ಮುಂಬೈ: ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಹಲವು ದಿಗ್ಗಜರು ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಯಾಕೆ ಹಿಂಸೆಯನ್ನು ಯಾರು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. JNUನಲ್ಲಿ ನಡೆದ ಹಿಂಸಾಚಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂಬೈನ ಗೆಟ್ ವೇ ಆಫ್ ಇಂಡಿಯಾ ಬಳಿ ಪ್ರತಿಭಟನಾಕಾರರು ನೆರೆದಿದ್ದರು. ಆದರೆ ಈ ಪ್ರತಿಭಟನೆ ಕೇವಲ JNU ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾತ್ರ ಸೀಮಿತವಾಗಿತ್ತು. ಆದರೆ, ಈ ಸಂದರ್ಭದಲ್ಲಿ 'ಫ್ರೀ ಕಾಶ್ಮೀರ್' ಭಿತ್ತಿಪತ್ರಗಳನ್ನೂ ಸಹ ಪ್ರದರ್ಶಿಸಲಾಗಿವೆ. ಈ ಬಿತ್ತಿಪತ್ರಗಳನ್ನು ಗಮನಿಸಿದರೆ ಈ ಜನರು ಕಾಶ್ಮೀರವನ್ನು ದೇಶದ ಭಾಗವೆಂದು ಪರಿಗಣಿಸುವುದಿಲ್ಲವೆ? ಎಂಬುದರ ಕುರಿತು ಯೋಚನೆ ಮಾಡುವತ್ತ ನಮ್ಮನ್ನು ಕೊಂಡೊಯ್ಯುತ್ತವೆ. ಅಷ್ಟೇ ಅಲ್ಲ ಕಾಶ್ಮೀರ ಈ ದೇಶದಿಂದ ಬೇರ್ಪಡಬೇಕು ಎಂಬುದನ್ನು ಈ ಜನರು ಬಯಸುತ್ತಾರೆಯೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಪ್ರತಿಭಟನೆ JNUದಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ನಡೆದಿತ್ತೆ ಅಥವಾ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ನಡೆದಿತ್ತೆ ಎಂಬ ಪ್ರಶ್ನೆಗಳು ಇದೀಗ ಏಳಲಾರಂಭಿಸಿವೆ. ಇವೆಲ್ಲವುಗಳ ನಡುವೆ ಇದೀಗ 'ಶಿಕರಾ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಮಾಧ್ಯಮದ ಮೇಲೆ ಸಕತ್ ಹವಾ ಸೃಷ್ಟಿಸಲಾರಂಭಿಸಿದೆ.
'ಫ್ರೀ ಕಾಶ್ಮೀರ್' ಬಿತ್ತಿಪತ್ರಗಳ ಕುರಿತು ಝೀ ನ್ಯೂಸ್ ಜೊತೆ ಮಾತನಾಡಿರುವ 'ಶಿಕರಾ' ಚಿತ್ರದ ನಿರ್ದೇಶಕ ವಿಧು ವಿನೋದ್ ಚೋಪ್ರಾ, ತಾವು ಇಂತಹ ಚಟುವಟಿಕೆಗಳನ್ನೂ ಖಂಡಿಸುವುದಾಗಿ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿಡುಗಡೆಯಾಗುತ್ತಿರುವ 'ಶಿಕರಾ' ಚಿತ್ರ ಪ್ರೇಕ್ಷಕರಿಗೆ ತಂಪಿನ ಅನುಭವ ನೀಡಲಿದೆ ಎಂದು ಹೇಳಿದ್ದಾರೆ. ಈ ಚಿತ್ರ ಕಾಶ್ಮೀರಿ ಪಂಡಿತರ ಕಥಾ ಹಂದರವನ್ನು ಹೊಂದಿದೆ.
ಟ್ರೈಲರ್ ಆರಂಭದಲ್ಲಿ ದಂಪತಿಗಳು ಪರಸ್ಪರ ಶಾಯರಿ ಹಂಚಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ. ಈ ಮಧ್ಯೆ ಹೊತ್ತಿ ಉರಿಯುತ್ತಿರುವ ಮನೆಯೊಂದನ್ನು ಅವರಿಗೆ ಕಾಣಿಸುತ್ತದೆ. ಬಳಿಕ ತಮ್ಮ ಸ್ವಂತ ದೇಶದಲ್ಲಿಯೇ ಕಾಶ್ಮೀರಿ ಪಂಡಿತರು ಶರಣಾರ್ಥಿಗಳಾಗುತ್ತಾರೆ. ಸೂರು ಕಳೆದುಕೊಂಡ ಕಾಶ್ಮೀರಿ ಪಂಡಿತರು ರಸ್ತೆಗೆ ಬೀಳುವ ಪರಿಸ್ಥಿತಿ ಬಂದೊದಗುತ್ತದೆ. ಟ್ರೈಲರ್ ನಲ್ಲಿ ವಿಧು ಕಾಶ್ಮೀರಿ ಪಂಡಿತರ ಕಷ್ಟವನ್ನು ತೋರಿಸುವಲ್ಲಿ ಯಶಸ್ವಿಯಾಗಿದ್ದು, ಟ್ರೈಲರ್ ಸಕ್ಕತ್ತಾಗಿ ಮೂಡಿ ಬಂದಿದೆ.
ಈ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕೂಡ ಹಾಜರಿ ನಮೂದಿಸಿದ್ದಾರೆ. ಈ ಚಿತ್ರದಲ್ಲಿ ದ್ವೇಷದ ಬದಲಿಗೆ ಪ್ರೀತಿಗೆ ಜಾಗ ನೀಡುವ ಮಾತು ಹೇಳಲಾಗಿದೆ. ಈ ಕುರಿತು ಮಾತನಾಡಿರುವ ನಿರ್ದೇಶಕ ವಿಧು ವಿನೋದ್ ಚೋಪ್ರಾ ತಮ್ಮ ೩೦ ವರ್ಷಗಳ ಹಳೆಯ ಕಥಾಹಂದರ ಹೊಂದಿದ್ದರು ಕೂಡ ದೇಶದಲ್ಲಿ ಇಂದು ಏರ್ಪಟ್ಟ ಪರಿಸ್ಥಿತಿಗೆ ಪ್ರಾಸಂಗಿಕವಾಗಿದೆ ಎನ್ನುತ್ತಾರೆ. ದೇಶಾದ್ಯಂತ ಎಲ್ಲೆಡೆ ದ್ವೇಷದ ವಾತಾವರಣವಿದ್ದು, 'ಶಿಕರಾ' ಪ್ರೀತಿಯ ಕಿರಣವಾಗಲಿದೆ ಎಂದಿದ್ದಾರೆ. ಈ ಚಿತ್ರದಲ್ಲಿ ಸಾದಿಯಾ ಹಾಗೂ ಆದಿಲ್ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಕೂಡ ವಿಧು ವಿನೋದ್ ಚೋಪ್ರಾ ಹೊತ್ತುಕೊಂಡಿದ್ದಾರೆ. ಬರುವ ಫೆಬ್ರುವರಿ ೭ ಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ.