ಇಂಡಸ್ಟ್ರಿಯಲ್ಲಿ ವಿಚ್ಚೇದನ ಸುದ್ದಿಗಳು ಬಾರೀ ಸದ್ದು ಮಾಡುತ್ತಿವೆ.. ಇದೀಗ ಮತ್ತೊಂದು ಜೋಡಿ ಡಿವೋರ್ಸ್ ಪಡೆಯಲು ಮುಂದಾಗಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.. ಕಾರಣ ಅವರು ಇನ್‌ಸ್ಟಾಗ್ರಾಂನಿಂದ ಪೋಟೋ ಮತ್ತು ತಮ್ಮ ಹೆಸರಿನ ಮುಂದಿನ ಉಪನಾಮವನ್ನು ತೆಗೆದು ಹಾಕಿದ್ದಾರೆ.. ಹಾಗಾದ್ರೆ ಯಾರು ಆ ನಟಿ?
ಆ ನಟಿ ಬೇರಾರೂ ಅಲ್ಲ.. ನೀತಿ ಟೇಲರ್. ಇವರು ಮೇಮ್ ವಯಸುಕು ವಾಚಂ ಸಿನಿಮಾದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ತನಿಶ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ತ್ರಿನಾಥ ರಾವ್ ನಕ್ಕಿನ ನಿರ್ದೇಶನ ಮಾಡಿದ್ದಾರೆ. ರೊಮ್ಯಾಂಟಿಕ್ ಲವ್ ಸ್ಟೋರಿಯಾಗಿ ತೆರೆಕಂಡ ಈ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ಅದರ ನಂತರ, ನೀತಿ ಟೇಲರ್ ತೆಲುಗಿನಲ್ಲಿ ಅನೇಕ ಚಿತ್ರಗಳನ್ನು ಮಾಡಿದರು. ಆದರೆ ಕೆಲವು ಸಿನಿಮಾಗಳ ಪ್ಲಾಪ್ ನಂತರ ಅವರಿಗೆ ಅವಕಾಶಗಳು ಕಡಿಮೆಯಾದವು..
ಸದ್ಯ ನಟಿ ವೆಬ್ ಶೋಗಳನ್ನು ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.. ಅಲ್ಲದೇ ನೀತಿ ಈಗಾಗಲೇ ಹಲವು ಹಿಂದಿ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.. ಇದೀಗ ಈ ಮುದ್ದಾದ ಹುಡುಗಿಗೆ ಸಂಬಂಧಿಸಿದ ಸುದ್ದಿಯೊಂದು ಬಂದಿದೆ.
ಕರೋನಾ ಸಮಯದಲ್ಲಿ ಎಂದರೇ ಆಗಸ್ಟ್ 13 ರಂದು ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಪರೀಕ್ಷಿತ್ ಅವರನ್ನು ವಿವಾಹವಾದರು. ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಇವರ ಮದುವೆ ನಡೆದಿದೆ. ಮದುವೆಯ ನಂತರ ತನ್ನ ಹೆಸರನ್ನು ನೀತಿ ಭಾವ ಎಂದು ಬದಲಾಯಿಸಿಕೊಂಡಳು. ಆದರೆ ಇತ್ತೀಚೆಗೆ ಈ ಜೋಡಿಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗುತ್ತಿದೆ. ಅವರ ದಾಂಪತ್ಯದಲ್ಲಿ ತೊಂದಗಳಿವೆ ಎಂದು ವರದಿಗಳಿವೆ. ನೀತಿ ಟೇಲರ್ ಬಹಳ ದಿನಗಳಿಂದ ಪತಿಯಿಂದ ದೂರವಾಗಿದ್ದರು ಎಂದು ತಿಳಿದುಬಂದಿದೆ.
ಇತ್ತೀಚೆಗೆ, ನೀತಿ ಟೇಲರ್ ತನ್ನ ಪತಿಯ ಕುಟುಂಬದ ಹೆಸರನ್ನು Instagram ನಿಂದ ತೆಗೆದುಹಾಕಿದ್ದಾರೆ. ಎಂದರೇ ನೀತಿ ಭಾವಾ ತನ್ನ ಹೆಸರನ್ನು ನೀತಿ ಟೇಲರ್ ಎಂದು ಬದಲಾಯಿಸಿಕೊಂಡಿದ್ದಾರೆ.. ವಿಚ್ಛೇದನದ ಕಾರಣದಿಂದ ಆಕೆ ತನ್ನ ಪತಿಯ ಕುಟುಂಬದ ಹೆಸರು ಮತ್ತು ಫೋಟೋಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಿಂದ ತೆಗೆದುಹಾಕಿದ್ದಾಳೆ ಎಂಬ ವದಂತಿಗಳು ದಟ್ಟವಾಗಿವೆ.
ವಿಚ್ಛೇದನದ ಸುದ್ದಿಗೆ ನೀತಿ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಏನಾದರೂ ಘಟನೆ ಸಂಭವಿಸಿದಾಗ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ... ಆಕೆಯ ಪ್ರತಿಕ್ರಿಯೆ ಪ್ರಕಾರ ವಿಚ್ಛೇದನದ ಸುದ್ದಿ ನಿಜವಾಗಿದೆ ಎನ್ನಲಾಗುತ್ತಿದೆ... ಇದು ಅಧಿಕೃತವಾಗಿ ಘೋಷಣೆಯಾಗುವವರೆಗೂ ಇದು ಎಷ್ಟರಮಟ್ಟಿಗೆ ಸತ್ಯ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.