವು ಈ ರೆಕಾರ್ಡ್‌ ಬ್ರೇಕ್‌ ಮಾಡಿದೆ ಎಂದು ವರದಿಯಾಗಿದೆ..   

Written by - Savita M B | Last Updated : Nov 10, 2023, 02:35 PM IST
  • ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರ ಕಳೆದ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಿತ್ತು
  • ರಣಬೀರ್ ಕಪೂರ್ ಅಭಿನಯದ ಅನಿಮಲ್ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ದಾಖಲೆಯನ್ನು ಮುರಿದಿದೆ
  • ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Animal: ಶಾರುಕ್‌ಗೆ ರಣಬೀರ್ ಶಾಕ್‌..! ಬಿಡುಗಡೆಗೂ ಮುನ್ನವೇ ಜವಾನ್ ದಾಖಲೆ ಮುರಿದ ಅನಿಮಲ್ title=

Animal Movie : ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರ ಕಳೆದ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಿತ್ತು. ಅಟ್ಲಿ ನಿರ್ದೇಶನದ ಈ ಸಿನಿಮಾದಲ್ಲಿ ಶಾರುಖ್ ಖಾನ್, ನಯನತಾರಾ, ವಿಜಯ್ ಸೇತುಪತಿ, ಯೋಗಿ ಬಾಬು ಮತ್ತು ಇತರರು ನಟಿಸಿದ್ದಾರೆ. ಜವಾನ್ ಚಿತ್ರದ ಮೂಲಕ ನಯನತಾರಾ, ವಿಜಯ್ ಸೇತುಪತಿ, ಯೋಗಿ ಬಾಬು ಹೀಗೆ ಅನೇಕ ತಮಿಳು ತಾರೆಯರು ಬಾಲಿವುಡ್‌ ಪ್ರವೇಶಸಿದ್ದರು.. ಹೀಗಾಗಿ ಚಿತ್ರವು ತಮಿಳು ಅಭಿಮಾನಿಗಳಲ್ಲಿಯೂ ಹೈಪ್ ಆಗಿತ್ತು.

ಚಿತ್ರವು ಮಿಶ್ರ ವಿಮರ್ಶೆಗಳನ್ನು ಪಡೆದಿದ್ದರೂ, ಭರ್ಜರಿ ಹಿಟ್ ಆಗುವುದರ ಜೊತೆಗೆ 1000 ಕೋಟಿ ಗಳಿಸಿ ದಾಖಲೆ ಬರೆದಿತ್ತು. ಅಲ್ಲದೇ ಇದಕ್ಕೂ ಮುನ್ನ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರವೂ 1000 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು..

ಇದನ್ನೂ ಓದಿ-BBK10: ಈ ವಾರ 7 ಮಂದಿ ನಾಮಿನೇಟ್..!‌ ನಿಮ್ಮ ಪ್ರಕಾರ ಈ ವಾರ ಯಾರು ಔಟ್ ಆಗಬಹುದು?

ಶಾರುಖ್ ಖಾನ್ ಎರಡು ಮೆಗಾ ಹಿಟ್ ಚಿತ್ರಗಳೊಂದಿಗೆ ಮತ್ತೆ ಯಶಸ್ಸಿನ ಟ್ರ್ಯಾಕ್‌ಗೆ ಮರಳಿದರು. ಆದರೆ ಇದೆಲ್ಲದರ ನಡುವೆ ರಣಬೀರ್ ಕಪೂರ್ ಅಭಿನಯದ ಅನಿಮಲ್ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ದಾಖಲೆಯನ್ನು ಮುರಿದಿದೆ ಎಂಬ ವರದಿಗಳು ಬಂದಿವೆ. ರಣಬೀರ್ ಕಪೂರ್ ಮತ್ತು ರಶ್ಮಿಕಾ ಅಭಿನಯದ ಅನಿಮಲ್ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನು ಈ ಅನಿಮಲ್‌ ಚಿತ್ರ ಡಿಸೆಂಬರ್ 1 ರಂದು ತೆರೆಗೆ ಬರಲಿದೆ. ಈ ಸಿನಿಮಾಗೆ ರಣಬೀರ್ ಕಪೂರ್ ಅವರು ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.. ಹೀಗಿರುವಾಗ ಅಮೆರಿಕವೊಂದರಲ್ಲೇ ಅನಿಮಲ್‌ ಒಟ್ಟು 900 ಸ್ಕ್ರೀನ್ ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಇದಕ್ಕೂ ಮೊದಲು ಜವಾನ್ ಯುಎಸ್ ನಲ್ಲಿ 850 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿ ಅತ್ಯುನ್ನತ ಸಾಧನೆ ಮಾಡಿತ್ತು. ಈಗ ಇದನ್ನು ರಣಬೀರ್ ಕಪೂರ್ ಅವರ ಅನಿಮಲ್ ಚಿತ್ರ ರಿಕ್ರಿಯೆಟ್‌ ಮಾಡುವುದರ ಜೊತೆಗೆ ಒಂದು ಹೆಜ್ಜೆ ಮುಂದಿದ್ದಾರೆ.. 

ಇದನ್ನೂ ಓದಿ-BBK10: ಈ ವಾರ 7 ಮಂದಿ ನಾಮಿನೇಟ್..!‌ ನಿಮ್ಮ ಪ್ರಕಾರ ಈ ವಾರ ಯಾರು ಔಟ್ ಆಗಬಹುದು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News