ಭಾವಿ ಪತಿಯ ಫೇಸ್‌ ರಿವಿಲ್‌ ಮಾಡಿದ ಬೃಂದಾವನ ನಟಿ: ಶುಭ ಹಾರೈಸಿದ ಫ್ಯಾನ್ಸ್!

Karthika Nair: ಬಹುಭಾಷಾ ನಟಿ ಕಾರ್ತಿಕಾ ನಾಯರ್‌ ಮೊದಲ ಬಾರಿ ತಮ್ಮ ಭಾವಿ ಪತಿಯ ಮುಖ ಸೋಷಿಯಲ್‌ ಮಿಡಿಯಾದಲ್ಲಿ ರಿವಿಲ್‌ ಮಾಡಿದ್ದಾರೆ. ಹಾಗಾದ್ರೆ ಈಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾದರು ಯಾರ ಜೊತೆ? ಇದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.  

Written by - Zee Kannada News Desk | Last Updated : Nov 15, 2023, 06:19 PM IST
  • ನಟಿ ಕಾರ್ತಿಕಾ ನಾಯರ್‌ ನಟ ದರ್ಶನ್‌ ಅಭಿನಯದ 'ಬೃಂದಾವನ' ಸಿನಿಮಾದ ಮೂಲಕ ಪರಿಚಯವಾದವರು.
  • ನಟಿ ಕಾರ್ತಿಕಾ, ಸದ್ಯ ಹೋಟೆಲ್ ಉದ್ಯಮದಲ್ಲಿಯೂ ಸಕ್ರಿಯರಾಗಿ ಮುಂದುವರಿದಿದ್ದಾರೆ.
  • ಕಾರ್ತಿಕಾ ಮೊದಲ ಬಾರಿಗೆ ಮದುವೆಯಾಗಲಿರುವ ವ್ಯಕ್ತಿಯ ಮುಖವನ್ನು ಇನ್​ಸ್ಟಾಗ್ರಾಮ್​ ಖಾತೆಯ ಮೂಲಕ ಪರಿಚಯ ಮಾಡಿದ್ದಾರೆ.
ಭಾವಿ ಪತಿಯ ಫೇಸ್‌ ರಿವಿಲ್‌ ಮಾಡಿದ ಬೃಂದಾವನ ನಟಿ: ಶುಭ ಹಾರೈಸಿದ ಫ್ಯಾನ್ಸ್! title=

South Actress Karthika Nair: ನಟಿ ಕಾರ್ತಿಕಾ ನಾಯರ್‌ ಮೂಲತಃ ಮಲಯಾಳಿ  ಕುಟುಂಬದವರಾಗಿದ್ದು ಸ್ಯಾಂಡಲ್‌ವುಡ್‌ನಲ್ಲಿ ನಟ ದರ್ಶನ್‌ ಅಭಿನಯದ 'ಬೃಂದಾವನ' ಸಿನಿಮಾದ ಮೂಲಕ ಪರಿಚಯವಾದವರು, ಮೊದಲು ಈಕೆ ನಬಣ್ಣ ಹಚ್ಚಿದ್ದು ತೆಲುಗು ಸಿನಿಮಾದಲ್ಲಿ. ಬಳಿಕ ತಮಿಳಿನ 'ಕೋ' ಚಿತ್ರದಲ್ಲಿ ನಟಿಸಿ, ಕಡಿಮೆ ಸಮಯದಲ್ಲಿ ದಕ್ಷಿಣ ಭಾರತದ ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಮಿಂಚಿದರು.  ಹಿಂದಿಯ 'ಆರಂಭ್‌' ಎಂಬ ಸೀರಿಯಲ್‌ನಲ್ಲೂ ಕಾರ್ತಿಕಾ ಬಣ್ಣ ಹಚ್ಚಿದರು.

ಬಳಿಕ ಚಿತ್ರರಂಗದಿಂದ ದೂರವಾಗುವ ನಿರ್ಧಾರ ತೆಗೆದುಕೊಂಡು ದೂರವೇ ಉಳಿದ ನಟಿ ಕಾರ್ತಿಕಾ, ಸದ್ಯ ಹೋಟೆಲ್ ಉದ್ಯಮದಲ್ಲಿಯೂ ಸಕ್ರಿಯರಾಗಿ ಮುಂದುವರಿದಿದ್ದಾರೆ.ಕೇರಳದ ಪ್ರತಿಷ್ಠಿತ ಹೋಟೆಲ್‌ವೊಂದಕ್ಕೆ ಅವರು ನಿರ್ದೇಶಕಿಯಾಗಿದ್ದು, ಹೋಟೆಲ್ ಉದ್ಯಮದ ಮೇಲೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಈಕೆ ಕಳೆದ ತಿಂಗಳು  ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆದರೆ ಭಾವಿ ಪತಿಯ ಫೋಟೋಗಳನ್ನು ಶೇರ್​ ಮಾಡಿದ್ದರೂ ಸಹ ಮುಖ ರಿವೀಲ್​ ಮಾಡಿರಲಿಲ್ಲ. 

 
 
 
 

 
 
 
 
 
 
 
 
 
 
 

A post shared by Karthika Nair (@karthika_nair9)

ಇದನ್ನು ಓದಿ: 'ಕೈವ' ಚಿತ್ರಕ್ಕೂ ಗಂಗಾರಾಮ್ ಕಟ್ಟಡ ಕುಸಿತದ ಘಟನೆಗೂ ಇದೇ ಒಂದು ಲಿಂಕ್!‌ ಹಾಗಾದ್ರೆ ಆ ಕನೆಕ್ಷನ್‌ ಏನು?

ಇದೀಗ, ಮೊದಲ ಬಾರಿಗೆ  ಮದುವೆಯಾಗಲಿರುವ ವ್ಯಕ್ತಿಯ ಮುಖವನ್ನು ಇನ್​ಸ್ಟಾಗ್ರಾಮ್​  ಖಾತೆಯ ಮೂಲಕ  ಪರಿಚಯಿಸಿದ್ದು, ರೋಹಿತ್ ಮೆನನ್ ಎಂಬ ವ್ಯಕ್ತಿಯನ್ನು ಮದುವೆಯಾಗುವುದಾಗಿ ಕಾರ್ತಿಕಾ ಹೇಳಿದ್ದಾರೆ. ತಮ್ಮ ನಿಶ್ಚಿತಾರ್ಥದ ಕೆಲವು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಮುಖ ತೋರಿಸಿದರೂ, ಭಾವಿ ಪತಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿಲ್ಲ.  

ನಟಿ ಕಾರ್ತಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳಿಗೆ ಅಭಿಮಾನಿಗಳು ಕಮೆಂಟ್‌ ವಿಭಾಗದಲ್ಲಿ ಶುಭಕೋರಿದ್ದಾರೆ. ಇನ್ನು ಕೆಲವರು ʼಸುಂದರವಾದ ಜೋಡಿʼ, ಎಂದು ಬರೆದಿದ್ದಾರೆ. ಇನ್ನು ಹಲವು ಅಭಿಮಾನಿಗಳು ಹಾರ್ಟ್‌ ಸಿಂಬಲ್‌ ಹಾಕಿದ್ದಾರೆ.

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News