ರಮೇಶ್ ಅರವಿಂದ್ ಮಗಳು ನಿಹಾರಿಕಾ ಮದುವೆ ಫಿಕ್ಸ್ : ವರ ಯಾರು ಗೊತ್ತಾ?

ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್ ಮಗಳ ಮದವೆ ಡಿ. 28ಕ್ಕೆ ನಡೆಯಲಿದೆ. ಆರತಕ್ಷತೆ ಜನವರಿ 2ನೇ ವಾರದಲ್ಲಿ ನೆರವೇರಲಿದೆ. 

Written by - Zee Kannada News Desk | Last Updated : Dec 25, 2020, 01:54 PM IST
  • ರಮೇಶ್ ಅರವಿಂದ್ ಪುತ್ರಿ ನಿಹಾರಿಕಾಗೆ ಕಂಕಣ ಭಾಗ್ಯ
  • ಡಿ. 28ರಂದು ನೆರವೇರಲಿರುವ ಮದುವೆ ಸಮಾರಂಭ
  • ಜನವರಿ 2ನೇ ವಾರದಲ್ಲಿ ಆರತಕ್ಷತೆ ಕಾರ್ಯಕ್ರಮ
ರಮೇಶ್ ಅರವಿಂದ್ ಮಗಳು ನಿಹಾರಿಕಾ ಮದುವೆ ಫಿಕ್ಸ್ : ವರ ಯಾರು ಗೊತ್ತಾ? title=
ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮದುವೆ ನಿಶ್ಚಯ(file photoe)

ಬೆಂಗಳೂರು : ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್ (Ramesh Aravind) ಮನೆಯಲ್ಲಿ ಮದುವೆ ಸಂಭ್ರಮ ಕಳೆಕಟ್ಟಿದೆ.  ರಮೇಶ್ ಅರವಿಂದ್ ಮತ್ತು ಅರ್ಚನಾ ದಂಪತಿಯ ಪುತ್ರಿ ನಿಹಾರಿಕಾ  ಮದುವೆ ( Niharika wedding) ಡಿ. 28ಕ್ಕೆನಿಗದಿಯಾಗಿದೆ. ಪುತ್ರಿಯ ಮದುವೆ ಕಾರ್ಯದಲ್ಲಿ ರಮೇಶ್  ಅರವಿಂದ್ ಫುಲ್ ಬ್ಯುಸಿಯಾಗಿದ್ದಾರೆ.

ನಿಹಾರಿಕಾ ವರ ಯಾರು? ಏನು ಮಾಡುತ್ತಿದ್ದಾರೆ?
ರಮೇಶ್ ಅರವಿಂದ್ (Ramesh Aravind) ಪುತ್ರಿ ವಿವಾಹ ಅಂದಾಕ್ಷಣ ಮೂಡುವ ಪ್ರಶ್ನೆ ವರ ಯಾರು ಅನ್ನುವುದು. ನಿಹಾರಿಕಾ ಕೈಹಿಡಿಯಲಿರುವ ಹುಡುಗನ ಹೆಸರು ಅಕ್ಷಯ್. ಅಕ್ಷಯ್ ಸಿನೆಮಾ ರಂಗಕ್ಕೆ ಸಂಬಂಧಪಟ್ಟವರಲ್ಲ. ನಿಹಾರಿಕಾ ಮತ್ತು ಅಕ್ಷಯ್ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡೂ ಕುಟುಂಬದವರು ಸೇರಿ ಈ ಮದುವೆ ನಿಶ್ಚಯಿಸಿದ್ದಾರೆ.

ALSO READ : ಬಿಡುಗಡೆಗೂ ಮುನ್ನ ವಿವಾದದಲ್ಲಿ ಸಿಲುಕಿದ Coolie No 

ಮದುವೆ ಎಲ್ಲಿ ಮತ್ತು ಹೇಗೆ ನಡೆಯಲಿದೆ?
ದೇಶಾದ್ಯಂತ ಕೊರೋನಾ (Covid 19) ಭೀತಿ ಇನ್ನೂ ಕಡಿಮೆಯಾಗಿಲ್ಲ. ಹೊಸ ಸ್ವರೂಪದ ವೈರಸ್ ನಂತರ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಹಾಗಾಗಿ ಕೋವಿಡ್ ನಿಯಮವನ್ನು ಪಾಲಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೋವಿಡ್ ನಿಯಮವನ್ನು ಪಾಲಿಸಿಯೇ ವಿವಾಹ ನೆರವೇರಿಸಲು ಎರಡೂ ಕುಟುಂಬಗಳು ನಿರ್ಧರಿಸಿವೆ. ಹಾಗಾಗಿ ಮದುವೆ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದು ಸಾಧ್ಯವಿಲ್ಲ. ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. 

ALSO READ:  Rocking Star Yash : ಕೊರೋನ ಭೀತಿ: 'ಸೆಲ್ಫ್‌ ಕ್ವಾರಂಟೈನ್'‌ ಆದ ರಾಕಿಂಗ್ ಸ್ಟಾರ್ ಯಶ್‌..!

ಇನ್ನು ಆರತಕ್ಷತೆ ಕಾರ್ಯಕ್ರಮ ಜನವರಿ 2ನೇ ವಾರದಲ್ಲಿ ನೆರವೇರಿಸಲು ನಿಶ್ಚಯಿಸಲಾಗಿದೆ. ಆರತಕ್ಷತೆ ಸಮಾರಂಭದಲ್ಲಿ ಸಿನಿಮಾ ರಂಗ (Cinema) ಸೇರಿದಂತೆ ಎಲ್ಲಾ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News