ಕಾಮಿಡಿ ಅಂದ್ರೆ ಲೀಲಾವತಿಗೆ ಅಚ್ಚುಮೆಚ್ಚು: ಆದ್ರೇ ನಟಿಗೆ ಸಿಕ್ಕಿದೆಲ್ಲಾ ಕಣ್ಣೀರಿನ ರೋಲ್!

Actress Leelavathi: ಚಂದನವನದ ಹಿರಿಯ ನಟಿ ಲೀಲಾವತಿ ರಂಗಭೂಮಿಯಲ್ಲಿ ಗುರ್ತಿಸಿಕೊಂಡು ಬಳಿಕ ಚಿತ್ರರಂಗಕ್ಕೆ ಬಂದವರು, ಇವರಿಗೆ ಹಾಸ್ಯದ ಪಾತ್ರಗಳೂ ಇಷ್ಟವಿದ್ದರೂ, ಆದರೆ ಈ ನಟಿಗೆ ಸಿಕ್ಕಿದ್ದೆಲ್ಲಾ ಕಣ್ಣೀರು ಹಾಕುವ ಪಾತ್ರಗಳೇ. ಇಲ್ಲಿದೆ ಸಂಪೂರ್ಣ ಮಾಹಿತಿ.

Written by - Zee Kannada News Desk | Last Updated : Dec 9, 2023, 12:11 PM IST
  • 1937ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದವರು, ಈಕೆ ತಮ್ಮ 6 ವರ್ಷ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡು, ಜೀವನಕ್ಕಾಗಿ ಮೈಸೂರಿಗೆ ಬರುವಂತಾಯಿತು.
  • ಮಹಾಲಿಂಗ ಭಾಗವತರ್ ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮಾ ಕಂಪೆನಿಯಲ್ಲಿ ಸೇರಿಕೊಂಡಿದ್ದವರು, ಮುಂದೆ 1958ರಲ್ಲಿ ಸುಬ್ಬಯ್ಯ ನಾಯ್ಡು 'ಭಕ್ತ ಪ್ರಹ್ಲಾದ', ಮಾಂಗಲ್ಯ ಯೋಗ, ಧರ್ಮ ವಿಜಯ, ರಣಧೀರ ಕಂಠೀರವ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು.
  • ಅಂದಾಜು 500ಕ್ಕೂಅಧಿಕ ಸಿನಿಮಾಗಳಲ್ಲಿ ಲೀಲಾವತಿ ಬಣ್ಣ ಹಚ್ಚಿದವರು, ಕನ್ನಡ ಮಾತ್ರವಲ್ಲದೇ ತೆಲುಗು, ಮಲಯಾಳಂ, ತುಳು ಸಿನಿಮಾಗಳಲ್ಲೂ ಮಿಂಚಿ ಮೋಡಿ ಮಾಡಿದ್ದರು.
ಕಾಮಿಡಿ ಅಂದ್ರೆ ಲೀಲಾವತಿಗೆ ಅಚ್ಚುಮೆಚ್ಚು: ಆದ್ರೇ ನಟಿಗೆ ಸಿಕ್ಕಿದೆಲ್ಲಾ ಕಣ್ಣೀರಿನ ರೋಲ್! title=

Actress Leelavathi Movies: ಹಿರಿಯ ನಟಿ ಲೀಲಾವತಿ, ಒಂದು ಕಾಲದಲ್ಲಿ ನಾಟಕಗಳಲ್ಲಿ ನಟಿಸಿ, ರಂಗಭೂಮಿಯಲ್ಲಿ ಗುರ್ತಿಸಿಕೊಂಡವರು ಮುಂದೆ ಚಿತ್ರಗಳಲ್ಲಿ ಅಭಿನಯಸಿದರು. 1937ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದವರು, ಈಕೆ ತಮ್ಮ 6 ವರ್ಷ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡು, ಜೀವನಕ್ಕಾಗಿ ಮೈಸೂರಿಗೆ ಬರುವಂತಾಯಿತು. ಒಪ್ಪೊತ್ತಿನ ಊಟಕ್ಕಾಗಿ ಪಾತ್ರೆ ತೊಳೆದು ಜೀವನ ಸಾಗಿಸಿದ್ದೂ ಉಂಟು. ಶಂಕರ್ ಸಿಂಗ್ ಅವರ 'ನಾಗಕನ್ನಿಕಾ' ಚಿತ್ರದಲ್ಲಿ ಮೊದಲು ಪುಟ್ಟ ಪಾತ್ರದಲ್ಲಿ ನಟಿಸಿದ್ದರು. 

