ವಿಚ್ಛೇದನ ಪಡೆದ 2 ತಿಂಗಳಲ್ಲೇ ಹಾರ್ದಿಕ್ ಪಾಂಡ್ಯನನ್ನು ಮರೆತ ನತಾಶ! ಹೊಸ ಸಂಗಾತಿ ಜೊತೆ ಬಿಂದಾಸ್ ಸುತ್ತಾಟ!!

Actress natasha stankovic: ಬಾಲಿವುಡ್ ನಟಿ ಮತ್ತು ಮಾಡೆಲ್ ನತಾಸಾ ಸ್ಟಾಂಕೋವಿಕ್ ತನ್ನ ಪತಿ ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರಿಂದ ಬೇರ್ಪಟ್ಟಿದ್ದಾರೆ. ಬಳಿಕ ನಟಿ ತನ್ನ ಮಗ ಅಗಸ್ತ್ಯನೊಂದಿಗೆ ತನ್ನ ತವರು ಸರ್ಬಿಯಾಕ್ಕೆ ಹೋಗಿದ್ದರು..

Written by - Savita M B | Last Updated : Sep 12, 2024, 04:37 PM IST
  • ನತಾಶಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ
  • ನತಾಶಾ ಸ್ಟಾಂಕೋವಿಕ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವಿಚ್ಛೇದನ ಪಡೆದ 2 ತಿಂಗಳಲ್ಲೇ ಹಾರ್ದಿಕ್ ಪಾಂಡ್ಯನನ್ನು ಮರೆತ ನತಾಶ! ಹೊಸ ಸಂಗಾತಿ ಜೊತೆ ಬಿಂದಾಸ್ ಸುತ್ತಾಟ!! title=

natasha stankovic-Hardik Pandya: ನತಾಶಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅಪ್‌ಡೇಟ್‌ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ಮಧ್ಯೆ, ನತಾಶಾ ಸ್ಟಾಂಕೋವಿಕ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

 ಈ ವೀಡಿಯೊದಲ್ಲಿ ನತಾಶಾ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಜೊತೆ ಕಾಣಿಸಿಕೊಂಡಿದ್ದಾಳೆ.. ಇಬ್ಬರೂ ಒಟ್ಟಿಗೆ ಓಡಾಡುವುದನ್ನು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.. ಅಲ್ಲದೇ ನಟಿಯನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ-ದೀಪಿಕಾ ಅಂತೆ ಕಣ್ಣು.. ರಣವೀರ್‌ನಂತೆ ತುಟಿ... ಇಷ್ಟು ಮುದ್ದಾಗಿದ್ದಾಳಾ ದೀಪಿಕಾ ಪಟುಕೋಣೆಯ ಮಗಳು! AI ಫೋಟೋ ವೈರಲ್‌

 ವಿಚ್ಛೇದನದ ನಂತರ ಹಾರ್ದಿಕ್ ಪಾಂಡ್ಯ ಅವರ ಹೆಸರು ಸಿಂಗರ್ ಜಾಸ್ಮಿನ್ ವಾಲಿಯಾ ಅವರೊಂದಿಗೆ ತಳುಕು ಹಾಕಿಕೊಂಡಿತ್ತು.. ನತಾಶಾ ಕೂಡ ಈಗ ಹಾರ್ದಿಕ್ ಅವರನ್ನು ಮರೆತು ತನ್ನ ಜೀವನದಲ್ಲಿ ಮುನ್ನಡೆಯುತ್ತಿದ್ದಾರೆ ಎನ್ನುವಂತಹ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.  

ಇದನ್ನೂ ಓದಿ-Video: ಗಣಪತಿ ವಿಸರ್ಜನೆಯ ವೇಳೆ ಸಲ್ಮಾನ್‌ ಖಾನ್‌ ಮಾಡಿದ್ದೇನು ಗೊತ್ತಾ..? ವಿಡಿಯೋ ನೋಡಿ ಶಾಕ್‌ ಆಗ್ತೀರ!

ಈ ಹಿಂದೆ ನತಾಶಾ ಸ್ಟಾಂಕೋವಿಕ್ ಮತ್ತು ಅಲೆಕ್ಸಾಂಡರ್ ಅಲೆಕ್ಸ್ ಅವರ ಸಂಬಂಧದ ಸುದ್ದಿ ಕೂಡ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ಇವೆಲ್ಲವೂ ಕೇವಲ ವದಂತಿಗಳು ಎಂದು ಸಾಬೀತಾಯಿತು. ಪ್ರಸ್ತುತ, ನತಾಶಾ ಸ್ಟಾಂಕೋವಿಕ್ ಅವರ ಇತ್ತೀಚಿನ ವೀಡಿಯೊ ಮತ್ತೇ ವದಂತಿಗಳಿಗೆ ಪುಷ್ಟಿ ನೀಡುತ್ತಿದೆ.. 

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ತಕ್ಷಣ ಬಳಕೆದಾರರು ನತಾಶಾ ಸ್ಟಾಂಕೋವಿಕ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಬಳಕೆದಾರರು ವೀಡಿಯೊಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ಮೇಡಮ್ 2 ತಿಂಗಳೊಳಗೆ ಹೊಸ ಪಾರ್ಟನರ್‌ ಕಂಡುಕೊಂಡಿದ್ದಾರೆ ಎಂದು ಟ್ರೋಲ್‌ ಮಾಡುತ್ತಿದ್ದಾರೆ.. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News