BBK 9 : ಐಶ್ವರ್ಯಾ ಪಿಸ್ಸೆ ಹೊರಹೋಗುವ ಮುನ್ನ ‌ಆರ್ಯವರ್ಧನ್ ರನ್ನು ನೇರ ನಾಮಿನೇಟ್ ಮಾಡಿದ್ದೇಕೆ?

Bigg Boss Kannada Season 9 : ಬಿಗ್ ಬಾಸ್ ಕನ್ನಡ ಸೀಸನ್ 9 ಮನೆಯಲ್ಲಿ ಸ್ಪರ್ಧಿಗಳು ಒಂದು ವಾರ ಕಳೆದಿದ್ದಾರೆ. ಜೊತೆಗೆ ಮೊದಲ ಎಲಿಮಿನೇಷನ್ ಕೂಡ ನಡೆದಿದ್ದು, ರೇಸರ್‌ ಐಶ್ವರ್ಯ ಪಿಸ್ಸೆ ಹೊರಬಂದಿದ್ದಾರೆ.

Written by - Chetana Devarmani | Last Updated : Oct 3, 2022, 11:32 AM IST
  • ಬಿಗ್ ಬಾಸ್ ಕನ್ನಡ ಸೀಸನ್ 9 ವೀಕೆಂಡ್‌ ಎಪಿಸೋಡ್‌
  • ಮೊದಲ ವಾರ ಎಲಿಮಿನೇಟ್‌ ಆದ ಐಶ್ವರ್ಯ ಪಿಸ್ಸೆ
  • ಈ ವಾರ ‌ಆರ್ಯವರ್ಧನ್ ನೇರ ನಾಮಿನೇಟ್
BBK 9 :  ಐಶ್ವರ್ಯಾ ಪಿಸ್ಸೆ ಹೊರಹೋಗುವ ಮುನ್ನ ‌ಆರ್ಯವರ್ಧನ್ ರನ್ನು ನೇರ ನಾಮಿನೇಟ್ ಮಾಡಿದ್ದೇಕೆ? title=
ಬಿಗ್ ಬಾಸ್ ಕನ್ನಡ ಸೀಸನ್ 9

Bigg Boss Kannada Season 9 : ಬಿಗ್ ಬಾಸ್ ಕನ್ನಡ ಸೀಸನ್ 9 ಮನೆಯಲ್ಲಿ ಸ್ಪರ್ಧಿಗಳು ಒಂದು ವಾರ ಕಳೆದಿದ್ದಾರೆ. ಜೊತೆಗೆ ಮೊದಲ ಎಲಿಮಿನೇಷನ್ ಕೂಡ ನಡೆದಿದ್ದು, ರೇಸರ್‌ ಐಶ್ವರ್ಯ ಪಿಸ್ಸೆ ಹೊರಬಂದಿದ್ದಾರೆ. ಬೆಂಗಳೂರು ಮೂಲದ ಐಶ್ವರ್ಯಾ ಪಿಸ್ಸೆ ಅವರು ಮೋಟಾರ್‌ ಸ್ಪೋರ್ಟ್ಸ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದವರು. ಮಹಿಳಾ ಕ್ಯಾಟಗರಿಯಲ್ಲಿ ವಿಶ್ವಮಟ್ಟದಲ್ಲಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿ ಕೂಡಾ ಐಶ್ವರ್ಯ ಅವರದ್ದಾಗಿದೆ. 10 ಬಾರಿ ವರ್ಲ್ಡ್ ಚಾಂಪಿಯನ್ ಪಟ್ಟ ಗೆದ್ದ ಬೈಕ್ ರೇಸರ್‌ ಐಶ್ವರ್ಯಾ ಪಿಸ್ಸೆ ವೀಕ್ಷಕರ ಪ್ರೀತಿಯನ್ನು ಸಂಪಾದಿಸುವಲ್ಲಿ ಅವರು ವಿಫಲರಾಗಿದ್ದು, ಮೊದಲ ವಾರವೇ ಎಲಿಮಿನೇಟ್‌ ಆಗಿದ್ದಾರೆ.