ಮಹಾಲಿಂಗ ಭಾಗವತರ್ ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮಾ ಕಂಪೆನಿಯಲ್ಲಿ ಸೇರಿಕೊಂಡಿದ್ದವರು, ಮುಂದೆ 1958ರಲ್ಲಿ ಸುಬ್ಬಯ್ಯ ನಾಯ್ಡು 'ಭಕ್ತ ಪ್ರಹ್ಲಾದ', ಮಾಂಗಲ್ಯ ಯೋಗ, ಧರ್ಮ ವಿಜಯ, ರಣಧೀರ ಕಂಠೀರವ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. 'ರಾಣಿ ಹೊನ್ನಮ್ಮ' ಲೀಲಾವತಿಯವರು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾವಾಗಿದ್ದು, 'ಸಂತ ತುಕಾರಾಂ', 'ಕಣ್ತೆರೆದು ನೋಡು', 'ಕೈವಾರ ಮಹಾತ್ಮೆ', 'ಗಾಳಿ ಗೋಪುರ', 'ಕನ್ಯಾರತ್ನ', 'ಕುಲವಧು', 'ವೀರ ಕೇಸರಿ', 'ಮನ ಮೆಚ್ಚಿದ ಮಡದಿ' ಹೀಗೆ ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಾ ಹೋದರು. 

ಇದನ್ನೂ ಓದಿ: ಕನ್ನಡದ ಲೆಜೆಂಡರಿ ನಟಿ ಲೀಲಾವತಿ ಬಗ್ಗೆ ನಿಮಗೆಷ್ಟು ಗೊತ್ತು..?

ಬಳಿಕ ನಟಿ ಲೀಲಾವತಿ ಅಣ್ಣಾವ್ರ ಜೊತೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಾಯಕಿಯಾಗಿ, ಮಗಳಾಗಿ(ಭೂದಾನ) ಸಹೋದರಿಯಾಗಿ(ವಾತ್ಸಲ್ಯ) ಅತ್ತಿಗೆಯಾಗಿ(ಪ್ರೇಮಮಯಿ) ತಮ್ಮನ ಮಡದಿಯಾಗಿ (ಕಲಿತರು ಹೆಣ್ಣೆ), ಅತ್ತೆಯಾಗಿ (ವಸಂತ ಗೀತ, ನಾ ನಿನ್ನ ಮರೆಯಲಾರೆ, ಜ್ವಾಲಾಮುಖಿ) ನಟಿಸಿದ್ದು ವಿಶೇಷ. ಖ್ಯಾತ ನಟನ ಜೊತೆ ಇಷ್ಟು ವಿಭಿನ್ನವಾದ ಪಾತ್ರಗಳಲ್ಲಿ ನಟಿಸುವ ಅವಕಾಶ ಲೀಲಾವತಿ ಅವರಿಗೆ ಮಾತ್ರ ಸಿಕ್ಕಿತ್ತು. ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ ಜೋಡಿ ಸೂಪರ್ ಹಿಟ್ ಆಗಿತ್ತು. 'ವೀರ ಕೇಸರಿ', 'ಭಕ್ತ ಕುಂಬಾರ', 'ಸಿಪಾಯಿ ರಾಮು', 'ರಣಧೀರ ಕಂಠೀರವ' ಸೇರಿದಂತೆ ಏಳೆಂಟು ಸಿನಿಮಾಗಳಲ್ಲಿ ಇಬ್ಬರು ಒಟ್ಟಾಗಿ ನಟಿಸಿದ್ದರು. 

