ತುಪ್ಪ ಬೇಕಾ ತುಪ್ಪ ಅಂತ ಫೇಮಸ್ ಆದ ರಾಗಿಣಿ ಈಗ ರಾಜಕೀಯಕ್ಕೆ!

ರಾಜಕೀಯಕ್ಕೆ ಬರುವ ಆಸಕ್ತಿ ಇದೆ. ಆದರೆ ಚುನಾವಣೆಗೆ ನಿಲ್ಲುವ ಬಗ್ಗೆ ಇದುವರೆಗೂ ಆಲೋಚಿಸಿಲ್ಲ ಎಂದು ನಟಿ ರಾಗಿಣಿ ಹೇಳಿದ್ದಾರೆ.

Last Updated : Jul 31, 2018, 05:55 PM IST
ತುಪ್ಪ ಬೇಕಾ ತುಪ್ಪ ಅಂತ ಫೇಮಸ್ ಆದ ರಾಗಿಣಿ ಈಗ ರಾಜಕೀಯಕ್ಕೆ! title=

ಬೆಂಗಳೂರು: ಸ್ಯಾಂಡಲ್ ವುಡ್'ನ ತುಪ್ಪದ ಬೆಡಗಿ, ಕೆಂಪೇಗೌಡನ ಒಡತಿ ರಾಗಿಣಿ ದ್ವಿವೇದಿ ಸಿನಿರಂಗದೊಂದಿಗೆ ರಾಜಕಿಯ ರಂಗಕ್ಕೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ. 

ಚಿತ್ರರಂಗಕ್ಕೆ ಬಂದವರು ರಾಜಕೀಯಕ್ಕೆ ಬರೋದು ಮಾಮೂಲು. ಆದರೆ ರಾಗಿಣಿ ದ್ವಿವೇದಿ ಇಷ್ಟು ಬೇಗ ರಾಜಕೀಯಕ್ಕೆ ಬರ್ತಿರೋದು ಯಾಕೆ? ಇವರಿಗೆ ರಾಜಕೀಯಕ್ಕೆ ಆಹ್ವಾನ ನೀಡಿದವರ್ಯಾರು ಎಂದು ಯೋಚನೆ ಮಾಡುತ್ತಿದ್ದೀರಾ? ಮತ್ಯಾರು ಅಲ್ಲ, ನಮ್ಮ ರೆಬಲ್ ಸ್ಟಾರ್ ಅಂಬರೀಶ್ ಅವರು!

ಸೋಮವಾರ ಬೆಂಗಳೂರಿನಲ್ಲಿ ನಟಿ ರಾಗಿಣಿ ಅಭಿನಯದ ಹೊಸ ಸಿನಿಮಾ ದಿ ಟೆರರಿಸ್ಟ್‌ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಸಮಾರಂಭದಲ್ಲಿ ರೆಬೆಲ್‌ ಸ್ಟಾರ್‌ ಅಂಬರೀಷ್‌ ಭಾಗವಹಿಸಿದ್ದರು. ಚಿತ್ರದ ಫಸ್ಟ್‌ ಲುಕ್‌ನ ಬಿಡುಗಡೆ ಮಾಡಿದ ಅಂಬರೀಶ್, ನಂತರ ರಾಗಿಣಿ ಅವರ ಮಾತಿನ ಶೈಲಿಯನ್ನು ಕಂಡು "ಇಷ್ಟು ಚೆನ್ನಾಗಿ ಮಾತಾಡ್ತೀರಾ, ಎಲೆಕ್ಷನ್ ಗೆ ಯಾಕೆ ನಿಲ್ಬಾರ್ದು?" ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಗಿಣಿ, "ನೀವು ಕರೆದರೆ ಇಲ್ಲಾ ಅನ್ನಲ್ಲ, ಖಂಡಿತಾ ಎಲೆಕ್ಷನ್ ಗೆ ನಿಲ್ತೀನಿ" ಎನ್ನುವ ಮೂಲಕ ರಾಜಕೀಯಕ್ಕೆ ಬರುವ ಬಯಕೆಯನ್ನು ವ್ಯಕ್ತಪಡಿಸಿದ್ದರು. 

ನಂತರ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ರಾಗಿಣಿ, ಅಂಬರೀಶ್ ಅವರ ಮಾತನ್ನು ತಳ್ಳಿಹಾಕುವುದಿಲ್ಲ. ಅವರು ಏನೇ ಹೇಳಿದರೂ ನಾವು ಕೇಳಬೇಕು ಎಂದು ಹೇಳಿದರಲ್ಲದೆ ರಾಜಕೀಯಕ್ಕೆ ಬರುವ ಆಸಕ್ತಿ ಇದೆ. ಆದರೆ ಚುನಾವಣೆಗೆ ನಿಲ್ಲುವ ಬಗ್ಗೆ ಇದುವರೆಗೂ ಆಲೋಚಿಸಿಲ್ಲ ಎಂದರು. ಆದರೆ ರಾಗಿಣಿ ರಾಜಕೀಯ ಪ್ರವೇಶ ಮಾಡ್ತಾರಾ? ಇಲ್ಲವಾ ಎಂಬುದು ಲೋಕಸಭೆ ಚುನಾವಣೆ ವೇಳೆಗೆ ತಿಳಿಯಲಿದೆ. 

Trending News