ಇದನ್ನೂ ಓದಿ : BBK 9 : ಮೊದಲ ವಾರ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಪಡೆದವರು ಇವರೇ ನೋಡಿ.!

ಪ್ರತಿ ಸಲದಂತೆ ಈ ಬಾರಿಯೂ ಎಲಿಮಿನೇಟ್‌ ಆಗಿ ಮನೆಯಿಂದ ಹೊರ ಹೋಗುವವರಿಗೆ ಬಿಗ್‌ ಬಾಸ್‌ ವಿಶೆಷ ಅಧಿಕಾರ ನೀಡಿದ್ದರು. ಅದರಂತೆ ಐಶ್ವರ್ಯ ಪಿಸ್ಸೆ ಅವರಿಗೆ ನೀವು ಮನೆಯಿಂದ ಹೊರ ಹೋಗುವ ಮುನ್ನ 17 ಜನರಲ್ಲಿ ಒಬ್ಬರನ್ನು ನೇರ ನಾಮಿನೇಟ್‌ ಮಾಡಲು ತಿಳಿಸಿದರು. ಈ ವಿಶೇಷ ಅಧಿಕಾರ ಬಳಸಿಕೊಂಡು ಐಶ್ವರ್ಯ ಪಿಸ್ಸೆ ಅವರು ಆರ್ಯವರ್ಧನ್‌ ಗುರೂಜಿ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದರು. ಈ ವೇಳೆ ಐಶ್ವರ್ಯ ಅವರು ಆರ್ಯವರ್ಧನ್‌ ಅವರು ಯಾವಾಗಲೂ ಗ್ರಹಗತಿ ಎಂದು ಮಾತನಾಡುತ್ತಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಅದು ಸೂಕ್ತವೆನಿಸುವುದಿಲ್ಲ. ಈ ಕಾರ್ಯಕ್ರಮದಿಂದ ಎಷ್ಟೋ ಜನ ಸ್ಫೂರ್ತಿ ಪಡೆಯುತ್ತಿದ್ದಾರೆ. ಈ ರೀತಿ ಅವರು ಹೇಳುವುದು ತಪ್ಪು ಸಂದೇಶ ರವಾನಿಸುತ್ತದೆ ಎಂದು ಕಾರಣ ನೀಡಿದರು. 

ಐಶ್ವರ್ಯಾ ಪಿಸ್ಸೆ ಅವರು ಓಪನ್ ಅಪ್ ಆಗಲು ಸಮಯ ತೆಗೆದುಕೊಂಡಿದ್ದೇ ಅವರಿಗೆ ಮುಳುವಾಯಿತು. ಆರಂಭದಲ್ಲೇ ಎಲ್ಲರ ಜೊತೆಗೆ ಬೆರೆಯುವಲ್ಲಿ ಐಶ್ವರ್ಯ ವಿಫಲರಾದರು. ಅಲ್ಲದೇ ತಮ್ಮ ಸಾಮರ್ಥ್ಯವನ್ನು ಅಹ ತೋರಿಸುವಲ್ಲಿ ಎಡವಿದರು, ಇದೇ ಅವರು ಮೊದಲ ವಾರ ಎಲಿಮಿನೇಟ್‌ ಆಗಲು ಬಹುಮುಖ್ಯ ಕಾರಣವಾಯಿತು. ಈ ಅಂಶಗಳನ್ನು ಐಶ್ವರ್ಯ ಕೂಡ ಒಪ್ಪಿಕೊಂಡಿದ್ದಾರೆ. 

ಇದನ್ನೂ ಓದಿ :  ʼಯಾವುದಾದ್ರೂ ಹುಡುಗಿನ ಕ್ಯಾಚ್‌ ಹಾಕೊಂಡ್ರೆ ಒಳ್ಳೆಯದುʼ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News