House Party: ಹೌಸ್ ಪಾರ್ಟಿ ಮಾಡೋರಿಗೆ ಸಿಹಿ ಸುದ್ದಿ, ರಿಲೀಸ್ ಆಯ್ತು ಆಲ್ ಓಕೆ ನ್ಯೂ ಸಾಂಗ್!

House Party: ಹೌಸ್ ಪಾರ್ಟಿ ಮಾಡೋರಿಗೆ ಸಿಹಿ ಸುದ್ದಿ ಸಿಕ್ಕಿದೆ.. ಆಲ್ ಓಕೆ ಅವರ ಹೊಸ ಪಾರ್ಟಿ ಸಾಂಗ್‌ ರಿಲೀಸ್‌ ಆಗಿದೆ.. ಈ ಹಾಡಿನ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ ಅಲೋಕ್ ಬಾಬು.. 

Written by - Chetana Devarmani | Last Updated : Mar 24, 2022, 12:50 PM IST
  • ಹೌಸ್ ಪಾರ್ಟಿ ಮಾಡೋರಿಗೆ ಸಿಹಿ ಸುದ್ದಿ
  • ರಿಲೀಸ್ ಆಯ್ತು ಆಲ್ ಓಕೆ ನ್ಯೂ ಸಾಂಗ್!
  • ಆಲ್​​ ಓಕೆ ಎಂದೇ ಜನಪ್ರಿಯರಾಗಿರುವ ಅಲೋಕ್‌ ಬಾಬು
  • ಕನ್ನಡಕ್ಕೆ ಹೊಸ ಬೆಡಗಿ ಅದ್ವಿಕಾ ಎಂಟ್ರಿ
  • ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದ ಆಲ್‌ ಓಕೆ
House Party: ಹೌಸ್ ಪಾರ್ಟಿ ಮಾಡೋರಿಗೆ ಸಿಹಿ ಸುದ್ದಿ, ರಿಲೀಸ್ ಆಯ್ತು ಆಲ್ ಓಕೆ ನ್ಯೂ ಸಾಂಗ್!   title=
ಆಲ್ ಓಕೆ

ಒಂದು ಕಾಲದಲ್ಲಿ ಪಾರ್ಟಿಗಳಲ್ಲಿ ಪರಭಾಷೆಯ ಹಾಡುಗಳನ್ನು ಡಿಜೆಯಾಗಿ ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಕನ್ನಡದ ರ್ಯಾಪ್‌ ಸಾಂಗ್ (Kannada Rap Songs).‌ ಡಿಜೆ ಗಳು ಬಂದಿವೆ. ಕನ್ನಡದ ಕೆಲವು ಪ್ರತಿಭೆಗಳು ಇದಕ್ಕೆ ಮುಖ್ಯ ಕಾರಣ. ಆ ಪೈಕಿ ಅಲೋಕ್​ (Alok Babu) ಕೂಡ ತುಂಬ ಫೇಮಸ್​. 

ಇದನ್ನೂ ಓದಿ:ಟ್ರೋಲ್ ಆಯ್ತು ಉಪೇಂದ್ರ ಹೊಸ ಡಿಪಿ! ಉಪ್ಪಿ ಹೊಸ ಅವತಾರ ಕಂಡು ದಂಗಾದ ಫ್ಯಾನ್ಸ್..

ಆಲ್​​ ಓಕೆ (All Ok) ಎಂಬ ಹೆಸರಿನಿಂದಲೇ ಜನಪ್ರಿಯತೆ ಪಡೆದುಕೊಂಡಿರುವ ಅವರು ಈಗಾಗಲೇ ಅನೇಕ ಹಿಟ್​ ಹಾಡುಗಳನ್ನು ನೀಡಿದ್ದಾರೆ. ‘ಡೋಂಟ್​ ವರಿ’, ‘ಹ್ಯಾಪಿ ಆಗಿದೆ’, ‘ಮಾರಮ್ಮನ ಡಿಸ್ಕೋ’, ‘ಯಾಕಿಂಗೆ ಮಗಾ ಯಾಕಿಂಗೆ’ ಮುಂತಾದ ಹಾಡುಗಳು ಜನಮೆಚ್ಚುಗೆ ಗಳಿಸಿವೆ. ಅದರಿಂದಾಗಿ ಆಲ್​ ಓಕೆ ಯಶಸ್ಸು ಪಡೆದುಕೊಂಡರು. 

ಈಗ ಅವರು ಒಂದು ಹೊಸ ಪಾರ್ಟಿ ಸಾಂಗ್‌ (Party Song) ಅನ್ನು ರಿಲೀಸ್‌ ಮಾಡಿದ್ದಾರೆ. ಅದೆ ಹೌಸ್‌ ಪಾರ್ಟಿ ಸಾಂಗ್‌. ಈ ಹಾಡು ಮನೆಯಲ್ಲಿ ಪಾರ್ಟಿ ಮಾಡುವ ಪ್ರತಿಯೊಬ್ಬರಿಗೂ ಹೇಳಿ ಮಾಡಿಸಿದಂತಿದೆ. ಗೋಕರ್ಣದಲ್ಲಿ (Gokarna) ಈ ಸಾಂಗ್‌ ಅನ್ನು ಶೂಟ್‌ ಮಾಡಲಾಗಿದ್ದು, ಸಖತ್‌ ಆಗಿ ಮೂಡಿಬಂದಿದೆ. 

ಇದನ್ನೂ ಓದಿ:RRR ರಿಲೀಸ್‌ಗೆ ಕ್ಷಣಗಣನೆ.. ಸಿನಿಮಾ ವಿರುದ್ಧ ಕನ್ನಡಿಗರ ಆಕ್ರೋಶಕ್ಕೆ ಕಾರಣವೇನು?

ಯೂಟ್ಯೂಬ್​ನಲ್ಲಿ ಆಲ್​ ಓಕೆ  ಆಫಿಸಿಯಲ್‌ ಚಾನಲ್‌ನಲ್ಲಿ ಈ ಸಾಂಗ್ ಬಿಡುಗಡೆಯಾಗಿದೆ. ಅಲೋಕ್​ ಅಭಿಮಾನಿಗಳು ಈ ಹಾಡನ್ನು ಇಷ್ಟಪಟ್ಟಿದ್ದಾರೆ. ಈ ಗೀತೆಯ ಇನ್ನೊಂದು ವಿಶೇಷ ಅಂದರೆ ಕನ್ನಡಕ್ಕೆ ಹೊಸ ಬೆಡಗಿ ಅದ್ವಿಕಾ ಎಂಟ್ರಿ. ಈ ಹಾಡಿನ ಮೂಲಕ ಅದ್ವಿಕಾ (Adhvika) ಅವರನ್ನು ಇಂಟ್ರಡ್ಯೂಸ್‌ ಮಾಡಲಾಗಿದೆ. 

ಒಟ್ಟಿನಲ್ಲಿ ಸೂಪರ್‌ ಡೂಪರ್‌ ಆಗಿ ಈ ಪಾರ್ಟಿ ಸಾಂಗ್‌ (House Party Song) ರೆಡಿಯಾಗಿ, ರಿಲೀಸ್‌ ಆಗಿದ್ದು, ಆಲ್‌ ಓಕೆ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News