ಅಂದಾಜು 500ಕ್ಕೂಅಧಿಕ ಸಿನಿಮಾಗಳಲ್ಲಿ ಲೀಲಾವತಿ ಬಣ್ಣ ಹಚ್ಚಿದವರು, ಕನ್ನಡ ಮಾತ್ರವಲ್ಲದೇ ತೆಲುಗು, ಮಲಯಾಳಂ, ತುಳು ಸಿನಿಮಾಗಳಲ್ಲೂ ಮಿಂಚಿ ಮೋಡಿ ಮಾಡಿದ್ದರು. ಚಿತ್ರವೊಂದಕ್ಕೆ 1500 ರೂ. ಸಂಭಾವನೆ ಪಡೆಯುವವರೆಗೂ ಲೀಲಾವತಿ ಸಾಕಷ್ಟು ಕಷ್ಟಗಳನ್ನು ಎದುರಿಸುವಂತಾಯಿತು. ಸಹಜ ಅಭಿನಯದಿಂದ ಲೀಲಾವತಿ ಮನೆ ಮಾತಾಗಿದ್ದರು. ಪ್ರಿಯತಮೆಯಾಗಿ, ಮಡದಿಯಾಗಿ, ತಾಯಿಯಾಗಿ, ಸಹೋದರಿಯಾಗಿ, ಅತ್ತೆಯಾಗಿ, ಅಜ್ಜಿಯಾಗಿ ಹೀಗೆ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿ ಲೀಲಾವತಿ ಗೆದ್ದರು. ಅಂತಹ ಪಾತ್ರಗಳು ಅವರನ್ನು ಅರಸಿ ಹೋಗಿದ್ದು ವಿಶೇಷ. ಕಾಮಿಡಿ ಅಂದರೆ ಲೀಲಾವತಿ ಅವರಿಗೆ ಬಹಳ ಇಷ್ಟವಾಗಿತ್ತು. ಆದರೆ ಬಹುತೇಕ ಸಿನಿಮಾಗಳಲ್ಲಿ ಕಣ್ಣೀರಿನ ಪಾತ್ರಗಳೇ ಸಿಕ್ಕಿತ್ತು. 

ಇದನ್ನೂ ಓದಿ: Leelavathi: ಹಿರಿಯ ನಟಿ ಲೀಲಾವತಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

60, 70ರ ದಶಕದಲ್ಲಿ ಲೀಲಾವತಿ ಅವರ ಕ್ರೇಜ್ ಹೇಗಿತ್ತು ಅಂದ್ರೆ ನಾಯಕ ನಟರಿಗಿಂತ ಎರಡರಷ್ಟು ಸಂಭಾವನೆ ಪಡೆಯುವ ಮಟ್ಟಕ್ಕೆ ಬೆಳೆದರು. 'ಭಕ್ತ ಕುಂಬಾರ' ಚಿತ್ರದಲ್ಲಿ ಗೋರನ ಮಡದಿಯಾಗಿ, 'ಗೆಜ್ಜೆ ಪೂಜೆ' ಚಿತ್ರದಲ್ಲಿ ನಾಯಕಿಯ ತಾಯಿಯಾಗಿ, 'ನಾಗರಹಾವು' ಚಿತ್ರದಲ್ಲಿ ದೇವ್ರೇ ದೇವ್ರೇ ಎನ್ನುತ್ತ ರಾಮಾಚಾರಿ ಕಾಟಗಳನ್ನೆಲ್ಲಾ ಸಹಿಸಿಕೊಳ್ಳುವ ತುಂಗಮ್ಮನಾಗಿ, ತಮಿಳಿನ 'ಅವರ್ಗಳ್' ಚಿತ್ರದಲ್ಲಿ ಕ್ರೂರಿ ಮಗನಿಗೆ ಬುದ್ದಿ ಕಲಿಸುವ ತಾಯಿಯಾಗಿ ಲೀಲಾವತಿ ಅಭಿನಯಕ್ಕೆ ಮನಸೋಲದವರಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

 

Trending News