ಐಶ್ವರ್ಯ-ಅಭಿಷೇಕ್‌ ಬಚ್ಚನ್‌ ವಿಚ್ಚೇದನ ವದಂತಿ ಕಾವಿನ ಬೆನ್ನಲ್ಲೇ.. ಬಚ್ಚನ್ ಕುಟುಂಬದಲ್ಲಿ ಕಿಡಿ ಹೊತ್ತ ಮತ್ತೊಂದು ಶಾಕಿಂಗ್‌ ಸುದ್ದಿ!

Bachchan Family: ಬಾಲಿವುಡ್‌ನ ಪ್ರಸಿದ್ಧ ಕುಟುಂಬಗಳಲ್ಲಿ ಒಂದಾದ ಬಚ್ಚನ್‌ ಫ್ಯಾಮಿಲಿ ಸದ್ಯ ಸುದ್ದಿಯಲ್ಲಿದೆ.. ಕಳೆದ ಹಲವಾರು ದಿನಗಳಿಂದ ಅಭಿಷೇಕ್‌ ಹಾಗೂ ಐಶ್ವರ್ಯ ನಡುವೆ ಯಾವುದೂ ಸರಿಯಿಲ್ಲ ಅವರಿಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ..   

Written by - Savita M B | Last Updated : Aug 3, 2024, 01:37 PM IST
  • ಅಮಿತಾಬ್ ಬಚ್ಚನ್ ಅವರ ಕುಟುಂಬವು ಯಾವಾಗಲೂ ಮುಖ್ಯಾಂಶಗಳಲ್ಲಿರುವುದು ಎಲ್ಲರಿಗೂ ಗೊತ್ತು.
  • ಇದೆಲ್ಲದರ ನಡುವೆ ಬಚ್ಚನ್ ಕುಟುಂಬಕ್ಕೆ ಸಂಬಂಧಿಸಿದ ಮತ್ತೊಂದು ಸುದ್ದಿ ಹೊರಬಿದ್ದಿದೆ..
ಐಶ್ವರ್ಯ-ಅಭಿಷೇಕ್‌ ಬಚ್ಚನ್‌ ವಿಚ್ಚೇದನ ವದಂತಿ ಕಾವಿನ ಬೆನ್ನಲ್ಲೇ.. ಬಚ್ಚನ್ ಕುಟುಂಬದಲ್ಲಿ ಕಿಡಿ ಹೊತ್ತ ಮತ್ತೊಂದು ಶಾಕಿಂಗ್‌ ಸುದ್ದಿ! title=

 navya naveli and siddhant chaturvedi breakup Romours: ಅಮಿತಾಬ್ ಬಚ್ಚನ್ ಅವರ ಕುಟುಂಬವು ಯಾವಾಗಲೂ ಮುಖ್ಯಾಂಶಗಳಲ್ಲಿರುವುದು ಎಲ್ಲರಿಗೂ ಗೊತ್ತು.. ಕಳೆದ ಹಲವಾರು ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಊಹಾಪೋಹಗಳಿವೆ. ಆದರೆ, ಈ ಸುದ್ದಿಗೆ ದಂಪತಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೆಲ್ಲದರ ನಡುವೆ ಬಚ್ಚನ್ ಕುಟುಂಬಕ್ಕೆ ಸಂಬಂಧಿಸಿದ ಮತ್ತೊಂದು ಸುದ್ದಿ ಹೊರಬಿದ್ದಿದೆ..

ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ತನ್ನ ಆತ್ಮೀಯ ಗೆಳೆಯನಿಂದ ಬೇರ್ಪಟ್ಟಿದ್ದಾರೆ ಎನ್ನುವ ಸುದಿಯೊಂದು ಹೊರಬೀಳುತ್ತಿದೆ.. ಅಭಿಷೇಕ್‌ ಐಶ್ವರ್ಯ ಅವರ ವಿಚ್ಛೇದನ ವದಂತಿಗಳ ಮಧ್ಯದಲ್ಲಿ ಈ ಜೋಡಿಯ ಬ್ರೇಕಪ್ ವರದಿಗಳು ಬಂದಿವೆ. ಎಂದರೇ ನವ್ಯಾ ಮತ್ತು ಸಿದ್ಧಾಂತ್ ಚತುರ್ವೇದಿ ಬೇರ್ಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ-ತೆಳ್ಳನೆಯ ಮೈಮಾಟದಿಂದ ಮೋಡಿ ಮಾಡಿದ್ದ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಇಷ್ಟು ದಪ್ಪ ಆಗಿದ್ದು ಏಕೆ!? ನಟಿಗೆ ಆಗಿದ್ದಾದರೂ ಏನು?

ಕಳೆದ ಹಲವಾರು ವರ್ಷಗಳಿಂದ, ಸಿದ್ಧಾಂತ್ ಚತುರ್ವೇದಿ ಮತ್ತು ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನಂದಾ ನಡುವೆ ಡೇಟಿಂಗ್ ವರದಿಗಳು ಬಂದಿದ್ದವು.. ಅಲ್ಲದೇ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ..  ಸಾಮಾಜಿಕ ಮಾಧ್ಯಮದಲ್ಲಿ ಅವರ ವೈರಲ್ ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಿದ ನೆಟಿಜನ್‌ಗಳು ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ಊಹಿಸಿದ್ದಾರೆ.

ಆದರೆ ಅವರಿಬ್ಬರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಲ್ಲದೇ ಇಬ್ಬರೂ ಸ್ನೇಹಿತರು ಎಂದು ಯಾವಾಗಲೂ ಹೇಳುತ್ತಿದ್ದರು. ಸದ್ಯದ ವರದಿಗಳನ್ನು ನಂಬುವುದಾದರೆ ಈ ರೂಮರ್ಡ್‌ ಕಪಲ್‌ ಬ್ರೇಕಪ್‌ ಮಾಡಿಕೊಂಡು ಸ್ನೇಹಿತರಂತೆ ಇದ್ದಾರೆ ಎನ್ನಲಾಗುತ್ತಿದೆ..  

ಇದನ್ನೂ ಓದಿ-ಹಾರ್ದಿಕ್ ಪಾಂಡ್ಯ ಜೊತೆ ಅಫೇರ್.. ಏಳು ವರ್ಷಗಳಿಂದ ಒಂದೇ ಒಂದು ಹಿಟ್ ಸಿನಿಮಾ ಇಲ್ಲ.. ಆದರೂ ಸಖತ್‌ ಫೇಮಸ್‌ ಈ ನಟಿ!!

ಇನ್ನು ನವ್ಯಾ ನವೇಲಿ ನಂದಾ ಅವರಿಗೆ ಸಿನಿಮಾಗಳಲ್ಲಿ ಆಸಕ್ತಿ ಇಲ್ಲ. ಹೀಗಾಗಿ ಅವರು ತನ್ನ ತಂದೆಯ ಬಿಜಿನೆಸ್‌ ಮೇಲೆ ಹೆಚ್ಚು ಗಮನ ನೀಡುತ್ತಿದ್ದಾರೆ.. ನವ್ಯಾ ಅವರು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ ಮತ್ತು ರೈತರನ್ನು ಭೇಟಿಯಾಗಿ ಅವರ ಅಗತ್ಯತೆಗಳ ಬಗ್ಗೆ ಮಾತನಾಡುತ್ತಾರೆ..

ನವ್ಯಾ ನವೇಲಿ ಅವರು ನ್ಯೂಯಾರ್ಕ್‌ನ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯದಿಂದ ಡಿಜಿಟಲ್ ತಂತ್ರಜ್ಞಾನ ಮತ್ತು UX ವಿನ್ಯಾಸದಲ್ಲಿ ಪದವಿ ಪಡೆದಿದ್ದಾರೆ. ಈಕೆ ಇಂದು ಕೋಟಿಗಳ ಒಡತಿ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News