Swami Nithyananda: ನಿತ್ಯಾನಂದನ ‘ಕೈಲಾಸ’ಕ್ಕೆ ಪ್ರಧಾನಿಯಾದ ನಟಿ ರಂಜಿತಾ!

Kailasa PM Actress Ranjitha: ಈಕ್ವೆಡಾರ್‌ನ ಕರಾವಳಿಯಲ್ಲಿ ದ್ವೀಪವೊಂದನ್ನು ಖರೀದಿಸಿ ತನ್ನದೇಯಾದ ದೇಶವನ್ನು ನಿರ್ಮಿಸಿಕೊಂಡಿರುವ ನಿತ್ಯಾನಂದ ನೂರಾರು ಶಿಷ್ಯರ ಜೊತೆಗೆ ವಾಸಿಸುತ್ತಿದ್ದಾನೆ.

Written by - Puttaraj K Alur | Last Updated : Jul 7, 2023, 06:44 PM IST
  • ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ತನ್ನ ಶಿಷ್ಯೆಯನ್ನು ‘ಕೈಲಾಸ’ದ ಪ್ರಧಾನಿಯನ್ನಾಗಿ ನೇಮಕ ಮಾಡಿದ್ದಾನೆ
  • ನಿತ್ಯಾನಂದನ ‘ಕೈಲಾಸ’ ದೇಶಕ್ಕೆ ಪ್ರಧಾನಿಯಾಗಿ ನೇಮಕವಾದ ಚಿತ್ರನಟಿ ರಂಜಿತಾ
  • ಈಕ್ವೆಡಾರ್‌ನ ಕರಾವಳಿಯಲ್ಲಿ ದ್ವೀಪವೊಂದನ್ನು ಖರೀದಿಸಿ ತನ್ನದೇ ದೇಶವನ್ನು ನಿರ್ಮಿಸಿಕೊಂಡಿರುವ ನಿತ್ಯಾನಂದ
Swami Nithyananda: ನಿತ್ಯಾನಂದನ ‘ಕೈಲಾಸ’ಕ್ಕೆ ಪ್ರಧಾನಿಯಾದ ನಟಿ ರಂಜಿತಾ! title=
ನಿತ್ಯಾನಂದನ ‘ಕೈಲಾಸ’ಕ್ಕೆ ರಂಜಿತಾ ಪ್ರಧಾನಿ!

ನವದೆಹಲಿ: ಅತ್ಯಾಚಾರ ಸೇರಿದಂತೆ ಅನೇಕ ವಿವಾದಗಳಿಗೆ ಸಿಲುಕಿ ಭಾರತದಿಂದ ಎಸ್ಕೇಪ್ ಆಗಿರುವ ನಿತ್ಯಾನಂದ ತನ್ನ ‘ಕೈಲಾಸ’ಕ್ಕೆ ಆತನ ಶಿಷ್ಯೆ, ನಟಿ ರಂಜಿತಾಳನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದಾನೆಂದು ವರದಿಯಾಗಿದೆ.

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ತನ್ನ ಆತ್ಮೀಯ ಶಿಷ್ಯೆಯನ್ನು ‘ಕೈಲಾಸ’ದ ಪ್ರಧಾನಿಯನ್ನಾಗಿ ನೇಮಕ ಮಾಡಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ‘ಕೈಲಾಸ’ವೆಂಬ ಹೊಸ ದೇಶ ಕಟ್ಟಿ, ಹೊಸ ಕೆರೆನ್ಸಿಯನ್ನು ಪರಿಚಯಿಸಿರುವ ನಿತ್ಯಾನಂದ ತನ್ನ ಶಿಷ್ಯರ ಜೊತೆ ಅಲ್ಲಿಯೇ ನೆಲಸಿದ್ದಾನೆ. ಇದೀಗ ಆ ದೇಶಕ್ಕೆ ಪ್ರಧಾನಿಯನ್ನೂ ನೇಮಕ ಮಾಡಲಾಗಿದೆ.

ಇದನ್ನೂ ಓದಿ: Viral Video: ಮನ್ಯಾಗ ಹೇಳಿ ಬಂದಿ ಏನೋ ತಮ್ಮಾ..? ಯಮನ ಜೊತೆ ಜಲ್ಲಾಟ ಆಡಿದ ಯುವಕ

ಈಕ್ವೆಡಾರ್‌ನ ಕರಾವಳಿಯಲ್ಲಿ ದ್ವೀಪವೊಂದನ್ನು ಖರೀದಿಸಿ ತನ್ನದೇಯಾದ ದೇಶವನ್ನು ನಿರ್ಮಿಸಿಕೊಂಡಿರುವ ನಿತ್ಯಾನಂದ ನೂರಾರು ಶಿಷ್ಯರ ಜೊತೆಗೆ ವಾಸಿಸುತ್ತಿದ್ದಾನೆ. ನಟಿ ರಂಜಿತಾಳಿಂದ ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ ನಿತ್ಯಾನಂದ ನಟಿಯ ಜೊತೆಗಿನ ಖಾಸಗಿ ವಿಡಿಯೋ ವಿಚಾರವಾಗಿ ಕೋರ್ಟ್ ಮೆಟ್ಟಿಲು ಏರಿದ್ದ. ಬಳಿಕ ದೇಶದಿಂದಲೇ ಪರಾರಿಯಾದ ಈತ ಶಿಷ್ಯರ ಬಳಗದೊಂದಿಗೆ ಹೊಸ ದೇಶವನ್ನು ಕಟ್ಟಿದ್ದ.

‘ಕೈಲಾಸ’ವೆಂಬ ಹಿಂದೂ ದೇಶ ಕಟ್ಟಿ ಅಚ್ಚರಿ ಮೂಡಿಸಿದ್ದ ನಿತ್ಯಾನಂದ ಇದೀಗ ಆ ದೇಶಕ್ಕೆ ನಟಿ ರಂಜಿತಾಳನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿದ್ದಾನೆಂದು ವರದಿಯಾಗಿದೆ. ನಿತ್ಯಾನಂದನ ‘ಕೈಲಾಸ’ ದೇಶಕ್ಕೆ ಬರಲು ವೀಸಾ ಕೂಡ ನೀಡಲಾಗುತ್ತದೆ. ದೇಶದ ಕೆರೆನ್ಸಿ, ವೀಸಾ ಮತ್ತು ದೇಶಕ್ಕೆ ಬರಲು ಯಾವ ನಿಯಮ ಪಾಲಿಸಬೇಕು ಅನ್ನೋದರ ಬಗ್ಗೆ ವೆಬ್‍ಸೈಟ್ ಕೂಡ ರೂಪಿಸಲಾಗಿದೆ. ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ನಿತ್ಯಾನಂದ ಇದೀಗ ರಂಜಿತಾಳನ್ನು ತನ್ನ ದೇಶದ ಪ್ರಧಾನಿಯನ್ನಾಗಿ ನೇಮಕ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾನೆ.

ಇದನ್ನೂ ಓದಿ: Coimbatore DIG Suicide: ಗುಂಡು ಹಾರಿಸಿಕೊಂಡು ಕೊಯಮತ್ತೂರು ಡಿಐಜಿ ಆತ್ಮಹತ್ಯೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News